ಸೋನಿಯಾರನ್ನು ಗೆಲ್ಲಿಸಿದ ಜನರಿಂದ ಜನಾಶೀರ್ವಾದ ಬೇಡಿದ ರಾಹುಲ್ ಗಾಂಧಿ

Published : Feb 10, 2018, 04:33 PM ISTUpdated : Apr 11, 2018, 12:36 PM IST
ಸೋನಿಯಾರನ್ನು ಗೆಲ್ಲಿಸಿದ ಜನರಿಂದ ಜನಾಶೀರ್ವಾದ ಬೇಡಿದ ರಾಹುಲ್ ಗಾಂಧಿ

ಸಾರಾಂಶ

- ಸೋನಿಯಾ ಗಾಂಧಿ ರಾಜ್ಯದಲ್ಲಿ ಸ್ಪರ್ಧಿಸಿದ ಗೆದ್ದ ಕ್ಷೇತ್ರದಿಂದಲ್ ಚುನಾವಣಾ ಪ್ರಚಾರ ಆರಂಭಿಸಿದ ರಾಹುಲ್ ಗಾಂಧಿ. - ಹೊಸಪೇಟೆಯಲ್ಲಿ ಜನಾಶೀರ್ವಾದ ಯಾತ್ರೆ ಮೂಲಕ ಚುನಾವಣಾ ರಣ ಕಹಳೆ ಮೊಳಗಿಸಿದ ರಾಹುಲ್ ಗಾಂಧಿ.

ಹೊಸಪೇಟೆ: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದು, ಬಳ್ಳಾರಿ ಜಿಲ್ಲೆಯಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ತಾಯಿ ಸೋನಿಯಾ ಗಾಂಧಿಯವರನ್ನು ಸುಷ್ಮಾ ಸ್ವರಾಜ್ ವಿರುದ್ಧ ಜನತೆಗೆ ಮತ್ತೊಮ್ಮೆ ಕಾಂಗ್ರೆಸ್ಸಿಗೆ ಜನಾದೇಶ ನೀಡುವಂತೆ ಆಗ್ರಹಿಸಿದ ರಾಹುಲ್, ಮೋದಿ ನೇತೃತ್ವದ ಕಾಂಗ್ರೆಸ್ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದರು. ನುಡಿದಂತೆ ಕಾಂಗ್ರೆಸ್ ಸರಕಾರ ನಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಕೆಲಸ ಮಾಡಲು ಪಕ್ಷಕ್ಕೆ ಇನ್ನೊಮ್ಮೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಮೋದಿಯಿಂದ ಉದ್ಯಮಿಗಳಿಗೆ ಸಹಾಯ

'ಗುಜರಾತ್ ಪ್ರವಾಸ ಮಾಡಿದ್ದೇನೆ. ರಾಜ್ಯವನ್ನೇ ಬದಲಾಯಿಸಿದ್ದೇನೆ ಎನ್ನುತ್ತಾರೆ ಮೋದಿ. ಆದರೆ, ರಾಜ್ಯ ಬದಲಾಗಿದ್ದು ರೈತರು, ವ್ಯಾಪಾರಿ, ಕಾರ್ಮಿಕ ವರ್ಗದ ಶ್ರಮದಿಂದ. ಕೇವಲ ಹತ್ತು ಜನ ವ್ಯಾಪಾರಿಗಳಿಗೆ ಗುಜರಾತ್ ಕೊಟ್ಟಿದ್ದಾರೆ. ನಲವತ್ತು ಸಾವಿರ ಎಕರೆ ಭೂಮಿಯನ್ನು ಒಂದು ರೂಪಾಯಿಗೆ  ಎಕರೆಗೆ ನೀಡಿದ್ದಾರೆ. ಟಾಟಾ ನ್ಯಾನೋ ಕಂಪನಿಗೆ ಉಚಿತವಾಗಿ ಭೂಮಿ, ಕರೆಂಟ್ ಉಚಿವಾಗಿ ನೀಡಿದ್ದಾರೆ. ಆದರಲ್ಲಿ ಕಾರು ಉತ್ಪಾದನೆಯೇ ಆಗುತ್ತಿಲ್ಲ. ಸಾವಿರಾರು ಕೋಟಿ ಅನುದಾನವನ್ನು ಉದ್ಯಮಗಳಿಗೆ ನೀಡುವ ಮೋದಿ, ಸಮಾಜ ಕಲ್ಯಾಣಕ್ಕಾಗಿ ಮಾಡಿದ್ದೇನು?' ಎಂದು ಪ್ರಶ್ನಿಸಿದರು.

ಬಿಜೆಪಿ ಭ್ರಷ್ಟಚಾರದಲ್ಲಿ ಮುಂದು

'ಬಿಜೆಪಿ ಭ್ರಷ್ಟಾಚಾರ ಮಾಡುತ್ತದೆ. ಆದರೆ, ಬಿಜೆಪಿ ಸರಕಾರದಲ್ಲಿ ಕೇಳಿ ಬಂದ ಭ್ರಷ್ಟಾಚಾರ ಹಗರಣಗಳು ಕಾಂಗ್ರೆಸ್ ಸರಕಾರದಲ್ಲಿ ಕೇಳಿ ಬಂದಿಲ್ಲ. ಸದಾ ಸತ್ಯದೊಂದಿಗಿರುತ್ತದೆ ಕಾಂಗ್ರೆಸ್. ಪಕ್ಷವೇ ಯಡಿಯೂರಪ್ಪ ಅವರನ್ನು ಕಡೆಗಣಿಸಿತ್ತು. ಇದೀಗ ಅವರನ್ನೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿದ್ದು, ಅವರು ಗಣಿ, ಭೂ ಹಗರಣ ಅತ್ಯಾಚಾರ ಮಾಡಿದವರ ಜತೆ ನಿಲ್ಲುತ್ತಾರೆ,' ಎಂದು ರಾಹುಲ್ ಆರೋಪಿಸಿದರು.
 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ