ಸಾಲ ಕಟ್ಟದಿದ್ದರೆ 15 ದಿನದಲ್ಲಿ ಕೇಸ್ ದಾಖಲಿಸಿ‌ ಕಾನೂನು ಕ್ರಮ ಕೈಗೊಳ್ಳುತ್ತೇವೆ: ಸರ್ಕಾರದ ಆದೇಶವನ್ನೂ ದಿಕ್ಕರಿಸಿ ರೈತರಿಗೆ ನೋಟಿಸ್

By Suvarna Web DeskFirst Published Apr 1, 2017, 3:05 AM IST
Highlights

ಒಂದೆಡೆ ಸರ್ಕಾರ ರೈತರಿಂದ ಬಲವಂತವಾಗಿ ಸಾಲ‌ ವಸೂಲಾತಿ ಮಾಡುವುದಿಲ್ಲ ಅಂತಾ ಹೇಳುತ್ತಿತ್ತು. ಆದರೆ ಬ್ಯಾಂಕ್'ಗಳ ಮಾತ್ರ ರೈತರಿಗೆ ಸಾಲ ಕಟ್ಟದಿದ್ದರೆ 15 ದಿನದಲ್ಲಿ ಕೇಸ್ ದಾಖಲಿಸಿ‌ ಕಾನೂನು ಕ್ರಮ ‌ಜರುಗಿಸುವ ಎಚ್ಚರಿಕೆ ನೀಡಿ‌ ನೋಟಿಸ್ ಜಾರಿ ಮಾಡಿವೆ. ಬರಗಾಲ ದಿಂದ ಕಂಗೆಟ್ಟ ರೈತರಿಗೆ ಬ್ಯಾಂಕ್ ನೋಟಿಸ್ ಗಾಯದ‌ ಮೇಲೆ ಬರೆ ಎಳೆದಂತಾಗಿದೆ.

ಹುಬ್ಬಳ್ಳಿ(ಎ.01): ಒಂದೆಡೆ ಸರ್ಕಾರ ರೈತರಿಂದ ಬಲವಂತವಾಗಿ ಸಾಲ‌ ವಸೂಲಾತಿ ಮಾಡುವುದಿಲ್ಲ ಅಂತಾ ಹೇಳುತ್ತಿತ್ತು. ಆದರೆ ಬ್ಯಾಂಕ್'ಗಳ ಮಾತ್ರ ರೈತರಿಗೆ ಸಾಲ ಕಟ್ಟದಿದ್ದರೆ 15 ದಿನದಲ್ಲಿ ಕೇಸ್ ದಾಖಲಿಸಿ‌ ಕಾನೂನು ಕ್ರಮ ‌ಜರುಗಿಸುವ ಎಚ್ಚರಿಕೆ ನೀಡಿ‌ ನೋಟಿಸ್ ಜಾರಿ ಮಾಡಿವೆ. ಬರಗಾಲ ದಿಂದ ಕಂಗೆಟ್ಟ ರೈತರಿಗೆ ಬ್ಯಾಂಕ್ ನೋಟಿಸ್ ಗಾಯದ‌ ಮೇಲೆ ಬರೆ ಎಳೆದಂತಾಗಿದೆ.

ಬರದ ಮೇಲೆ ಬರೆ: ಬಲವಂತವಾಗಿ ಸಾಲ ವಸೂಲಾತಿಗೆ ಮುಂದಾದ ಬ್ಯಾಂಕ್

ಮಳೆಯಿಲ್ಲದೆ ಬೆಳೆಯಿಲ್ಲ ಜೀವನ ನಡೆಸುವುದು ಹೇಗಪ್ಪ ಎಂದು ತಲೆಕೆಡಿಸಿಕೊಂಡಿದ್ದ ರೈತರಿಗೆ ಬ್ಯಾಂಕ್ ಸಾಲ ಪಾವತಿಗೆ ನೋಟಿಸ್ ನೀಡಿದೆ. ವಿಜಯಬ್ಯಾಂಕ್'​ನ ಬಂಡಿವಾಡ, ಕೋಳಿವಾಡ ಶಾಖೆಗಳು 150ಕ್ಕೂ ಹೆಚ್ಚು ರೈತರಿಗೆ 15 ದಿನಗಳೊಳಗೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿವೆ. ಇದು ಬರದಿಂದ ತತ್ತರಿಸಿದ ರೈತರನ್ನು ಕಂಗಾಲಾಗಿಸಿವೆ.

ತೀವ್ರ ಬರಗಾಲವಿದೆ, ಬ್ಯಾಂಕ್​ಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಸರ್ಕಾರವೇ ಆದೇಶ ನೀಡಿದರೂ ಬ್ಯಾಂಕ್​'ಗಳು ಇದಕ್ಕೆ ಮನ್ನಣೆ ನೀಡಿಲ್ಲ. ಇತ್ತ ಸರ್ಕಾರ ಕೂಡ ಸಾಲ ಮನ್ನ ಮಾಡುತ್ತಿಲ್ಲ. ಹೀಗಾದರೆ ನಾವು ಬದುಕುವುದೇ ಕಷ್ಟ ಎನ್ನುವುದು ರೈತರ ಅಳಲು.

ಬರ, ರೈತರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಇದರ ಮಧ್ಯೆ ಈಗ ಬ್ಯಾಂಕ್'​ಗಳು ರೈತರನ್ನು ಕಟಕಟೆ ಮೆಟ್ಟಿಲೇರಿಸಲು ಮುಂದಾಗಿದ್ದು ಸರ್ಕಾರ ಮಧ್ಯ ಪ್ರವೇಶ ಮಾಡಬೇಕಿದೆ.

click me!