ಇದೇ ಮೊದಲು ಪಿಯು ವಿಜ್ಞಾನ, ಗಣಿತ ಕನ್ನಡ ಪುಸ್ತಕ ಮಾರುಕಟ್ಟೆಗೆ

Kannadaprabha News   | Asianet News
Published : Aug 20, 2020, 09:07 AM IST
ಇದೇ ಮೊದಲು ಪಿಯು ವಿಜ್ಞಾನ, ಗಣಿತ ಕನ್ನಡ ಪುಸ್ತಕ ಮಾರುಕಟ್ಟೆಗೆ

ಸಾರಾಂಶ

ಇದೇ ಮೊದಲ ಬಾರಿಗೆ ಪಿಯುಸಿ ವಿಜ್ಞಾನ ಹಾಗೂ ಗಣಿತ ಪುಸ್ತಕಗಳನ್ನು ಮಾರುಕಟ್ಟೆಗೆ ಬಿಡಲಾಗಿದ್ದು, ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿದೆ.

ಬೆಂಗಳೂರು (ಆ.20): ಕನ್ನಡಕ್ಕೆ ಅನುವಾದಗೊಂಡಿರುವ ದ್ವಿತೀಯ ಪಿಯುಸಿಯ ಎನ್‌ಸಿಆರ್‌ಟಿ ವಿಜ್ಞಾನ ಮತ್ತು ಗಣಿತ ವಿಭಾಗದ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇನ್ಮುಂದೆ ಮಾರುಕಟ್ಟೆಯಲ್ಲೂ ಲಭ್ಯವಾಗಲಿವೆ.

ಸರ್ಕಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು 2008-09ರಲ್ಲೇ ಕನ್ನಡಕ್ಕೆ ಅನುವಾದಿಸಿ ಪುಸ್ತಕ ಮುದ್ರಣ ಮತ್ತು ಸರಬರಾಜು ಏಜೆನ್ಸಿಗಳ ಮೂಲಕ ನೇರವಾಗಿ ಶಾಲೆಗಳಿಗೆ ಕಳುಹಿಸಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿತ್ತು. ಇದೀಗ ಈ ಪುಸ್ತಕಗಳನ್ನು ಮಾರುಕಟ್ಟೆಗೂ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ...

ಇದರಿಂದ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಶಾಸ್ತ್ರ ಪುಸ್ತಕಗಳು ಇನ್ಮುಂದೆ ಮಾರುಕಟ್ಟೆಯಲ್ಲೂ ಲಭ್ಯವಾಗಲಿವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗುರುವಾರ ಅಧಿಕೃತವಾಗಿ ಈ ಪುಸ್ತಕಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ.

PREV
click me!

Recommended Stories

ಮಹಿಳೆಯರ ಕಲಾಕೃತಿಯೂ ಸುರಕ್ಷಿತ ಅಲ್ಲ: ಬಾಲಕ ಮಾಡಿದ್ದೇನು? ಮತ್ತೆ ವೈರಲ್ ಆಗಿ ಚರ್ಚೆಗೆ ಕಾರಣವಾಯ್ತು ವೀಡಿಯೋ
ಪರೀಕ್ಷೆಗೂ ಮುನ್ನ ದ್ವಿತೀಯ PUC ಮತ್ತು SSLC ಪ್ರಶ್ನೆಪತ್ರಿಕೆ ಲೀಕ್ ಆಯ್ತಾ? ಹಣಕ್ಕೆ ಬೇಡಿಕೆ ಇಟ್ಟು ಇನ್ಸ್ಟಾದಲ್ಲಿ ಪೋಸ್ಟ್!