ನಮ್ಮ ಕೈಯಲ್ಲೊಂದು ಮೊಬೈಲ್ ಇಟ್ಕೊಂಡು ಇಡೀ ವಿಶ್ವವೇ ನಮ್ಮ ಕೈಯಲ್ಲಿದೆ ಎಂದು ಭಾಸವಾಗುವಂತೆ ಮಾಡುತ್ತಿರುವುದು ಗೂಗಲ್. ಏನು ಹುಡುಕಿದರೂ ಮಾಹಿತಿಯನ್ನು ನೀಡುವ ಈ ದೈತ್ಯ ಸರ್ಚ್ ಎಂಜಿನ್ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬುವುದು ಬಹುತೇಕರ ಕನಸು. ಈ ಕಂಪನಿಯ ಸಂದರ್ಶನಕ್ಕೆ ಹೋದರೆ ಎಂಥ ಪ್ರಶ್ನೆ ಕೇಳ್ತಾರೆ ಗೊತ್ತಾ?
ಅಬ್ಬಾ, ಐಫೋನ್ ಹಾಗೂ ಗೂಗಲ್‌ನಂಥ ಕಂಪನಿಗಳಲ್ಲಿ ಕೆಲಸ ಮಾಡುವ ಮಂದಿ ತಾಂತ್ರಿಕವಾಗಿ ಅದೆಷ್ಟು ಮುಂದುವರಿದಿರಬಹುದುಕಲ್ಪಿಸಿಕೊಳ್ಳಿ. ಅಬ್ಬಾ, ಊಹೆಗೂ ನಿಲುಕದ್ದು. ನಮ್ಮನ್ನು ಬುಗುರಿಯಂತೆ ತಿರುಗಿಸುವಷ್ಟು ಸಾಮರ್ಥ್ಯ ಇರುವ ಈ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದೂ ಸುಲಭವಲ್ಲ. ಅವರು ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರವೇ ಇಲ್ಲದಿರಬಹುದು. ಅಥವಾ ಕೇಳಿದ್ದು ಪ್ರಶ್ನೆಯೇ ಆಗದಿರುವ ಸಾಧ್ಯತೆಯೂ ಇದೆ. ಆದರೂ, ನಿಮ್ಮನ್ನು ನೀವು ಸ್ಮಾರ್ಟ್ ಎಂದು ಪ್ರೂವ್ ಮಾಡಲೇಬೇಕು. ಇಂಥ ಗೂಗಲ್ ಸಂದರ್ಶದಲ್ಲಿ ಏನೆಲ್ಲಾ ಪ್ರಶ್ನೆಗಳನ್ನು ಕೇಳ್ತಾರೆ ಗೊತ್ತಾ?
1. ಒಂದು ದಿನದಲ್ಲಿ ಎಷ್ಟು ಬಾರಿ ಗಡಿಯಾರದ ಮುಳ್ಳುಗಳು ಒಂದರ ಮೇಲೊಂದು ಬರುತ್ತವೆ?
2. ಒಂದು ಪೆನ್ಸಿಲ್ ಬಾಕ್ಸ್ ನಿಮ್ಮ ಕೈಗೆ ಕೊಟ್ಟರೆ, ಮಾಮೂಲಿಯಲ್ಲದ ಬೇರೆ ರೀತಿಯ ಯಾವ್ಯಾವ ಹತ್ತು ಕೆಲಸಗಳನ್ನು ಮಾಡಬಹುದು?
3.Dead Beef'ನ ಮಹತ್ವ ವಿವರಿಸಿ.
4. ಇವತ್ತಿನ ರಾತ್ರಿ ಊಟಕ್ಕೆ ಏನು ತಿನ್ನೋಣ?
5. ನೀವು ಸೋಮಾರಿ ಹಾಗೂ ಅಸಮರ್ಥರೇ?
6.ಎಂಪೈರ್ ಸ್ಟೇಟ್ ಕಟ್ಟಡದ ತೂಕವೆಷ್ಟು?
7.ನ್ಯೂಯಾರ್ಕ್‌ನಲ್ಲಿರೋ ಎಲ್ಲ ಕಿಟಕಿಗಳನ್ನು ತೊಳೀಲಿಕ್ಕೆ ನೀವೆಷ್ಟು ಹಣ ತೆಗೆದುಕೊಳ್ತೀರಿ?
8.ಗಡಿಯಾರದಲ್ಲಿ ಗಂಟೆ ಮೂರೂ ಕಾಲು ಆಗಿದ್ದರೆ, ನಿಮಿಷ ಹಾಗೂ ಗಂಟೆಯ ಮುಳ್ಳಿನ ನಡುವೆ ಎಷ್ಟು ಡಿಗ್ರಿ ಕೋನ ಏರ್ಪಡುತ್ತದೆ?
9. ಎಂಟು ವರ್ಷದ ಮಗುವಿಗೆ ಡಾಟಾ ಬೇಸ್ ಎಂದರೇನು ಎಂಬುದನ್ನು ಹೇಗೆ ಅರ್ಥ ಮಾಡಿಸುತ್ತೀರಿ?
10. 1,1,2,3,4,5,8,13,21...ಈ ಸಂಖ್ಯಾ ಸರಣಿಗೆ ಯಾವ ಸಂಖ್ಯೆ ಸೇರಿಲ್ಲ?