ಕೊರೋನಾ ಮಧ್ಯೆ SSLCಯಲ್ಲಿ ಪಾಸಾದ ಶಿಕ್ಷಣ ಇಲಾಖೆಯಿಂದ ಮತ್ತೊಂದು ಪರೀಕ್ಷೆಗೆ ಡೇಟ್ ಫಿಕ್ಸ್

Published : Jul 07, 2020, 07:23 PM IST
ಕೊರೋನಾ ಮಧ್ಯೆ SSLCಯಲ್ಲಿ ಪಾಸಾದ ಶಿಕ್ಷಣ ಇಲಾಖೆಯಿಂದ ಮತ್ತೊಂದು ಪರೀಕ್ಷೆಗೆ ಡೇಟ್ ಫಿಕ್ಸ್

ಸಾರಾಂಶ

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಪಿಯುಸಿ ಪೂರಕ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡಿ ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ.

ಬೆಂಗಳೂರು, (ಜುಲೈ.07): ಕೊರೋನಾ ಭೀತಿ ಮಧ್ಯೆ ವಿರೋಧದ ನಡುವೆಯೇ ಕರ್ನಾಟಕ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಇದೀಗ ಇದರ ಖುಷಿಯಲ್ಲಿಯೇ ಪ್ರಥಮ ಪಿಯು ಪೂರಕ ಪರೀಕ್ಷೆ ದಿನಾಂಕ ಪ್ರಕಟಿಸಿದೆ.

ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡಿ ಪಿಯುಸಿ ಬೋರ್ಡ್ ಇಂದು (ಮಂಗಳವಾರ) ಆದೇಶ ಹೊರಡಿಸಿದ್ದು, 2019-20ನೇ ಸಾಲಿನಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಜುಲೈ 16 ರಿಂದ 27ರ ಒಳಗೆ ಪರೀಕ್ಷೆ ಮುಗಿಸಲು  ಬೋರ್ಡ್ ಸೂಚನೆ ನೀಡಿದೆ. 

ಸಾಮಾಜಿಕ ಅಂತರ ಕಾಪಾಡುವಲ್ಲಿ PUC ವಿದ್ಯಾರ್ಥಿಗಳನ್ನು ಮೀರಿಸಿದ SSLC ಮಕ್ಕಳು!

 ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಆಯಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಜೊತೆಗೆ ಕಾಲೇಜುಗಳು ಅಗತ್ಯ ವೇಳಾಪಟ್ಟಿ ರಚನೆ ಮಾಡಿಕೊಂಡು ಪೂರಕ ಪರೀಕ್ಷೆ ನಡೆಸಬೇಕಾಗಿದೆ. 

ಹೀಗಾಗಿ ಪಿಯುಸಿ ಬೋರ್ಡ್ ಘೋಷಣೆ ಮಾಡಿದ ದಿನಾಂಕದ ಒಳಗೆ  (ಜುಲೈ 27) ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಮುಗಿಸಿರಬೇಕು ಎಂದು ಪಿಯುಸಿ ಬೋರ್ಡ್ ಕಾಲೇಜುಗಳಿಗೆ ಅದೇಶದಲ್ಲಿ ಸೂಚಿಸಿದೆ. 

ಅಂತೂ ವಿರೋಧದ ನಡುವೆ ಯಶಸ್ವಿಯಾಗಿ SSLC ಪರೀಕ್ಷೆ ಮುಗಿಸಿದ ಸರ್ಕಾರ: ಸುರೇಶ್ ಕುಮಾರ್ ಸರ್ದಾರ

ಪರೀಕ್ಷೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
* ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
* ಕಡ್ಡಾಯವಾಗಿ ಪರೀಕ್ಷೆ ಮುಗಿದ ನಂತರ ಕೇಂದ್ರದ ಕೊಠಡಿಗೆ ಸ್ಯಾನಿಟೈಸ್ ಮಾಡಿಸಬೇಕು
* ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿ ಮಾಡಬೇಕು
* ವಿದ್ಯಾರ್ಥಿಗಳು ಕೂಡ ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು
* ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸ್ಯಾನಿಟೈಸ್ ಬಳಸಬೇಕು
* ಪರೀಕ್ಷಾ ಕೇಂದ್ರದಲ್ಲಿ ಗುಂಪು ಸೇರದಂತೆ ಅಗತ್ಯ ಕ್ರಮವಹಿಸಬೇಕು
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗಳ ವ್ಯವಸ್ಥೆ ಮಾಡಬೇಕು
* ಪೋಷಕರು ಪರೀಕ್ಷಾ ಕೇಂದ್ರದ ಬಳಿ ಸೇರದಂತೆ ಮುಂಜಾಗ್ರತಾ ಕ್ರಮವಹಿಸಬೇಕು

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ