2018ನೇ ಸಾಲಿನ UPSC ಫಲಿತಾಂಶ ಪ್ರಕಟ, ರಾಜ್ಯದ 23 ಪರೀಕ್ಷಾರ್ಥಿಗಳು ಸೆಲೆಕ್ಟ್

By Web DeskFirst Published Apr 5, 2019, 9:36 PM IST
Highlights

2018ನೇ ಸಾಲಿನ UPSC ಫಲಿತಾಂಶ ಪ್ರಕಟವಾಗಿದ್ದು, 759 ಪರೀಕ್ಷಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ಕರ್ನಾಟಕದ 23 ಅಭ್ಯರ್ಥಿಗಳು ಸೆಲೆಕ್ಟ್ ಆಗಿದ್ದಾರೆ.
 

ನವದೆಹಲಿ, [ಏ.05]: 2018ನೇ ಯುಪಿಎಸ್​ಸಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 759 ಪರೀಕ್ಷಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ 577 ಮಂದಿ ಪುರುಷರು ಹಾಗೂ 182 ಮಂದಿ ಮಹಿಳೆಯರಾಗಿದ್ದಾರೆ.

ಕನಿಶಕ್​ ಕಟಾರಿಯಾ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ. ಅಕ್ಷತಾ ಜೈನ್ 2ನೇ ರ‍್ಯಾಂಕ್, ಜುನೈದ್ ಅಹಮ್ಮದ್ 3ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇನ್ನು 759 ಪರೀಕ್ಷಾರ್ಥಿಗಳ ಪೈಕಿ ಕರ್ನಾಟಕದ 23 ಅಭ್ಯರ್ಥಿಗಳು ಸೆಲೆಕ್ಟ್ ಆಗಿದ್ದಾರೆ.  

ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್​ ಸೇವೆ ಮತ್ತು ಕೇಂದ್ರ ಸೇವೆಯ ಗ್ರೂಪ್​ ಎ ಹಾಗೂ ಬಿ ಹುದ್ದೆಗಳಿಗೆ ಶಿಫಾರಸು ಮಾಡಲಾಗಿದೆ.

ನಾಗರಿಕ ಸೇವೆ ಪೂರ್ವಭಾವಿ ಪರೀಕ್ಷೆಯನ್ನು ಜೂನ್​ ತಿಂಗಳಿನಲ್ಲಿ ನಡೆಸಲಾಗಿತ್ತು. ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 5 ಲಕ್ಷ ಜನರು ಮಾತ್ರ ಪರೀಕ್ಷೆಯನ್ನು ಎದುರಿಸಿದ್ದರು. ಇವರಲ್ಲಿ 10,468 ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆಯನ್ನು ಪಡೆದಿದ್ದರು. ಮುಖ್ಯ ಪರೀಕ್ಷೆ ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ 2018 ರಲ್ಲಿ ನಡೆದಿತ್ತು.

ರಾಜ್ಯದ 23 ವಿದ್ಯಾರ್ಥಿಗಳು ಪಾಸಾದವರ ಹೆಸರುಗಳು ಇಂತಿವೆ

1.ರಾಹುಲ್​​ ಶರಣಪ್ಪ ಶಂಕನೂರ -17ನೇ ರ‍್ಯಾಂಕ್
2.ಲಕ್ಷ್ಮೀ ಎನ್​​ -45ನೇ ರ‍್ಯಾಂಕ್
3.ಆಕಾಶ್​​​​ ಎಸ್​​ -78ನೇ ರ‍್ಯಾಂಕ್
4.ಕೃತುಕಕಾ -100ನೇ ರ‍್ಯಾಂಕ್
5.ಕೌಶಿಕ್​​​​ ಎಚ್​​​ಆರ್​​​ -240ನೇರ‍್ಯಾಂಕ್
6.ವಿವೇಕ್​​ ಎಚ್​​​​ಬಿ -257ನೇ ರ‍್ಯಾಂಕ್
7.ನಿವೇದಿತಾ -303ನೇ ರ‍್ಯಾಂಕ್
8.ಗಿರೀಶ್​​ ಧರ್ಮರಾಜ್​​​ ಕಲಗೊಂಡ್​​​ -307ನೇ ರ‍್ಯಾಂಕ್
9.ಮಿರ್ಜಾ ಖಾದರ್​​​ ಬೈಗಿ -336ನೇ ರ‍್ಯಾಂಕ್
10.ತೇಜಸ್​​​​ ಯುಪಿ -338ನೇ ರ‍್ಯಾಂಕ್
11.ಹರ್ಷವರ್ಧನ್​​ ಬಿಜೆ -352ನೇ ರ‍್ಯಾಂಕ್
12.ಪಕೀರೆಶ್​​​ ಕಲ್ಲಪ್ಪ ಬಾದಾಮಿ -372ನೇರ‍್ಯಾಂಕ್
13.ಡಾ. ನಾಗಾರ್ಜುನ ಗೌಡ -418ನೇ ರ‍್ಯಾಂಕ್
14.ಅಶ್ವಿಜಾ ಬಿವಿ -423ನೇ ರ‍್ಯಾಂಕ್
15.ಮಂಜುನಾಥ್​​ ಆರ್​ -495ನೇ ರ‍್ಯಾಂಕ್
16.ಬ್ರಿಂದಾ ಎಸ್​​ -496ನೇ ರ‍್ಯಾಂಕ್
17.ಹೇಮಂಥ್​​​ -612ನೇ ರ‍್ಯಾಂಕ್
18.ಶೃತಿ ಎಂಕೆ -637ನೇ ರ‍್ಯಾಂಕ್
19.ವೆಂಕಟ್​​​ರಾಮ್​​​ -694ನೇ ರ‍್ಯಾಂಕ್
20.ಸಂತೋಷ ಹೆಚ್​​​ -753ನೇ ರ‍್ಯಾಂಕ್
21.ಅಶೋಕ್​​ ಕುಮಾರ್​ ಎಸ್​​ -711ನೇ ರ‍್ಯಾಂಕ್
22.ರಾಘವೇಂದ್ರ ಎನ್​​ -739ನೇ ರ‍್ಯಾಂಕ್
23.ಶಶಿಕಿರಣ್​​​ -754ನೇ ರ‍್ಯಾಂಕ್

ಸೆಲೆಕ್ಷನ್ ಲಿಸ್ಟ್ ಗಾಗಿ ಇಲ್ಲಿ ಕ್ಲಿಕ್ಕಿಸಿ

click me!