ಪ್ರಾಣಿ ಫೋಟೋ ನೋಡಿದ್ರೆ ಹೆಚ್ಚುತ್ತೆ ಪ್ರೊಡಕ್ಟಿವಿಟಿ!

By Web DeskFirst Published Jul 27, 2019, 3:34 PM IST
Highlights

ಪ್ರಾಣಿಪ್ರಿಯರಿಗೊಂದು ಸಂತೋಷದ ಸುದ್ದಿ. ಮನಸ್ಸಿಗೆ ಮುದ ನೀಡುವ ಪ್ರಾಣಿಯನ್ನು ಸಾಕುವುದಷ್ಟೇ ಅಲ್ಲ, ಅವುಗಳ ಫೋಟೋ ನೋಡಿದರೂ ಕೆಲಸ ಮಾಡೋ ಸಾಮಾರ್ಥ್ಯ ಹೆಚ್ಚುತ್ತಂತೆ..

ಆಫೀಸಿನಲ್ಲಿ ಪ್ರೊಡಕ್ಟಿವಿಟಿ ಹೆಚ್ಚಲು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸ್ವಸ್ಥವಾಗಿಡಬೇಕು. ಮನಸ್ಸಿನ ಆರೋಗ್ಯವನ್ನು ಕಾಪಾಡಲು ಸರ್ಕಸ್ ಮಾಡಬೇಕು. ಮನಸ್ಸಿನ ಹಿತ ಕಾಯುವ ಹವ್ಯಾಸಗಳಲ್ಲಿ ಪ್ರಾಣಿ ಸಾಗಣೆಯೂ ಒಂದು. ಅಷ್ಟೇ ಅಲ್ಲ, ಪ್ರಾಣಿಗಳ ಫೋಟೋ ನೋಡಿದರೂ ಮನಸ್ಸು ಮುದಗೊಂಡು, ಪ್ರೊಡಕ್ಟಿವಿಟಿ ಹೆಚ್ಚುತ್ತಂತೆ. 

ಆಫೀಸಿನಲ್ಲಿ ಚೆನ್ನಾಗಿ ಕೆಲಸ ಮಾಡಬೇಕೆಂದರೆ ಪ್ರಾಣಿಗಳ ಮುದ್ದಾದ ಚಿತ್ರಗಳನ್ನು ನೋಡಬೇಕೆಂದು ಹಿರೋಷಿಮಾ ಯುನಿವರ್ಸಿಟಿ ಅಧ್ಯಯನ ಹೇಳಿದೆ. ನಾಯಿ ಮರಿ, ಪಾಂಡಾ, ಬೆಕ್ಕಿನ ಮರಿಗಳ ಫೋಟೋ ನೋಡುತ್ತಿದ್ದರೆ ಮೂಡ್ ಫ್ರೆಶ್ ಆಗುತ್ತೆ. ಜತೆಗೆ ಕೆಲಸ ಚೆನ್ನಾಗಿ ಮಾಡಲು ಮನಸ್ಸೂ ಸಿದ್ಧವಾಗುತ್ತದೆ. ಈ ಎಲ್ಲದರ ಫಲವಾಗಿ ಪ್ರೊಡಕ್ಟಿವಿಟಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಇವನ್ನು ನೋಡುತ್ತಿದ್ದರೆ ಏಕಾಗ್ರತೆಯೂ ಜೊತೆಗೆ ಕಾರ್ಯಕ್ಷಮತೆ ಹೆಚ್ಚುತ್ತದೆ.

ಪ್ರಾಣಿ ಪ್ರಿಯರಿಗೊಂದು ಪ್ರಿಯ ಕೆರಿಯರ್...

ಇದಕ್ಕಾಗಿ ಮೂರು ಬೇರೆ ಬೇರೆ ಗುಂಪಿನ ವಿದ್ಯಾರ್ಥಿಗಳನ್ನು ಬಳಸಲಾಗಿತ್ತು. ಈ ಟಾಸ್ಕ್‌ನಲ್ಲಿ ಎಲ್ಲಾ ಗುಂಪಿಗೂ ಎರಡೂ ಸಲ ಟಾಸ್ಕ್ ನೀಡಲಾಯಿತು. ಒಂದು ಸಲ ಪ್ರಾಣಿ ಫೋಟೋ ನೋಡದೆ ಕೆಲಸ ಮಾಡಲು, ಮತ್ತೊಂದು ಬಾರಿ ಪ್ರಾಣಿಗಳ ಫೋಟೋ ನೋಡಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದರಲ್ಲಿ ಮರಿ ಪ್ರಾಣಿಗಳು ಮತ್ತು ಹಣ್ಣುಗಳ ಫೋಟೋವನ್ನೂ ನೀಡಲಾಗಿತ್ತು. 

ಕೆಲಸದ ಇಂಟರ್‌ವ್ಯೂ ಎಂದರೆ ತಮಾಷೇನಾ?

ಈ ಸಮಯದಲ್ಲಿ ಯಾರು ಪ್ರಾಣಿಗಳನ್ನು ನೋಡಿ ಕೆಲಸ ಮಾಡಿದ್ದಾರೋ ಅವರಲ್ಲಿ ಹೆಚ್ಚು ಮಂದಿ ಏಕಾಗ್ರತೆಯಿಂದ ಮತ್ತು ಆಸಕ್ತಿಯಿಂದ, ಅಲ್ಲದೇ ಹೆಚ್ಚು ಕಾರ್ಯ ಪ್ರವೃತ್ತರಾಗಿದ್ದರು. ಬೇರೆಯವರಲ್ಲಿ ಈ ಆಸಕ್ತಿ ಕಡಿಮೆ ಇತ್ತು.

click me!