
ಕಲಬುರಗಿ : ಮಾತೆ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ಹೋಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬರಿಗೈಲಿ ಮರಳಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಯಾನಾಗುಂದಿ ಬೆಟ್ಟದ ಬಳಿ ಇರುವ ಮಾತೆ ಮಾಣಿಕೇಶ್ವರಿ ಅಮ್ಮನ ದರ್ಶನಕ್ಕೆ ಹೋಗಿದ್ದು, ದರ್ಶನ ಸಿಗದೆ ವಾಪಸಾಗಿದ್ದಾರೆ.
ಅಮಿತ್ ಶಾ ಅವರು ಸುಮಾರು ಅರ್ಧ ಗಂಟೆ ಕಾದರೂ ಕೂಡ ಮಾಣಿಕೇಶ್ವರಿ ಅಮ್ಮ ಗುಹೆಯಿಂದ ಹೊರಬಂದಿರಲಿಲ್ಲ. ಬಳಿಕ ಸಮಯದ ಅಭಾವದಿಂದ ದರ್ಶನ ಪಡೆಯದೇ ವಾಪಸಾಗಿದ್ದಾರೆ. ಅಮ್ಮನ ದರ್ಶನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಗೆ ಅಪಶಕುನ ಕಾದಿದೆಯಾ ಎಂಬುವ ಅನುಮಾನಗಳೂ ಕೂಡ ಮೂಡಿವೆ.