ಮದುವೆಗೆ ಒಂದು ವಾರವಿರುವಾಗ ಅಣ್ಣನಾಗಬೇಕಾದವನೊಂದಿಗೆ ಪರಾರಿಯಾದ ಯುವತಿ!

Published : Apr 22, 2017, 04:10 AM ISTUpdated : Apr 11, 2018, 12:47 PM IST
ಮದುವೆಗೆ ಒಂದು ವಾರವಿರುವಾಗ ಅಣ್ಣನಾಗಬೇಕಾದವನೊಂದಿಗೆ ಪರಾರಿಯಾದ ಯುವತಿ!

ಸಾರಾಂಶ

ಆ ಯುವತಿಗೆ ಮದುವೆ ನಿಶ್ಚಯವಾಗಿತ್ತು, ಮದುವೆಗೆ ಒಂದು ವಾರ ಇರುವಾಗಲೇ ಪ್ರೀತಿಸಿದವನ ‌ಜೊತೆ ಓಡಿ ಹೋಗಿದ್ದಾಳೆ. ಯುವತಿ ಓಡಿಹೋಗಿದ್ದರಿಂದ ಮದುವೆ ಮುರಿದು ಬಿದ್ದಿದೆ. ಆದರೆ ಓಡಿಸಿಕೊಂಡ ಹೋದ ಯುವಕ  ಯುವತಿಗೆ ಅಣ್ಣನಾಗಬೇಂತೆ. ಏನಿದು ವಿಚಿತ್ರ ಲವ್ ಸ್ಟೋರಿ ಅಂತೀರಾ? ಇಲ್ಲಿದೆ ವಿವರ.

ಹುಬ್ಬಳ್ಳಿ(ಎ.22): ಆ ಯುವತಿಗೆ ಮದುವೆ ನಿಶ್ಚಯವಾಗಿತ್ತು, ಮದುವೆಗೆ ಒಂದು ವಾರ ಇರುವಾಗಲೇ ಪ್ರೀತಿಸಿದವನ ‌ಜೊತೆ ಓಡಿ ಹೋಗಿದ್ದಾಳೆ. ಯುವತಿ ಓಡಿಹೋಗಿದ್ದರಿಂದ ಮದುವೆ ಮುರಿದು ಬಿದ್ದಿದೆ. ಆದರೆ ಓಡಿಸಿಕೊಂಡ ಹೋದ ಯುವಕ  ಯುವತಿಗೆ ಅಣ್ಣನಾಗಬೇಂತೆ. ಏನಿದು ವಿಚಿತ್ರ ಲವ್ ಸ್ಟೋರಿ ಅಂತೀರಾ? ಇಲ್ಲಿದೆ ವಿವರ.

ಓಡಿಹೋದ ಆ ಯುವಕ  ಯುವತಿಯ ಹೆಸರು ಗೀತಾ, ಮತ್ತು ಪಕ್ಕಿರೇಶ್. ವರಸೆಯಲ್ಲಿ ಅವರಿಬ್ಬರು ಅಣ್ಣ-ತಂಗಿ, ಆದರೆ ಪ್ರೀತಿ ಎಂಬ ಮಾಯೆಯೊಳಗೆ ಬಿದ್ದು, ಕೌಟುಂಬಿಕ ಸಂಬಂಧಗಳಿಗೆ ತಿಲಾಂಜಲಿ ಇಟ್ಟು ಪರಸ್ಪರ ಪ್ರೀತಿಸಿ ಮನೆಬಿಟ್ಟು ಓಡಿಹೋಗಿದ್ದಾರೆ. ಗೀತಾಳ ಮನೆಯವರು ಮದುವೆ ಆಮಂತ್ರಣ ಹಂಚಿಕೆ ಮಾಡಿ, ಸಿದ್ದತೆ ಮಾಡಿಕೊಂಡಿದ್ದರು. ಆದರೆ ಗೀತಾ ತಾನು ಪ್ರೀತಿಸಿದ ಪಕ್ಕಿರೇಶ್ ಜೊತೆ ಓಡಿಹೋಗಿದ್ದಾಳೆ.

ತರಿಹಾಳದ ಕೈಗಾರಿಕಾ ಪ್ರದೇಶದಲ್ಲಿ ಗೀತಾ ಕೆಲಸಕ್ಕೆ ಹೋಗುತ್ತಿದ್ದಾಗ ಅದೇ ಕಾರ್ಖಾನೆಯಲ್ಲಿ ಪಕ್ಕಿರೇಶ ಸಹ ಡ್ರೈವರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೇವಲ ೧೫ ದಿನದಲ್ಲಿ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು  ಗೀತಾ ಮತ್ತು ಪಕ್ಕಿರೇಶ ಮನೆಬಿಟ್ಟು ಓಡಿಹೋಗಿದ್ದಾರೆ. ಮದುವೆಗೆಂದು ತೆಗೆದಿಟ್ಟಿದ್ದ ಎಪ್ಪತ್ತು ಸಾವಿರ ರೂಪಾಯಿ ನಗದು, ನಲ್ವತ್ತು ಗ್ರಾಂ ಚಿನ್ನಾಭರಣದೊಂದಿಗೆ ಗೀತಾ ಪಕ್ಕಿರೇಶ್ ಜೊತೆ ಪರಾರಿಯಾಗಿದ್ದಾಳಂತೆ.

ಒಟ್ಟಾರೆ, ಮದುವೆ ಮುರಿದು ಬಿದ್ದ ನೋವು ಒಂದಡೆಯಾದರೆ, ವರಸೆಯಲ್ಲಿ ಅಣ್ಣನಾಗಬೇಕಾದವನ ಜೊತೆ ಓಡಿ ಓಗಿದ್ದಾಳೆ ಅನ್ನೊ ದುಖಃ ಎರಡು ಕುಟುಂಬದವರನ್ನೂ ಕಾಡುತ್ತಿದೆ. ಹೇಗಾದರೂ ಮಾಡಿ ಅವರನ್ನು ಹುಡುಕಿ‌ಕೊಡಿ ಎಂದು ಗ್ರಾಮೀಣ ಪೊಲೀಸ್ ಠಾಣೆಗೆ  ಗೀತಾಳ ಕುಟುಂಬ ದೂರು ನೀಡಿದೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ