
ಕೋಲಾರ(ಎ.01): ಸರಿಯಾಗಿ ಓದುತ್ತಿಲ್ಲ ಎಂದು ಕೋಪಗೊಂಡ ಶಿಕ್ಷಕಿಯೋರ್ವಳು ಒಂದನೇ ತರಗತಿ ವಿದ್ಯಾರ್ಥಿಯ ಕೈ ಮೂಳೆ ಮುರಿಯೋ ಹಾಗೆ ಹೊಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೋಲಾರದ ಗಾಂಧಿನಗರದ ಸರ್ಕಾರಿಯಲ್ಲಿ ಈ ಘಟನೆ ನಡೆದಿದ್ದು, ಒಂದನೇ ತರಗತಿ ವಿದ್ಯಾರ್ಥಿ ಧನುಷ್ ಸರಿಯಾಗಿ ತರಗತಿಯಲ್ಲಿ ಓದುತ್ತಿಲ್ಲ ಎಂದು ವೀಣಾ ಎಂಬ ಶಿಕ್ಷಕಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಧನುಷ್ ಕೈಗೆ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಿಕ್ಷಕಿ ವೀಣಾ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಕೋಲಾರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.