
ಬಳ್ಳಾರಿ(ಎ.26): ವೈಭೋಗದ ಜೀವನಕ್ಕೆ ಕೋಟ್ಯಾಧೀಶನ ಮಗಳು ಇತಿಶ್ರೀ ಹಾಡಿದ್ದಾಳೆ. ರಾಜಭೋಗದಲ್ಲೇ ಬೆಳೆದ 26 ಪ್ರಾಯದ ತರುಣೆ ಸರ್ವಸ್ವವನ್ನ ತ್ಯಜಿಸಿ ಸನ್ಯಾಸಿನಿಯಾಗಲು ನಿರ್ಧರಿಸಿದ್ದಾಳೆ. ಜೈನ ಧರ್ಮದ ಪ್ರಕಾರ ದೀಕ್ಷೆ ಸ್ವೀಕರಿಸಿ ಸನ್ಯಾಸಿಯಾದ ಕಲ್ಪನಾ ಕುರಿತು ಸ್ಟೋರಿ ಇಲ್ಲಿದೆ ನೋಡಿ.
ಆಧ್ಯಾತ್ಮದ ಮೂಲಕ ಸಮಾಜಕ್ಕೆ ಏನಾದ್ರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಸನ್ಯಾಸಿನಿಯಾಗಿ ವೈಭೋಗ ಜೀವನಕ್ಕೆ ಕಲ್ಪನಾ ಇತಿಶ್ರೀ ಹಾಡಿದ್ದಾರೆ. ಬಳ್ಳಾರಿಯ ಕಂಪ್ಲಿ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ 26 ವಯಸ್ಸಿನ ಕಲ್ಪನಾ ಸಿಂಘವಿ ಸನ್ಯಾಸತ್ಯ ದೀಕ್ಷೆಯನ್ನು ಪಡೆದು ಇತರರಿಗೆ ಮಾದರಿಯಾಗಿದ್ದಾಳೆ. ಜೈನ ಪ್ರವಚನಗಳಿಗೆ ಹೆಚ್ಚು ಆಸಕ್ತಳಾಗಿದ್ದು, ಪೋಷಕರ ವಿರೋಧದ ನಡುವೆಯೂ ಸನ್ಯಾಸತ್ವವನ್ನೂ ಕೂಡ ಪಡೆದಿದ್ದಾರೆ.
ಬಳ್ಳಾರಿಯ ಕಂಪ್ಲಿ ಪಟ್ಟಣದ ವ್ಯಾಪಾರಿ ಜಯರಾಜ್ ಸಂಘವಿ ತನ್ನ ನಾಲ್ಕನೇ ಮಗಳ ದೀಕ್ಷಾ ಕಾರ್ಯಕ್ರಮಕ್ಕೆ ಸಂಭ್ರಮ ಸಡಗರದಿಂದ ಜರುಗಿಸಿದರು. ಬರೋಬ್ಬರಿ 1 ಕೋಟಿ ಖರ್ಚಿನಲ್ಲಿ ದೀಕ್ಷಾದಾತ ಆಚಾರ್ಯ ಭಗವಂತ ಶ್ರೀಮದ್ ವಿಜಯಅಜಿತ್ ಸುರೇಶ್ವರಜಿ ಮಹಾರಾಜ ಇವರ ಸಾನಿಧ್ಯದಲ್ಲಿ ಕಲ್ಪನಾ ಸಿಂಘವಿ ದೀಕ್ಷೆ ಸ್ವೀಕರಿಸಿದ್ರು. ಸಮಾಜಮುಖಿ ಕಾರ್ಯಕ್ಕೆ ಒತ್ತು ನೀಡಿದರು. ಜೈನ ಶ್ರೀಗಳ ಬೋಧನೆಯಿಂದ ಪ್ರೇರಿತನಾಗಿ ಸನ್ಯಾನಿಸಿ ದೀಕ್ಷೆ ಪಡೆದಿದ್ದೇನೆ ಎಂದ್ರು.
3 ಜೈನ ಧರ್ಮದ ಪ್ರಕಾರ ಸನ್ಯಾನ ದೀಕ್ಷೆ ಪಡೆದವರು ಸಾಕಷ್ಟು ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ದೀಕ್ಷೆ ಪಡೆದ ಮೇಲೆ ತನ್ನ ಕುಟುಂಬ, ಶ್ರೀಮಂತರಿಕೆ ಜೀವನ ತೊರೆದು, ಸೂಕ್ಷ್ಮ ಜೀವಿಗೂ ತೊಂದರೆಯಾಗದಂತೆ ಜೀವನ ನಡೆಸುತ್ತ ಜೈನ ಧರ್ಮ ಪ್ರಸಾರ ಮಾಡುತ್ತ ಮುಂದಡಿ ಇಡಬೇಕು. ಇಂಥದೊಂದು ಕಠಿಣ ದೀಕ್ಷೆಯನ್ನು ಮೊಬೈಲ್ ಯುಗದಲ್ಲಿ 26ರ ತರುಣಿ ಪಡೆದಿರುವುದು ನಿಜಕ್ಕೂ ವಿಶೇಷವೇ ಸರಿ.