CBSE Result: ಹನ್ಸಿಕಾ, ಕರಿಷ್ಮಾ ದೇಶಕ್ಕೇ ಫಸ್ಟ್

Published : May 02, 2019, 01:37 PM ISTUpdated : May 02, 2019, 01:40 PM IST
CBSE Result: ಹನ್ಸಿಕಾ, ಕರಿಷ್ಮಾ ದೇಶಕ್ಕೇ ಫಸ್ಟ್

ಸಾರಾಂಶ

CBSE ಫಲಿತಾಂಶ ಪ್ರಕಟ: ಇಬ್ಬರು ವಿದ್ಯಾರ್ಥಿನಿಯರು ದೇಶದಲ್ಲಿ ಪ್ರಥಮ!| ಗಾಜಿಯಾಬಾದ್ ನ ಶುಕ್ಲಾ ಹಾಗೂ ಮುಜಫ್ಫರ್ ನಗರದ ಕರಿಶ್ಮಾ ಅರೋರಾ ಟಾಪರ್ಸ್

ನವದೆಹಲಿ[ಮೇ.02]: CBSE ಬೋರ್ಡ್ 12ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. CBSE ಅಧಿಕೃತ ಜಾಲತಾಣಗಳಾದ cbseresults.nic.in ಹಾಗೂ results.nic.in ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ದಾಖಲಿಸಿ ಫಲಿತಾಂಶ ಪಡೆಯಬಹುದು.

ಈ ವರ್ಷ ಒಟ್ಟು ಶೇ. 83.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಇವರಲ್ಲಿ ಶೇ. 88.70ರಷ್ಟು ಬಾಲಕಿಯರು ತೇರ್ಗಡೆ ಹೊಂದಿದ್ದು, ಶೇ.  79.40ರಷ್ಟು ಬಾಲಕರು ಪಾಸ್ ಆಗಿದ್ದಾರೆ. 
DPS ಗಾಜಿಯಾಬಾದ್ ನ ವಿದ್ಯಾರ್ಥಿನಿ ಹಂಸಿಕಾ ಶುಕ್ಲಾ ಹಾಗೂ ಎಸ್ ವಿ ಸ್ಕೂಲ್ ಮುಜಫ್ಫರ್ ನಗರದ ಕರಿಶ್ಮಾ ಅರೋರಾ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರು ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಹೀಗೂ ನಿಮ್ಮ ಫಲಿತಾಂಶ ಪಡೆದುಕೊಳ್ಳಬಹುದು

CBSE ವೆಬ್ ಸೈಟ್ cbseresults.nic.in ಹೊರತುಪಡಿಸಿ ಜಾಗತಿಕ ಫಲಿತಾಂಶದ ಜಾಲತಾಣವಾದ indiaresults.comನಲ್ಲೂ ಫಲಿತಾಂಶ ಲಭ್ಯವಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಫಲಿತಾಂಶ ನೋಡುವ ಸಾಧ್ಯತೆಗಳಿವೆ. ಹೀಗಿರುವಾಗ ಸರ್ವರ್ ಡೌನ್ ಆಗಬಹುದು ಹೀಗಾಗಿ ಈ ವೆಬ್ ಸೈಟ್ ಮೂಲಕ ಸುಲಭವಾಗಿ ನಿಮ್ಮ ಫಲಿತಾಂಶ ನೋಡಬಹುದು. ಇಲ್ಲಿ ಫಲಿತಾಂಶ ಪರಿಶೀಲಿಸಲು ನಿಮ್ಮ ದಾಖಲಾತಿ ಸಂಖ್ಯೆ ಹಾಗೂ ಜನ್ಮ ದಿನಾಂಕ ನಮೂದಿಸಬೇಕಾಗುತ್ತದೆ.

  

PREV
click me!

Recommended Stories

ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!
ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು