ಖಾಸಗಿ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರ ನೆರವಿನ ಹಸ್ತ: ಕ್ರೆಡಿಟ್ ಟು ಸಚಿವ ಸುರೇಶ್ ಕುಮಾರ್

By Suvarna NewsFirst Published Jul 8, 2020, 10:05 PM IST
Highlights

ಕೊರೋನಾ ಕಾಲಘಟ್ಟದ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೀವ್ರ ದುಃಸ್ಥಿತಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೆರವಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆ ಶಿಕ್ಷಕರು ಧಾವಿಸಿದ್ದಾರೆ.

ಬೆಂಗಳೂರು, (ಜುಲೈ.08): ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ಸ್ ಮನವಿಗೆ ಸ್ಪಂದಿಸಿದ  ಸರ್ಕಾರಿ ಶಾಲೆಗಳಶಿಕ್ಷಕರು, ತಮ್ಮ ಸಹವರ್ತಿಗಳಾದ ಖಾಸಗಿ ಶಾಲೆ ಶಿಕ್ಷಕರಿಹೆ ಒಂದು ದಿನದ ವೇತನ ನೀಡಲು ಸಮ್ಮತಿಸಿದ್ದಾರೆ. 

ಸರ್ಕಾರಿ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ದುಡಿಯುವ ತಮ್ಮ ಸಹವರ್ತಿಗಳಿಗೆ ಒಂದು ದಿನದ ವೇತನವನ್ನು ನೀಡಲು ಒಪ್ಪಿಕೊಂಡಿದ್ದಾರೆ. ಏಕೆಂದರೆ ಅವರ ವ್ಯವಸ್ಥಾಪಕರು ಪಾವತಿಸದ ಕಾರಣ ಅವರು ಸಂಕಷ್ಟದಲ್ಲಿದ್ದಾರೆ ಎಂದು ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್ ಹೇಳೀದ್ದಾರೆ.

ಲಾಕ್‌ಡೌನ್‌ನಿಂದ ಸಂಬಳವಿಲ್ಲ, ದುಡಿಮೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಕ

ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಶಾಲೆಗಳು ಇನ್ನೂ ಬೇಸಿಗೆಯ ನಂತರ ತರಗತಿಗಳನ್ನು ಪುನರಾರಂಭಿಸಲಿಲ್ಲ ಆ ಶಾಲೆಗಳೂ ಇದುವರೆಗೆ  ಶುಲ್ಕವನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಇದರ ಪರಿಣಾಮವಾಗಿ ಏಪ್ರಿಲ್‌ನಿಂದ 3 ತಿಂಗಳವರೆಗೆ ಶಿಕ್ಷಕರ ವೇತನವನ್ನು ಪಾವತಿಸಲಾಗಿಲ್ಲ ಎಂದರು.

ಖಾಸಗಿ ಶಾಲೆಗಳಲ್ಲಿ ನಮ್ಮ ಸಹವರ್ತಿಗಳಿಗೆ 2 ದಿನಗಳ ಸಂಬಳವನ್ನು ದೇಣಿಗೆ ನೀಡುವಂತೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದರು. ಆದ್ರೆ, ನಾವು ಒಂದು ದಿನದ ವೇತನ ಪಾವತಿಸಲು ಒಪ್ಪಿದ್ದೇವೆ. ಏಕೆಂದರೆ ನಾವು ಈಗಾಗಲೇ ಕೊಡಗು ಮತ್ತು ಉತ್ತರ ಕರ್ನಾಟಕ ಪ್ರವಾಹ ಪರಿಹಾರ ನಿಧಿಗೆ 2019 ರ ಸೆಪ್ಟೆಂಬರ್‌ನಲ್ಲಿ ದೇಣಿಗೆ ನೀಡಿದ್ದೇವೆ. ಅಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹ ಹಣ ದೇಣಿಗೆ ಕೋಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೊರೋನಾ ಕಾಟ: ಅತಿಥಿ ಶಿಕ್ಷಕರ ಸ್ಥಿತಿ ಶೋಚನೀಯ, ವೇತನ ನೀಡಲು ಆಗ್ರಹ 

ಖಾಸಗಿ ಮತ್ತು ಅನುದಾನರಹಿತ ಶಾಲೆಗಳಲ್ಲಿನ ಸುಮಾರು 1.4 ಲಕ್ಷ ಶಿಕ್ಷಕರು ಇದ್ದು ಸರ್ಕಾರಿ ಶಾಲೆಗಳ ತಮ್ಮ ಸಹವರ್ತಿಗಳ ದೇಣಿಗೆಯಿಂದ ತಮ್ಮ ಕಷ್ಟಗಳನ್ನು ಭಾಗಶಃ ತಗ್ಗುವ ಭರವಸೆ ಹೊಂದಿದ್ದಾರೆ ಎಂದು ತಿಳಿಸದರು.  

ಕ್ರೆಡಿಟ್ ಟು ಸುರೇಶ್ ಕುಮಾರ್
ಹೌದು..ಇದರಲ್ಲಿ ಎರಡು ಮಾತಿಲ್ಲ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಶಾಲೆ ಮುಚ್ಚಿದ್ದರಿಂದ ಖಾಸಗಿ ಶಿಕ್ಷಕರಿಗೆ ವೇತನ ಇಲ್ಲ, ಇದರಿಂದ ಅವರು ಪರದಾಡುತ್ತಿರುವುದನ್ನ ಗಮನಿಸಿದ ಸಚಿವ ಸುರೇಶ್ ಕುಮಾರ್, ತಮ್ಮ ಇಲಾಖೆಯ ಶಿಕ್ಷಕರ ಒಂದು ದಿನದ ಸಂಬಳ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶಿಕ್ಷಕರಿಗೆ ಸುರೇಶ್ ಕುಮಾರ್ ಮನವಿ ಮಾಡಿ ಕೊನೆಗೆ ಖಾಸಗಿ ಶಿಕ್ಷಕರ ನೆರವಿಗೆ ನಿಂತರು.

 ಸಂಬಳವಿಲ್ಲದೇ ಪರದಾಡುತ್ತಿದ್ದ ಖಾಸಗಿ ಶಿಕ್ಷಕರಿಗೆ ನೆರವಲು ಒದಗಿಸಿಕೊಡುವಲ್ಲಿ ಸಚಿವ ಸುರೇಶ್ ಕುಮಾರ್ ಯಶಸ್ವಿಯಾಗಿದ್ದು, ಇದರ ,ಕ್ರೆಡಿಟ್ ಅವರಿಗೆ ಸಲ್ಲುತ್ತದೆ.

ಕೊರೋನಾ ವೈರಸ್ ಲಾಕ್‌ಡೌನ್ ಜಾರಿಗೊಳಿಸಿದ್ದ ಕಾರಣ ಮಾರ್ಚ್ 25 ರಿಂದ ರಾಜ್ಯಾದ್ಯಂತ ನೂರಾರು ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ, ಖಾಸಗಿ ಮತ್ತು ಅನುದಾನರಹಿತ ಸಂಸ್ಥೆಗಳ ಆಡಳಿತಕ್ಕೆ ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸಲು ಅಥವಾ ತಮ್ಮ ಅಧ್ಯಾಪಕರಿಗೆ ಮಾಸಿಕ ಸಂಬಳ ನೀಡಲು ಹಣವನ್ನು ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಶಿಕ್ಷಕರಿಗೂ ಸಂಬಳ ಇಲ್ಲದೇ ಸಂಕಷ್ಟದಲ್ಲಿದ್ದಾರೆ.

click me!