ನೋಟು ನಿಷೇಧ: ಜನರಿಗೆ ಅನುಕೂಲ ಮಾಡಿಕೊಡುವಂತೆ ಬ್ಯಾಂಕರ್ ಗಳಿಗೆ ಡಿಸಿ ಸೂಚನೆ

Published : Nov 15, 2016, 03:31 PM ISTUpdated : Apr 11, 2018, 12:56 PM IST
ನೋಟು ನಿಷೇಧ: ಜನರಿಗೆ ಅನುಕೂಲ ಮಾಡಿಕೊಡುವಂತೆ ಬ್ಯಾಂಕರ್ ಗಳಿಗೆ ಡಿಸಿ ಸೂಚನೆ

ಸಾರಾಂಶ

ಮದುವೆ ಹಾಗೂ ಇನ್ನಿತರ ಸಮಾರಂಭಗಳನ್ನು ಮಾಡುವ ಸಾರ್ವಜನಿಕರು ದೊಡ್ಡ ಮೊತ್ತ ನಿರೀಕ್ಷಿಸಿದಲ್ಲಿ ನಿಯಮಾನುಸಾರ ಅನುಕೂಲ ಮಾಡಿಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಸೂಚಿಸಿದ್ದಾರೆ.

ಶಿವಮೊಗ್ಗ (ನ.15):  ಮದುವೆ ಹಾಗೂ ಇನ್ನಿತರ ಸಮಾರಂಭಗಳನ್ನು ಮಾಡುವ ಸಾರ್ವಜನಿಕರು ದೊಡ್ಡ ಮೊತ್ತ ನಿರೀಕ್ಷಿಸಿದಲ್ಲಿ ನಿಯಮಾನುಸಾರ ಅನುಕೂಲ ಮಾಡಿಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಸೂಚಿಸಿದ್ದಾರೆ.

ಹಳೆಯ ನೋಟುಗಳ ಚಲಾವಣೆ ರದ್ದು ಮಾಡಿ ಹೊಸ ನೋಟುಗಳ ಚಲಾವಣೆಗೆ ಬಂದಿರುವುದರಿಂದ ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ನೋಟುಗಳ ಬದಲಾವಣೆಗಾಗಿ ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಂತು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಿವಮೊಗ್ಗ ಜಿಲ್ಲೆಯ ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ನ.೮ರಂದು ನೋಟುಗಳ ಚಲಾವಣೆ ರದ್ದಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರ್ಯಾಯ ಹಣಕಾಸು ವ್ಯವಸ್ಥೆಗಾಗಿ ಬ್ಯಾಂಕ್‌ಮುಂದೆ ಸಾಲುಗಟ್ಟಿ ನಿಂತು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರದ ನಿಯಮಾನುಸಾರ ನಿರ್ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಮಹಿಳೆಯರಿಗೆ ವೃದ್ಧರಿಗೆ ಪ್ರತ್ಯೇಕ ಸಾಲು ವ್ಯವಸ್ಥೆ ಹಾಗೂ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಹಾಗೂ ಸಿಸಿಟಿವಿ, ಗ್ರಾಹಕರ ಸುರಕ್ಷತೆಗೆ ಭದ್ರತೆಗೂ ಸೂಚಿಸಲಾಗಿದೆ ಎಂದರು.

ಭಾರತೀಯ ರಿಸರ್ವ ಬ್ಯಾಂಕ್ 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿರುವುದರಿಂದ ಸಾರ್ವಜನಿಕರಿಗೆ ಆಗಿರುವ ಸಮಸ್ಯೆ ತಾತ್ಕಾಲಿಕವಾಗಿದ್ದು ಶೀಘ್ರವೇ ಬ್ಯಾಂಕ್ ವ್ಯವಸ್ಥೆ ಸಹಜಸ್ಥಿತಿಗೆ ಮರಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಹೇಳಿದ್ದಾರೆ.

ಹಳೆಯ ನೋಟುಗಳ ಬದಲಾವಣೆ ಡಿಸೆಂಬರ್ 31ರವರೆಗೂ ಅವಕಾಶವಿದ್ದು, ನವೆಂಬರ್ ೨೪ರವರೆಗೂ ಪೆಟ್ರೋಲ್ ಬಂಕ್, ಎಲೆಕ್ಟ್ರೀಕ್ ಬಿಲ್ ಪಾವತಿ, ವಾಟರ್ ಬಿಲ್ ಪಾವತಿ, ದೂರವಾಣಿ ಬಿಲ್ ಪಾವತಿಗೆ ಹಳೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ. ಅಲ್ಲದೆ ಎಟಿಎಂಗಳೂ ಶೀಘ್ರವೇ ಕರ್ತವ್ಯ ನಿರ್ವಹಿಸುವುದರಿಂದ ಸಾರ್ವಜನಿಕರು ಯಾವುದೇ ಆತಂಕಪಡದೆ ಬ್ಯಾಂಕ್‌ಗಳೊಂದಿಗೆ ಸಹಕರಿಸಬೇಕು ಎಂದರು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ