ತೀವ್ರಗೊಳ್ಳಲಿದೆ ಬಿಸಿಯೂಟ ಕಾರ್ಯಕರ್ತರ ಪ್ರತಿಭಟನೆ: ನಾಳೆ ಸಂಚಾರದಲ್ಲಿ ವ್ಯತ್ಯಯ

By Suvarna Web DeskFirst Published Feb 7, 2018, 7:26 PM IST
Highlights

ಸರಕಾರಿ ಶಾಲೆಗಳ ಬಿಸಿಯೂಟ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದು, ನಾಳೆ ಇದು ತೀವ್ರಗೊಳ್ಳಲಿದೆ. ರಾಜ್ಯದೆಲ್ಲೆಡೆಯಿಂದ ಕಾರ್ಯಕರ್ತರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಬೆಂಗಳೂರು: ಸರಕಾರಿ ಶಾಲೆಗಳ ಬಿಸಿಯೂಟ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದು, ನಾಳೆ ಇದು ತೀವ್ರಗೊಳ್ಳಲಿದೆ. ರಾಜ್ಯದೆಲ್ಲೆಡೆಯಿಂದ ಕಾರ್ಯಕರ್ತರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿರುವ ಕಾರ್ಯಕರ್ತರು ವಿಧಾನಸೌಧ ಚಲೆೋ ನಡೆಸಲಿದ್ದು, ಸಿಐಟಿಯು ಸಂಘಟನೆಯ ಅಧ್ಯಕ್ಷೆ ವರಲಕ್ಷ್ಮಿ ನೇತೃತ್ವದಲ್ಲಿ ವಿಧಾನಸೌಧವನ್ನು ಮುತ್ತಿಗೆ ಹಾಕಲಾಗುತ್ತಿದೆ. ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಈ ಕಾರ್ಯಕರ್ತರು ವಿಧಾನಸೌಧದವರೆಗೆ ಬೆಳಗ್ಗೆ 10.30ಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು, ಈ ಸಮಯದಲ್ಲಿ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಅಲ್ಲದೇ, ನಾಳೆ ಸರಕಾರಿ ಶಾಲೆಗಳಲ್ಲಿ ಬಿಸಿಯೂಟವೂ ಬಂದ್ ಆಗಲಿದೆ.

click me!