ಮತ್ತೆ ಮೇಷ್ಟ್ರಾದ ವೈಎಸ್‌ವಿ: ವರ್ಷ ಪೂರ್ತಿ ‘ದತ್ತ’ ಆನ್‌ಲೈನ್‌ ಗಣಿತ ಪಾಠ!

By Kannadaprabha News  |  First Published Jul 21, 2020, 8:36 AM IST

ಕೊರೋನಾ: ಮೇಸ್ಟ್ರಗಿರಿಗೆ ಮರಳಿದ ವೈಎಸ್‌ವಿ ದತ್ತ| ದಶಕಗಳ ಬಳಿಕ ದತ್ತ ಟುಟೋರಿಯಲ್ಸ್‌ ಆರಂಭಿಸಿರುವ ಗಣಿತ ಮಾಸ್ತರ್‌| ಆ.1ರಿಂದ 10ನೇ ತರಗತಿ ಮಕ್ಕಳಿಗೆ ಆನ್‌ಲೈನ್‌ ಬೋಧನೆಗೆ ಸಿದ್ಧತೆ


ಕಡೂರು ಕೃಷ್ಣಮೂರ್ತಿ

ಕಡೂರು(ಜು.21): ಕೊರೋನಾ ಮಹಾಮಾರಿ ಸಂಕಷ್ಟದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಶಿಕ್ಷಣ ಸಿಗುವುದೇ ಎಂಬ ಅನುಮಾನ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಮಾಜಿ ಶಾಸಕ ಹಾಗೂ ಹಿರಿಯ ಗಣಿತ ಮೇಷ್ಟು್ರ ವೈ.ಎಸ್‌.ವಿ. ದತ್ತ ಅವರು ವರ್ಷಪೂರ್ತಿ ಪಾಠ ಬೋಧಿಸಲು ಟೊಂಕಕಟ್ಟಿನಿಂತಿದ್ದಾರೆ.

Latest Videos

undefined

ವೈರಸ್‌ವಿ ದತ್ತ ಅವರ ಈ ನಿರ್ಧಾರಕ್ಕೆ ಕಾರಣ ಆಗಿರುವುದು ಮಹಾಮಾರಿ ವೈರಸ್‌ ಅಟ್ಟಹಾಸ. ಕೋವಿಡ್‌-19 ಪರಿಣಾಮ ಮಕ್ಕಳು ಪಾಠಗಳಿಂದ, ಶಾಲೆಗಳಿಂದ ದೂರವೇ ಇರುವಂತಾಗಿದೆ. ಅವರನ್ನು ಪಠ್ಯೇತರ ಚಟುವಟಿಕೆಗಳತ್ತ ಮಾನಸಿಕವಾಗಿ ಸೆಳೆಯಲು ಸಧ್ಯಕ್ಕೆ ಇರುವ ಮಾರ್ಗವೆಂದರೆ, ಅದು ಆನ್‌ಲೈನ್‌ ಶಿಕ್ಷಣ ಬೋಧನೆ. ಈ ಆನ್‌ಲೈನ್‌ ಸೌಲಭ್ಯ ಬಳಸಿ, ವೈಎಸ್‌ವಿ ದತ್ತ ಅವರು ‘ದತ್ತ ಟುಟೋರಿಯಲ್ಸ್‌’ ಅನ್ನು ಪುನಾರಂಭಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಾಠ ಮಾಡುವುದಾಗಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಗಣಿತ ಮತ್ತು ವಿಜ್ಞಾನ ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಇಡೀ ವರ್ಷದ ಪಠ್ಯವನ್ನು ತಯಾರು ಮಾಡಿ, ಆನ್‌ಲೈನ್‌ನಲ್ಲಿ ಬೋಧಿಸಲು ಸಿದ್ಧತೆ ನಡೆಸಿದ್ದಾರೆ.

ಲಾಕ್‌ಡೌನ್‌ನಿಂದ ಕಂಗಾಲಾದ ರೈತರು: ಕಲ್ಲಂಗಡಿ, ಟೊಮೆಟೋ ಖರೀದಿಸಿದ ವೈಎಸ್‌ವಿ ದತ್ತ

ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನ ವೈಎಸ್‌ವಿ ದತ್ತ ಅವರು ವಿದ್ಯಾರ್ಥಿಗಳಿಗೆ 28 ದಿನಗಳ ಕಾಲ ಆನ್‌ಲೈನ್‌ನಲ್ಲಿ ಬೋಧಿಸಿದ್ದರು. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಸೇರಿ ಸುಮಾರು 5 ಲಕ್ಷ ವೀಕ್ಷಕರನ್ನು ಅವರ ಬೋಧನೆ ತಲುಪಿತ್ತು. ಆ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎಂಬ ಲಕ್ಷಾಂತರ ಲೈP್ಸ…ಗಳನ್ನು ದತ್ತ ಅವರು ಪಡೆದುಕೊಂಡಿದ್ದು ಗಮನೀಯ.

ವೈರಸ್‌ ಕಾಟ ಮುಂದುವರಿಯುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರವು ಆನ್‌ಲೈನ್‌ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಆದ್ದರಿಂದ ಶಾಲೆಗೆ ಹೋಗುವ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತೊಂದರೆ ಆಗಬಾರದೆಂದು ಆನ್‌ಲೈನ್‌ ಮೂಲಕ 150 ಕಂತುಗಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಗಳ ಬೋಧಿಸಲು ಮುಂದಾಗಿದ್ದಾರೆ. ಆ.1ರಿಂದ ಆನ್‌ಲೈನ್‌ ಕ್ಲಾಸ್‌ ಮಾಸ್ತರ್‌ ಆಗಿ ವೈಎಸ್‌ವಿ ದತ್ತ ಅವರು ಪ್ರತ್ಯಕ್ಷರಾಗಲಿದ್ದಾರೆ. 1 ವರ್ಷದ ಪಾಠವನ್ನು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಬೋಧನೆ ಮಾಡಲಿದ್ದಾರೆ.

ಈ ಕುರಿತು ಮಾತನಾಡಿರುವ ದತ್ತ ಅವರು, ಸಮಾಜವನ್ನು ವೈರಸ್‌ ಕಾಡುತ್ತಿರುವ ಕಾರಣದಿಂದಾಗಿ ಆನ್‌ಲೈನ್‌ ಮೂಲಕ ಬೋಧಿಸಲು ನಿರ್ಧರಿಸಲಾಗಿದೆ. ಆನ್‌ಲೈನ್‌ ಬೋಧನೆಯನ್ನು ವೃತ್ತಿಯಾಗಿ, ಲಾಭಕ್ಕಾಗಿ ನಡೆಸುವುದಿಲ್ಲ. ಕೇವಲ ಮಕ್ಕಳ ಶಿಕ್ಷಣ ಹಿತದೃಷ್ಟಿಯ ಕಾಯಕವಾಗಿ ಮಾತ್ರ ನಡೆಸಲಾಗುವುದು. ಆನ್‌ಲೈಲ್‌ ಬೋಧನೆಗೆ ತಾಂತ್ರಿಕತೆಗೆ ಬೇಕಾಗುವ ಖರ್ಚಿನ ಹಿನ್ನೆಲೆಯಲ್ಲಿ ವರ್ಷಪೂರ್ತಿ 1 ವಿಷಯಕ್ಕೆ ಕೇವಲ .1100 ಮಾತ್ರ ಶುಲ್ಕ ವಿಧಿಸುತ್ತಿದ್ದು, ಅದೂ ಒಬ್ಬ ವಿದ್ಯಾರ್ಥಿಗೆ 1 ತಿಂಗಳಿಗೆ ಕೇವಲ .80 ಮಾತ್ರ ಶುಲ್ಕ ನೀಡಿದಂತಾಗುತ್ತದೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮತ್ತೆ ಮೇಷ್ಟ್ರಾದ ಮಾಜಿ ಶಾಸಕ ದತ್ತ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠ...!

ದತ್ತ ಟ್ಯುಟೋರಿಯಲ್‌ಗೆ 40 ವರ್ಷ ಇತಿಹಾಸ

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವೈಎಸ್‌ವಿ ದತ್ತ ಅವರು, ಈ ಹಿಂದೆ ಸುಮಾರು 40 ವರ್ಷಗಳ ಕಾಲ ‘ದತ್ತ ಟುಟೋರಿಯಲ್‌’ ಆರಂಭಿಸಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗಿತ್ತು. ಕೊರೊನಾ ವೈರಸ್‌ ಪರಿಣಾಮದಿಂದಾಗಿ ಕಳೆದ ಬಾರಿ ರಾಜ್ಯದ ಲಕ್ಷಾಂತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆನ್‌ಲೈನ್‌ ಬೋಧನೆ ಆರಂಭಿಸಿದ್ದೆ. ಇತ್ತೀಚೆಗೆ ತನಗೆ ಖಾಸಗಿ ಶಿಕ್ಷಣ ಸಂಸ್ಥೆಗಳವರು ತಮ್ಮ ಶಿಕ್ಷಣ ಸಂಸ್ಥೆ ಮೂಲಕವೇ ಆನ್‌ಲೈನ್‌ ಮೂಲಕ ಪಾಠ ಮಾಡಿ ಕೊಡಿ ಎಂದರು. ಆದರೆ ಇದು ತಮ್ಮ ಮನಸ್ಸಿಗೆ ಒಗ್ಗದ ವಿಷಯ ಎಂದಿದ್ದಾರೆ.

ಹಾಗಾಗಿ ಹೆಚ್ಚಿನ ಶುಲ್ಕವು ಮಕ್ಕಳಿಗೆ ಹೊರೆಯಾಗಬಾರದು ಎಂದು ಅನೇಕ ವರ್ಷಗಳ ತರುವಾಯ ಆನ್‌ಲೈನ್‌ ಬೋಧನೆಗೆ ಮುಂದಾಗಿದ್ದೇನೆ. ವಿಧಾನ ಪರಿಷತ್ತು ಸದಸ್ಯ, ಶಾಸಕ ಹಾಗೂ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಮಕ್ಕಳ ಭವಿಷ್ಯದಲ್ಲಿ ತಮ್ಮ 40 ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಪಾಲು ಕೂಡ ಇರಲಿ ಎಂಬ ಸದುದ್ದೇಶದಿಂದ ಆನ್‌ಲೈನ್‌ ಮೂಲಕ ದತ್ತ ಟುಟೋರಿಯಲ್ಸ್‌ ಮರುಆರಂಭಿಸುತ್ತಿದ್ದೇನೆ ಎಂದಿರುವ ಅವರು, ತಮ್ಮ ಯಾವುದೇ ರಾಜಕೀಯ ಲಾಭಕ್ಕಾಗಿ ಯಾವತ್ತೂ ಮೇಷ್ಟು್ರ ವೃತ್ತಿಯನ್ನು ಬಳಸಿಕೊಂಡಿಲ್ಲ. ಮುಂದೆಯೂ ಬಳಸಿಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

click me!