
ತರೀಕೆರೆ(ಅ.13): ಸಮೀಪದ ನಂದಿಬಟ್ಟಲು ಗ್ರಾಮದಲ್ಲಿ ಕೋಟೆ ರಂಗನಾಥ ಸ್ವಾಮಿ ಮತ್ತು ಲಕ್ಷ್ಮೀ ದೇವಿಯ ನೂತನ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವಿವಿಧ ಹೋಮ ಹವನಾದಿಗಳನ್ನು ದೇವಸ್ಥಾನದ ಆಡಳಿತಾಧಿಕಾರಿ ಎನ್.ಜಿ. ಭದ್ರೇಗೌಡರ ನೇತೃತ್ವದಲ್ಲಿ ನಡೆಸಲಾಯಿತು.
ನೂತನ ವಿಗ್ರಹ ಪ್ರತಿಷ್ಠಾಪನೆಯ ಜೊತೆಗೆ ಈ ವರ್ಷ ರಾಜ್ಯದೆಲ್ಲೆಡೆ ಭೀಕರ ಬರಗಾಲವಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬೆಳೆಗಳಾಗಿ ರಾಜ್ಯ ಸುಭೀಕ್ಷವಾಗಿರಲೆಂದು ವಿವಿಧ ಹೋಮ ಮತ್ತು ಪೂಜಾ ಕಾರ್ಯಕ್ರಮ ನಡೆಯಿತು.
ಬೀರೂರು ಎನ್.ದೇವರಾಜು ದಂಪತಿ ಮತ್ತು ತರೀಕೆರೆ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ವಸಂತಕುಮಾರ್ ಲಿಂಗದಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಎ.ಕೃಷ್ಣಪ್ಪ, ನಿರ್ದೇಶಕ ನಿಂಗೇಗೌಡ, ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ, ಸದಸ್ಯರಾದ ಪ್ರಭುಕುಮಾರ್ ಇತರರು ಇದ್ದರು.