ಮೋಹಿನಿ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ

By Web DeskFirst Published Oct 11, 2016, 3:10 PM IST
Highlights

ಶೃಂಗೇರಿ (ಅ.11): ಶರನ್ನವರಾತ್ರಿ ಅಂಗವಾಗಿ ಭಾನುವಾರ ಶಾರದೆಗೆ ಮೋಹಿನಿ ಅಲಂಕಾರ ಮಾಡಲಾಗಿತ್ತು. ಕೈಯಲ್ಲಿ ಅಮೃತ ಕಲಶ ಹಿಡಿದು ತನ್ನ ರೂಪ ಲಾವಣ್ಯಗಳಿಂದ ದುಷ್ಟರು, ಕ್ರೂರಿಗಳೂ ಆದ ರಾಕ್ಷಸರನ್ನು ಮೋಹಗೊಳಿಸಿ ದೇವತೆಗಳಿಗೆ ಅಮೃತ ಲಭಿಸುವಂತೆ ಮಾಡಿದ ಮೋಹಿನಿಯ ರೂಪ ಭಕ್ತರ ಮನಸೂರೆಗೊಂಡಿತು.

ದೇಶ ವಿದೇಶಗಳ ರಾಜ ಮಹಾರಾಜರು ಸುಮಾರು 600 ವರ್ಷಗ ಹಿಂದೆ ಶಾರದೆಗೆ ಸಮರ್ಪಿಸಿದ ಸಕಲಾಭರಣ ಸೇರಿದಂತೆ ಪೀಠದ ಖಜಾನೆಯಲ್ಲಿದ್ದ ಎಲ್ಲಾ ಆಭರಣ ತೊಡಿಸಿ ಶಾರದೆಯನ್ನು ಅಲಂಕರಿಸಲಾಗಿತ್ತು.

ಮೈಸೂರು ರಾಜಲಾಂಛನ ಗಂಢ ಬೇರುಂಡ ಪದಕವುಳ್ಳ ಏಳುಸುತ್ತಿನ ಮುತ್ತಿನ ಹಾರ, ವಜ್ರ ರತ್ನಗಳಿಂದ ಮಕರ ರೂಪದಲ್ಲಿ ಮಾಡಲಾದ ಮಕರ ಕಂಠಿ, ಜಮಖಂಡಿ ರಾಜ ನೀಡಿದ ಜಮಖಂಡಿ ಕಂಠಿ, ಲಲಿತ ಸಹಸ್ರನಾಮವಿರುವ ಸ್ವರ್ಣ ಸಹಸ್ರಮಾಲೆ, ವಜ್ರಕಂಠಿ, ವಿವಿಧ ಆಭರಣಗಳಿಂದ ಅಲಂಕರಿಸಲಾಗಿತ್ತು.

ಸೋಮವಾರ ಶಾರದೆಗೆ ಸಿಂಹವಾಹನಲಂಕಾರ ಮಾಡಲಾಗುವುದು. ಮಠದ ಯಾಗಶಾಲೆಯಲ್ಲಿ ನಡೆಯುತ್ತಿರುವ ಶತಚಂಡೀಯಾಗದ ಪೂರ್ಣಹುತಿ ನೆರವೇರಲಿದೆ. ಗಜಾಶ್ವಪೂಜೆ, ಮಹಾನವಮಿ ಉತ್ಸವ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಮಹೋತ್ಸವದಲ್ಲಿ ಚೈನ್ನೈನ ಸಂಗೀತ ಕಲಾನಿಧಿ ವಿದ್ವಾನ್‌ ಕದ್ರಿ ಗೋಪಾಲ್‌ನಾಥನ್‌ ತಂಡದವರಿಂದ ಸ್ಯಾಕ್ಸೋಪೋನ್‌ ನಡೆಯಲಿದೆ. ಮಂಗಳವಾರ ಗಜಲಕ್ಷ್ಮೀ ಅಲಂಕಾರ, ವಿಜಯೋತ್ಸವ, ವಿಜಯದಶಮಿ, ಶಮೀಪೂಜೆ ನೆರವೇರಲಿದೆ.

click me!