ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಒಂದಕ್ಕೂ ಅಧಿಕ ಪದವಿ ಪಡೆಯಲು ಅವಕಾಶ?

By Web DeskFirst Published Jul 22, 2019, 11:44 AM IST
Highlights

ಒಂದೇ ಬಾರಿ ಒಂದಕ್ಕೂ ಅಧಿಕ ಪವದವಿ ಪಡೆಯಲು ಸಿಗುತ್ತಾ ಅವಕಾಶ| ಸಮಿತಿ ರಚಿಸಿದ ಯುಜಿಸಿ| ಅಮಿತಿ ಶಿಫಾರಸ್ಸು ಮಾಡಿದರೆ ಹಲವು ವಿದ್ಯಾರ್ಥಿಗಳಿಗೆ ಸಿಹಿ

ನವದೆಹಲಿ[ಜು.22]: ಒಂದೇ ವಿಶ್ವವಿದ್ಯಾನಿಲಯ ಅಥವಾ ವಿಭಿನ್ನ ವಿಶ್ವವಿದ್ಯಾನಿಲಯಗಳಿಂದ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪದವಿ ಪಡೆಯುವ ಅವಕಾಶ ವಿದ್ಯಾರ್ಥಿಗಳಿಗೆ ಶೀಘ್ರವೇ ಲಭ್ಯವಾಗಲಿದೆ. ಇಂತಹ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ UGC ಸಮಿತಿಯೊಂದನ್ನು ರಚಿಸಿದ್ದು, ವರದಿ ನೀಡುವಂತೆ ಆದೇಶಿಸಿದೆ. 

UGC ಅಧ್ಯಕ್ಷ ಭೂಷಣ್ ಪಟ್ ವರ್ಧನ್ ನೇತೃತ್ವದ ಈ ಸಮಿತಿ ಒಂದೇ ವಿಶ್ವವಿದ್ಯನಿಲಯ ಅಥವಾ ವಿಭಿನ್ನ ವಿಶ್ವವಿದ್ಯಾನಿಲಯಗಳಿಂದ ದೂರ ಶಿಕ್ಷಣ, ಆನ್ ಲೈನ್ ಅಥವಾ ಅರೆಕಾಲಿಕ ತರಗತಿ ಮೂಲಕ ಏಕಕಾಲದಲ್ಲಿ ಒಂದಕ್ಕಿಂತ ಅಧಿಕ ಡಿಗ್ರಿ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲಿದೆ. ಒಂದು ವೇಳೆ ಸಮಿತಿ ತನ್ನ ವರದಿಯಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ನೀಡಬಹುದೆಂದು ಯುಜಿಸಿಗೆ ಶಿಫಾರಸ್ಸು ಮಾಡಿದಲ್ಲಿ ಹಲವರಿಗೆ ಸಿಹಿ ಸಿಗಲಿದೆ.

ಈವರೆಗೂ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಒಂದಕ್ಕೂ ಅಧಿಕ ಪದವಿ ಪಡೆಯುವ ಅವಕಾಶ ನಿಡಲಾಗಿಲ್ಲ. 2012ರಲ್ಲೂ ಯುಜಿಸಿ ಇಂತಹುದೇ ಒಂದು ಸಮಿತಿ ರಚಿಸಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರ- ವಿಮರ್ಶೆ ನಡೆಸಿತ್ತು. ಆದರೆ ಅಂದು ಆ ಸಮಿತಿ ಇದನ್ನು ನಿರಾಕರಿಸಿತ್ತು. 

ಸದ್ಯ ಯುಜಿಸಿ ರಚಿಸಿರುವ ಸಮಿತಿ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು 'ಕಳೆದ ತಿಂಗಳು ಈ ಸಮಿತಿ ರಚಿಸಲಾಗಿದೆ. ಈಗಾಗಲೇ ಎರಡು ಸಭೆ ನಡೆದಿದೆ. ಸದ್ಯ ವಿಭಿನ್ನ ವಿಭಾಗಗಳೊಂದಿಗೆ ವಿಚಾರ ವಿಮರ್ಶೆ ನಡೆಸಿ ಇಂತಹ ವ್ಯವಸ್ಥೆ ತರಲು ಸಾಧ್ಯವಾಗುತ್ತದೆಯೇ ಎಂದು ಮಾತುಕತೆ ನಡೆಸಲಾಗುತ್ತಿದೆ. '

click me!