ಕಾಲೇಜು, ವಿವಿಗಳ ಅಂತಿಮ ಪರೀಕ್ಷೆ ತಡೆಗೆ ‘ಸುಪ್ರೀಂ’ ನಕಾರ!

By Suvarna NewsFirst Published Aug 1, 2020, 8:35 PM IST
Highlights

ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಅಂತಿಮ ವರ್ಷ ಪರೀಕ್ಷೆ ತಡೆ| ಪರೀಕ್ಷೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಣೆ

ನವದೆಹಲಿ(ಆ.01): ಕೆಲ ರಾಜ್ಯಗಳು ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್‌ನ ಪರೀಕ್ಷೆಗಳಿಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದ್ದು, ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಪ್ರತಿಕ್ರಿಯೆ ಕೇಳಿದೆ.

5 ಕೊರೋನಾ ಸೋಂಕಿತ ವಿದ್ಯಾರ್ಥಿಗಳು ಸಿಇಟಿಗೆ ಹಾಜರು

ಕೊರೋನಾ ವೈರಸ್‌ ಹರಡುತ್ತಿರುವುದರ ನಡುವೆಯೇ ಕೆಲ ರಾಜ್ಯಗಳು ಸೆಪ್ಟೆಂಬರ್‌ನಲ್ಲಿ ಪದವಿ ತರಗತಿಗಳ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಅಂತಿಮ ಪರೀಕ್ಷೆಗಳನ್ನು ನಡೆಸಲು ಮುಂದಾಗಿವೆ. ಇದಕ್ಕೆ ತಡೆ ನೀಡಬೇಕು ಎಂದು ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಶುಕ್ರವಾರ ಅವುಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಈ ಕುರಿತು ಯಾವುದೇ ಮಧ್ಯಂತರ ಆದೇಶ ಹೊರಡಿಸಲು ಅಥವಾ ತಡೆ ನೀಡಲು ನಿರಾಕರಿಸಿ, ಮುಂದಿನ ವಿಚಾರಣೆಯನ್ನು ಆ.10ಕ್ಕೆ ನಿಗದಿಪಡಿಸಿತು.

ಪರೀಕ್ಷೆ, ತರಗತಿ ಆರಂಭಕ್ಕೆ ವಿಟಿಯು ಮಾರ್ಗಸೂಚಿ ಪ್ರಕಟ: ವಿದ್ಯಾರ್ಥಿಗಳಿಗೆ ಆತಂಕ

ದೇಶದ 800ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪೈಕಿ 209 ವಿವಿಗಳಲ್ಲಿ ಮಾತ್ರ ಈ ವರ್ಷದ ಅಂತಿಮ ಪರೀಕ್ಷೆಗಳು ಮುಗಿದಿವೆ. 390 ವಿವಿಗಳು ಪರೀಕ್ಷೆಗಳನ್ನು ನಡೆಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತು.

click me!