ಅಂತಿಮ ವರ್ಷದ ಸೆಮಿಸ್ಟರ್​ ಪರೀಕ್ಷೆ ರದ್ದುಪಡಿಸಿದ ವಿಶ್ವವಿದ್ಯಾಲಯ

By Suvarna NewsFirst Published Jun 16, 2020, 5:16 PM IST
Highlights

ಕೊರೋನಾ ಸೋಂಕು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್​ಡೌನ್​ ತೆರವುಗೊಳಿಸಲಾಗಿದ್ದು, ಬಹುತೇಕ ಎಲ್ಲಾ ಚಟುವಟಿಕೆಗಳು ಆರಂಭವಾಗಿವೆ. ಆದ್ರೆ, ಶೈಕ್ಷಣಿಕ ಕ್ಷೇತ್ರ ಮಾತ್ರ ಇನ್ನು ಅನ್‌ಲಾಕ್‌ನಲ್ಲಿದೆ. ಇದರ ಮಧ್ಯೆ  ಸೆಮಿಸ್ಟರ್​ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.

ನವದೆಹಲಿ, (ಜೂನ್.16): ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಅಂತಿಮ ವರ್ಷ ಸೆಮಿಸ್ಟರ್​ಗಳ ಆಫ್​ಲೈನ್​ ಪರೀಕ್ಷೆಗಳನ್ನು ರದ್ದುಪಡಿಸಿದೆ.

ಜುಲೈ 1ರಿಂದ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನ ನಡೆಸಲು ತೀರ್ಮಾನಿಸಿತ್ತು. ಆದ್ರೆ,  ಕೊರೋನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಪರಿಸ್ಥಿತಿ ಪೂರಕವಾಗಿಲ್ಲ. ಇದರಿಂದ ನಡೆಸಲುದ್ದೇಶಿಸಲಾಗಿದ್ದ ಆಫ್​​ಲೈನ್​ ಪರೀಕ್ಷೆಯನ್ನು ರದ್ದುಪಡಿಸಿರುವುದಾಗಿ ಘೋಷಿಸಿದೆ.

ಗುಂಡಿನ ದಾಳಿ ಮಾಡಿದ ಚೀನಾ, ಬಯಲಾಯ್ತು ಸುಶಾಂತ್ ಆತ್ಮಹತ್ಯೆ ಕಾರಣ; ಜೂ.16ರ ಟಾಪ್ 10 ಸುದ್ದಿ!

 ಆನ್​ಲೈನ್​ ಪರೀಕ್ಷೆ ಹಾಗೂ ಅಸೈನ್​ಮೆಂಟ್​ ಆಧಾರದಲ್ಲಿ ಮೌಲ್ಯಮಾಪನ ನಡೆಸಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಆದಷ್ಟು ಬೇಗ ಆನ್​ಲೈನ್​ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ವಿವಿ ಸೂಚಿಸಿದೆ.

ವಿಶ್ವವಿದ್ಯಾಲಯವು ಜೂನ್​ 1ರಿಂದ 15ರ ವರೆಗೆ ಬೇಸಿಗೆ ರಜೆಯನ್ನು ಘೋಷಿಸಿತ್ತು. ಬಳಿಕ ಅದನ್ನು ಜೂನ್​ 30ರವರೆಗೆ ವಿಸ್ತರಿಸಿದೆ. 

ಇನ್ನು ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬೇಡ ಎಂಬ ಕೂಗು ಕೇಳಿ ಬರುತ್ತಿವೆ. ಆದ್ರೆ, ರಾಜ್ಯ ಸರ್ಕಾರ ಪರೀಕ್ಷೆ ನಡೆಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಇದೇ ಜೂನ್ 25ರಿಂದ ಜುಲೈ 3ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ಇನ್ನು ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಯಾವಾಗ ಶಾಲೆಗಳನ್ನ ಆರಂಭಿಸಬೇಕೆಂದು ಸರ್ಕಾರಕ್ಕೆ ದೊಡ್ಡ ಚಿಂತೆಯಾಗಿದೆ.

click me!