ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ

Published : May 24, 2025, 05:45 PM IST
 Vijayapura

ಸಾರಾಂಶ

ವಿಜಯಪುರದಲ್ಲಿ ಮದುವೆ ಸಂಭ್ರಮದ ವೇಳೆ 25 ವರ್ಷದ ಯುವಕ ಡಾನ್ಸ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಹೃದಯಾಘಾತದಿಂದ ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮೇ.24):‌ ಇತ್ತೀಚೆಗೆ ಹಾರ್ಟ್ ಅಟ್ಯಾಕ್ ಅನ್ನೋದು ಕಾಮನ್ ಆಗ್ತಿದೆ. ಅದ್ರಲ್ಲೂ ಯುವಕರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಾರ್ಟ್ ಅಟ್ಯಾಕ್ ಕಂಡು ಬರ್ತಿರೋದು ವಿಪರ್ಯಾಸ. ವಿಜಯಪುರದಲ್ಲಿ ಸಂಬಂಧಿಕರ ಮದುವೆ ಸಂಭ್ರಮದಲ್ಲಿದ್ದ ಯುವಕ ಡಾನ್ಸ್ ಮಾಡುತ್ತಲೇ ಇಹಲೋಕ ತ್ಯಜಿಸಿದ್ದಾನೆ. ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಅಂತಾ. ವಯಸ್ಸು ಈಗಷ್ಟೇ 25, ವಿಜಯಪುರ ನಗರದ ಚಪ್ಪರಬಂದ್ ಕಾಲೋನಿ ನಿವಾಸಿ. ಸಣ್ಣ ವಯಸ್ಸಿನಲ್ಲೆ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾನೆ. ಸಂಬಂಧಿಕರ ಮದುವೆಗೆ ಹೋಗಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾನೆ. ಸಡನ್ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ.

ಡಾನ್ಸ್ ವೇಳೆಯೇ ಕುಸಿದು ಬಿದ್ದ‌!

ಕಳೆದ ಎರಡು ದಿನಗಳ ಹಿಂದಷ್ಟೇ ಸಂಬಂಧಿಕರ ಮದುವೆ ಅಂತಾ ಹೋಗಿದ್ದ. ಮಸ್ತ ಡಿಜೆ ಸಾಂಗ್ ಗೆ ಹೆಜ್ಜೆಯನ್ನು ಹಾಕ್ತಿದ್ದ, ಆದ್ರೆ ಸಡನ್ ಆಗಿ ಏನಾಯ್ತೋ ಗೊತ್ತಿಲ್ಲ‌. ನೋಡ ನೋಡ್ತಿದ್ದಂತೆ ಮಹಮ್ಮದ್ ನೆಲಕ್ಕೆ ರಪ್ ಅಂತಾ ಕುಸಿದು ಬಿದ್ದಿದ್ದ. ಮಹಮ್ಮದ್‌ನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಪ್ರಯೋಜನವಾಗಿಲ್ಲ. ಮಹಮ್ಮದ್ ನನ್ನ ಪರೀಕ್ಷೆ ಮಾಡಿದ ವೈದ್ಯರು ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ‌.

ಹಾರ್ಟ್ ಅಟ್ಯಾಕ್ ವಿಡಿಯೋ ವೈರಲ್!

ಇನ್ನೂ ಮಹಮ್ಮದ್ ಸಂಬಂಧಿಕರ ಮದುವೆಗೆ ಹೋಗಿದ್ದ ವೇಳೆ ಮೋಜು ಮಸ್ತಿ ಜೋರಾಗಿತ್ತು.‌ ಮದುವೆಯಲ್ಲಿ ಡಿಜೆ, ಸಾಂಗ್ ಅಬ್ಬರ ಜೋರಾಗಿತ್ತು. ಗೆಳೆಯರು, ಓರಿಗೆ ಹುಡುಗರು ಡಾನ್ಸ್ ಮಾಡುವ ವೇಳೆ ಮಹಮ್ಮದ್ ಕೂಡ ಮೈಚಳಿ ಬಿಟ್ಟು ಕುಣಿದಿದ್ದಾನೆ‌. ಆದ್ರೆ ಸಡನ್ ಆಗಿ ಕುಸಿದು ಬಿದ್ದಿದ್ದಾನೆ. ಕುಸಿದು ಬೀಳ್ತಿರೋ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ತಪಾಸಣೆ ವೇಳೆ ಹಾರ್ಟ್ ಅಟ್ಯಾಕ್ ಆಗಿರೋ ಮಾಹಿತಿ!

ಆರೋಗ್ಯವಾಗಿಯೇ ಇದ್ದ ಮಹಮ್ಮದ್ ಹೀಗೆ ಕುಸಿದು ಬಿದ್ದು ಸಾವನ್ನಪ್ಪೋಕೆ ಕಾರಣ ಮೇಜರ್ ಹಾರ್ಟ್ ಅಟ್ಯಾಕ್ ಎನ್ನಲಾಗಿದೆ. ಪರೀಕ್ಷೆ ಮಾಡಿರೋ ವೈದ್ಯರು ಮೇಜರ್ ಹೃದಯಾಘಾತದಿಂದ ಮಹಮ್ಮದ್ ಜೀವ ಹೋಗಿದೆ ಎಂದಿದ್ದಾರೆ‌.

ಯಾವುದೇ ಚಟ ಇಲ್ಲ, ಹೃದಯ ಸಂಬಂಧಿ ಕಾಯಿಲೆಯೂ ಇಲ್ಲ!

ಇನ್ನೂ ಈ ವಿಚಾರ ಕುಟುಂಬಸ್ಥರು ಸೇರಿ, ಜನರಲ್ಲೂ ಆತಂಕ ಮೂಡಿಸಿದೆ. ಮಹಮ್ಮದ್‌ಗೆ ಯಾವುದೇ ಚಟ ಇರಲಿಲ್ಲವಂತೆ. ಹಿಂದೆ ಹೇಳಿಕೊಳ್ಳುವಂತಹ ಯಾವುದೇ ಹೃದಯ ಸಂಬಂಧಿಕ ಕಾಯಿಲೆಯೂ ಇರಲಿಲ್ಲವಂತೆ‌.‌ ಇಂಥದ್ರಲ್ಲಿ ಏಕಾಏಕಿ ಹೃದಯಾಘಾತ ಕುಟುಂಬಸ್ಥರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಒಟ್ಟಿನಲ್ಲಿ ಇತ್ತೀಚಿನ ಒತ್ತಡದ ಜೀವನದಲ್ಲಿ ಹೃದಯಾಘಾತ ಯುವ ಸಮೂಹವನ್ನ ಆತಂಕಕ್ಕೀಡು ಮಾಡಿದೆ. ಇನ್ನೂ ಹೃದಯ ಸಂಬಂಧಿ ಕಾಯಿಲೆ ಇಲ್ಲದವ್ರಲ್ಲಿ, ಅದ್ರಲ್ಲು ಚಿಕ್ಕ ವಯಸ್ಸಿನವರಲ್ಲಿ ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ತಿರೋದು ದುರಂತವೇ ಸರಿ.

PREV
Read more Articles on
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಚಾಕೊಲೇಟ್ ಆಸೆ ತೋರಿಸಿ ಮಕ್ಕಳಿಗೆ ಸಿಗರೇಟ್ ಸೇದಿಸಿದ ಕಿಡಿಗೇಡಿಗಳು