2 ದಿನ ಉಪವಾಸವಿದ್ದು ಶೌಚಾಲಯ ಕಟ್ಟಿಸಿಕೊಂಡಳು

By Suvarna Web DeskFirst Published Feb 26, 2018, 10:42 AM IST
Highlights

ಶೌಚಾಲಯ ನಿರ್ಮಾಣಕ್ಕಾಗಿ ಪಟ್ಟು ಹಿಡಿದ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಅನ್ನ, ನೀರು ತ್ಯಜಿಸಿ 2 ದಿನ ಉಪವಾಸ ಮಾಡುವ ಮೂಲಕ ತನ್ನ ಬೇಡಿಕೆ ಈಡೇರಿಸಿಕೊಂಡಿದ್ದಾಳೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದ ವಿದ್ಯಾರ್ಥಿನಿ ಮಹಾಂಕಾಳಿಯ ಈ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬಳ್ಳಾರಿ: ಶೌಚಾಲಯ ನಿರ್ಮಾಣಕ್ಕಾಗಿ ಪಟ್ಟು ಹಿಡಿದ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಅನ್ನ, ನೀರು ತ್ಯಜಿಸಿ 2 ದಿನ ಉಪವಾಸ ಮಾಡುವ ಮೂಲಕ ತನ್ನ ಬೇಡಿಕೆ ಈಡೇರಿಸಿಕೊಂಡಿದ್ದಾಳೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದ ವಿದ್ಯಾರ್ಥಿನಿ ಮಹಾಂಕಾಳಿಯ ಈ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಮಹಾಂಕಾಳಿ ತನ್ನ ಪೋಷಕರನ್ನು ಒತ್ತಾಯಿಸಿದ್ದಳು. ಇದಕ್ಕೆ ಪೋಷಕರು ಒಪ್ಪದಿದ್ದಾಗ, 15 ದಿನಗಳ ಹಿಂದೆ ಮಹಾಂಕಾಳಿ ಉಪವಾಸ ಆರಂಭಿಸಿದ್ದಾಳೆ. 2 ದಿನದ ಬಳಿಕ ಈ ವಿಚಾರ ಗ್ರಾ.ಪಂ. ಅಧ್ಯಕ್ಷರ ಗಮನಕ್ಕೆ ಬಂದಿದೆ. ಅವರು ಮಹಾಂಕಾಳಿ ಹೋರಾಟಕ್ಕೆ ಸ್ಪಂದಿಸಿದ್ದಾರೆ.

ಗ್ರಾಪಂನಿಂದ 15000ಅನುದಾನ ನೀಡಿ ವಿದ್ಯಾರ್ಥಿನಿ ಮನೆ ಸಮೀಪ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಇನ್ನು ಶೌಚಾಲಯ ನಿರ್ಮಾಣದ ವೇಳೆ ಮಹಾಂಕಾಳಿ ಸಹ ಕೂಲಿಯಾಳುಗಳ ಜತೆ ಕೈ ಜೋಡಿಸಿದ್ದಾಳೆ. ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯಾರ್ಥಿನಿ ಸಂತಸಗೊಂಡಿದ್ದಾಳೆ.

click me!