ಜು.12ಕ್ಕೆ ನಿಗದಿಯಾಗಿದ್ದ ರಾಜ್ಯದ 'ಟಿಇಟಿ ಪರೀಕ್ಷೆ' ಮುಂದೂಡಿಕೆ

By Suvarna News  |  First Published Jul 7, 2020, 9:17 PM IST

ಜು.12ಕ್ಕೆ ನಿಗದಿಯಾಗಿದ್ದ ರಾಜ್ಯದ ' ಟೀಚರ್ ಎಲಿಜಿಬಿಲಿಟಿ ಟೆಸ್ಟ್(ಟಿಇಟಿ)  ಪರೀಕ್ಷೆ ಮುಂದೂಡಿಕೆಯಾಗಿದೆ.


ಬೆಂಗಳೂರು, (ಜುಲೈ.07) : ಜುಲೈ 12ರಂದು ರಾಜ್ಯದ ಶಿಕ್ಷಕರಿಗಾಗಿ ನಡೆಯಬೇಕಿದ್ದಂತ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪರೀಕ್ಷೆಯನ್ನು ಮುಂದೂಡಲಾಗಿದೆ.

 ಭಾನುವಾರದ ಸಂಪೂರ್ಣ ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೂಡಿ ಇಂದು (ಮಂಗಳವಾರ) ಆದೇಶ ಹೊರಡಿಸಿದೆ. ಸಂಡೇ ಕರ್ಪ್ಯೂನಿಂದಾಗಿ ಇದೇ ಭಾನುವಾರ (ಜುಲೈ 12) ನಡೆಯಬೇಕಿದ್ದ ಟಿಇಟಿ ಪರೀಕ್ಷೆ ಮುಂದೂಡಲ್ಪಟ್ಟಿದೆ.

Tap to resize

Latest Videos

undefined

ಕರ್ನಾಟಕದಲ್ಲಿ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

ಮುಂದಿನ ಟೀಚರ್ ಎಲಿಜಿಬಿಲಿಟಿ ಟೆಸ್ಟ್(ಟಿಇಟಿ) ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಇನ್ನು ಜುಲೈ 15ರಿಂದ ಆರಂಭಗೊಂಡು ಆಗಸ್ಟ್ 5ಕ್ಕೆ ಮುಕ್ತಾಯಗೊಳ್ಳಬೇಕಿದ್ದ  ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. 

click me!