
ಗದಗ : 5 ತಿಂಗಳ ಮಗುವನ್ನು ನೇಣುಹಾಕಿ ನಂತರ ತಾನೂ ನೇಣುಬಿಗಿದುಕೊಂಡ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶೃತಿ ಗೋವಿಂದಗೌಡ ಹಿರೇಗೌಡ್ರ ಮೃತ ಮಹಿಳೆಯಾಗಿದ್ದು, 5 ತಿಂಗಳು ಗಂಡು ಮಗು ಶಶಾಂಕಗೌಡಗೂ ಕೂಡ ನೇಣು ಬಿಗಿದು ನಂತರ ತಾನೂ ನೇಣು ಹಾಕಿಕೊಂಡಿದ್ದಾಳೆ.
ಗಂಡನ ಕಿರುಕುಳ ಹಾಗೂ ಅವನ ಅನೈತಿಕ ಸಂಬಂಧದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಗಿ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತ ಶೃತಿ ಪತಿ ಗೋವಿಂದಗೌಡ ಹಿರೇಗೌಡ್ರ ಮೂಲತಃ ಸವದತ್ತಿ ತಾಲೂಕಿನ ಉಗರಗೋಳ ನಿವಾಸಿಯಾಗಿದ್ದು, ಪತಿಯ ಅನೈತಿಕ ಸಂಬಂಧದ ಬಗ್ಗೆ ಇಬ್ಬರ ನಡುವೆ ಗಲಾಟೆಗಳಾಗುತ್ತಿತ್ತು.
ಮನನೊಂದು ತವರು ಮನೆಗೆ ಶ್ಯಾಗೋಟಿ ಗ್ರಾಮಕ್ಕೆ ತೆರಳಿ ಅಲ್ಲಿ ನೇಣಿಗೆ ಶರಣಾಗಿದ್ದಾಳೆ. ಪತಿ ಗೋವಿಂದಗೌಡನನ್ನು ಗದಗ್ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.