ಶಾಸಕರ ಮಗನ ಗೂಂಡಾಗಿರಿ - ಪೊಲೀಸರು ಚೇಲಾಗಳಾಗಿದ್ದಾರೆ : ವಾಸುದೇವ್

Published : Feb 18, 2018, 11:03 AM ISTUpdated : Apr 11, 2018, 12:46 PM IST
ಶಾಸಕರ ಮಗನ ಗೂಂಡಾಗಿರಿ - ಪೊಲೀಸರು ಚೇಲಾಗಳಾಗಿದ್ದಾರೆ  : ವಾಸುದೇವ್

ಸಾರಾಂಶ

ಶಾಸಕ ಹ್ಯಾರಿಸ್ ಮಗನಿಂದ ನಡೆದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಂಡಲ ಅಧ್ಯಕ್ಷ ವಾಸುದೇವ್ ಮೂರ್ತಿ ಪ್ರತಿಕ್ರಿಯಿಸಿದ್ದಾರೆ. ಇದೊಂದು ದೌರ್ಜನ್ಯವಾಗಿದೆ. ಶಾಂತಿನಗರ ಕ್ಷೇತ್ರ ರೌಡಿಸಂ ಕ್ಷೇತ್ರವಾಗಿದೆ. ಗಾಂಜಾ ಹಾವಳಿ ವಿಪರೀತವಾಗಿದೆ.

ಬೆಂಗಳೂರು : ಶಾಸಕ ಹ್ಯಾರಿಸ್ ಮಗನಿಂದ ನಡೆದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಂಡಲ ಅಧ್ಯಕ್ಷ ವಾಸುದೇವ್ ಮೂರ್ತಿ ಪ್ರತಿಕ್ರಿಯಿಸಿದ್ದಾರೆ. ಇದೊಂದು ದೌರ್ಜನ್ಯವಾಗಿದೆ. ಶಾಂತಿನಗರ ಕ್ಷೇತ್ರ ರೌಡಿಸಂ ಕ್ಷೇತ್ರವಾಗಿದೆ. ಗಾಂಜಾ ಹಾವಳಿ ವಿಪರೀತವಾಗಿದೆ.

ಪೊಲೀಸರಿಗೆ ದೂರನ್ನು ನೀಡಿದರೂ ತೆಗೆದುಕೊಳ್ಳಲ್ಲ. ದೂರು ಕೊಟ್ಟವರ ಮೇಲೆಯೇ ಕ್ರಮ ಕೈಗೊಳ್ಳುತ್ತಾರೆ. ಹ್ಯಾರಿಸ್ ಮಗನದ್ದೊಂದೆ ಪ್ರಕರಣವಲ್ಲ ಎಂದು ಹೇಳಿದ್ದಾರೆ. 

ಇಲ್ಲಿ ಅನೇಕ ರೀತಿಯ ಗಲಾಟೆ ನಡೆದಿವೆ. ಬೌರಿಂಗ್ ಇನ್ಸ್ಟಿಟ್ಯೂಟ್ ಗಲಾಟೆ, ರಿಚ್ಮಂಡ್  ಹೋಟೆಲ್ ಗಲಾಟೆ ಇರಬಹುದು ಯಾವುದೇ ದೂರು ದಾಖಲಾಗುವುದಿಲ್ಲ. ಸಂಜೆ 6 ಗಂಟೆಯೊಳಗೆ ನಲಪಾಡ್ ಬಂಧಿಸಿಲ್ಲ ಎಂದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಪೊಲೀಸರು ಎಲ್ಲರೂ ಅವರ ಚೇಲಾಗಳಾಗಿದ್ದಾರೆ. ಅವರ ಪರವಾಗಿಯೇ  ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ