ಮಾಸಿಕ 15,000/- ರೂ. ಸಂಭಾವನೆಯೊಂದಿಗೆ ತರಬೇತಿ; ಅರ್ಜಿ ಅರ್ಜಿ ಆಹ್ವಾನ

Published : Jun 21, 2019, 09:16 PM IST
ಮಾಸಿಕ 15,000/- ರೂ. ಸಂಭಾವನೆಯೊಂದಿಗೆ ತರಬೇತಿ; ಅರ್ಜಿ ಅರ್ಜಿ ಆಹ್ವಾನ

ಸಾರಾಂಶ

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ; ಪದವಿ ಅಥವಾ ಸ್ನಾತ್ನಕೋತ್ತರ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಆಯ್ಕೆಯಾದವರಿಗೆ ಮಾಸಿಕ 15,000/- ರೂ. ಸಂಭಾವನೆ  

ಮೈಸೂರು (ಜೂ.21): ಮೈಸೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಪ್ರತಿಕೋದ್ಯಮ ಪದವಿ ಅಥವಾ ಸ್ನಾತ್ನಕೋತ್ತರ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳಿಗೆ 2019-20ನೇ ಸಾಲಿನ ಅಪ್ರೆಂಟಿಸ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ವಿಷಯದಲ್ಲಿ ಪದವಿ/ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತ್ನಕೋತ್ತರ ಪದವಿ ಪಡೆದಿರಬೇಕು. ಅಭ್ಯರ್ಥಿಗಳು ಪಡೆದ ಅಂಕಗಳ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವವರ ವಯೋಮಿತಿ 40 ವರ್ಷ ಮೀರಿರಬಾರದು. ತರಬೇತಿಯು ತಾತ್ಕಾಲಿಕವಾಗಿರುತ್ತದೆ, ಆಯ್ಕೆಯಾದವರಿಗೆ ಮಾಸಿಕ 15,000/- ರೂ. ಸಂಭಾವನೆ ನೀಡಲಾಗುವುದು.

ಇದನ್ನೂ ಓದಿ | 15 ದಿನದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೆಲ್ಸ ಕೊಟ್ಟ ಕ್ಯಾಂಪಸ್‌ ನೇಮಕಾತಿ

ಆಯ್ಕೆಯಾದವರು ಇಲಾಖೆಯ ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 06-07-2019 ಕೊನೆಯ ದಿನವಾಗಿರುತ್ತದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತ್ರಿ ರಸ್ತೆ, ಮೈಸೂರು ದೂರವಾಣಿ ಸಂಖ್ಯೆ: 0821-2423251 ನ್ನು ಸಂಪರ್ಕಿಸಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ವಿನೋದ್ ಚಂದ್ರ ಅವರು ತಿಳಿಸಿದ್ದಾರೆ.

PREV
click me!

Recommended Stories

ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ, ಮಹತ್ವದ ಹೆಜ್ಜೆಗೆ ಸಕಾರಾತ್ಮಕ ಫಲಿತಾಂಶ!
ಐದು ವಿಭಾಗಗಳಲ್ಲಿ ಬೆಂಗಳೂರಿನ ನಯನಾ ಗೋಪಿ ನಂ.1; 7 ವಿಭಾಗಗಳಲ್ಲೂ ಟಾಪ್ 1 ರ್‍ಯಾಂಕ್‌ ಬೆಂಗ್ಳೂರು ಪಾಲು