ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಲ್ಲಾ ಗೊಂದಲಗಳಿಗೆ ತೆರೆ...!

By Suvarna NewsFirst Published May 16, 2020, 2:44 PM IST
Highlights

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ನೀವು ಲಾಕ್‌ ಡೌನ್‌ನಿಂದಾಗಿ ನಿಮ್ಮ ನಿಮ್ಮ ಊರುಗಳಿಗೆ ತೆರಳಿದ್ದೀರಾ..? ಪರೀಕ್ಷೆ ದಿನಾಂಕ ಪ್ರಕಟವಾದರೆ ಹೇಗೆ ವಾಪಸ್ ಬರುವುದು ಅಂತ ಚಿಂತೆ ಮಾಡುತ್ತಿದ್ದೀರಾ..? ಹಾಗಾದ್ರೆ ಆ ಚಿಂತೆ ಬೇಡ. ಪದವಿ ಪೂರ್ವ ಶಿಕ್ಷಣ ಇಲಾಖೆ ಇದೀಗ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದೆ. ಏನು ಅಂತೀರಾ?  ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಮೇ.16): ಲಾಕ್‌ಡೌನ್‌ನಿಂದಾಗಿ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ. ಇದೀಗ ಅದಕ್ಕೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. 

ಲಾಕ್‌ಡೌನ್ ಪರಿಣಾಮ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಊರುಗಳಿಗೆ ತೆರಳಿರುವುದರಿಂದ ಊರಿನಲ್ಲೇ ಪರೀಕ್ಷೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುವು ಮಾಡಿಕೊಟ್ಟಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ, ದಿನಾಂಕ, ವೇಳಾಪಟ್ಟಿ: ಅಂತಿಮ ನಿರ್ಧಾರ ಪ್ರಕಟಿಸಿದ ಸುರೇಶ್ ಕುಮಾರ್

ಆಯಾಯ ಜಿಲ್ಲೆಗಳಲ್ಲಿ ಕೇಂದ್ರಗಳನ್ನು ನಿಗದಿ ಮಾಡಲಿದ್ದು, ವಿದ್ಯಾರ್ಥಿಗಳು ಎಲ್ಲಿ ಉಳಿದುಕೊಂಡಿದ್ದಾರೋ ಆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಬಹುದು. ಹತ್ತಿರವಿರುವ ಪರೀಕ್ಷಾ ಕೇಂದ್ರಗಳಲ್ಲಿ ಎಕ್ಸಾಂ ಬರೆಯಬಹುದಾಗಿದೆ. ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು (ಶನಿವಾರ) ಸುತ್ತೋಲೆ  ಹೊರಡಿಸಿದೆ. 

* ಕಾಲೇಜು ಕೋಡ್‌, ವಿದ್ಯಾರ್ಥಿ ಹೆಸರು, ಸ್ಟೂಡೆಂಟ್ ನಂಬರ್, ದ್ವಿತೀಯ ಪಿಯುಸಿ ರಿಜಿಸ್ಟರ್ ನಂಬರ್, ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಹೆಸರು, ಪ್ರಸ್ತುತ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರದ ಹೆಸರು, ಈಗಾಗಲೇ ಬರೆದ ಪರೀಕ್ಷಾ ಕೇಂದ್ರ ಹೊರತುಪಡಿಸಿ ಪ್ರಸ್ತುತ ವಾಸವಿರುವ ಜಿಲ್ಲಯಲ್ಲಿರುವ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ವಿವರ ನೀಡವುದು. 

ಮೇಲಿನ ಎಲ್ಲಾ ಮಾಹಿತಿಯನ್ನು ಪದವಿಪೂರ್ವ ಇಲಾಖೆಗೆ ಇ-ಮೇಲ್ ಮಾಡಿ ಮಾಹಿತಿ ನೀಡಬೇಕು. ನೀಡಿದರೆ ವಿದ್ಯಾರ್ಥಿಗಳು ಎಲ್ಲಿ ವಾಸವಾಗಿರುತ್ತಾರೋ ಆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ.

ಸದ್ಯಕ್ಕೆ ಇಷ್ಟು ಅನುಕೂಲ ಮಾಡಿಕೊಡುತ್ತಿದೆ.ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ, ಅನಾನುಕೂಲಗಳನ್ನು ಗಮನಿಸಿ ಬಳಿಕ ಜೂನ್‌ನಲ್ಲಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವ ಎಲ್ಲಾ ಸಾಧ್ಯತೆಗಳಿವೆ.

ದ್ವಿತೀಯ ಪಿಯು ಪರೀಕ್ಷೆಯ ಕೀ ಉತ್ತರಗಳು ಪ್ರಕಟ: ಚೆಕ್ ಮಾಡ್ಕೊಳ್ಳಿ

ಎಲ್ಲಾ ಪರೀಕ್ಷೆಗಳು ಮುಗಿದು ಕೇವಲ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಇರುವಾಗಲೇ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಒಂದು ಪರೀಕ್ಷೆ ಯಾವಾಗ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಇತ್ತು. 

ಹಾಗೆಯೇ ಈ ಹಿಂದೆ ನಿಗದಿಯಾಗಿದ್ದರಿಂದ ಪರೀಕ್ಷೆ ಕೇಂದ್ರಗಳಿಗೆ ಹೋಗುವುದು ಹೇಗೆ ಎಂಬ ಗೊಂದಲವೂ ಇತ್ತು. ಇದೀ sಗ ಅವೆಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. 

click me!