ಭಾರತಕ್ಕೆ ಬಹುತ್ವ ಅನಿವಾರ್ಯ: ಜಾವೆದ್ ಅಕ್ತರ್

Published : Oct 08, 2016, 10:47 AM ISTUpdated : Apr 11, 2018, 12:46 PM IST
ಭಾರತಕ್ಕೆ ಬಹುತ್ವ ಅನಿವಾರ್ಯ: ಜಾವೆದ್ ಅಕ್ತರ್

ಸಾರಾಂಶ

ಭಾರತಕ್ಕೆ ಬಹುತ್ವ ಅನಿವಾರ್ಯ. ಜಗತ್ತಿನ ಮತ್ಯಾವ ದೇಶದಲ್ಲಿಯೂ ಬಹುತ್ವವನ್ನು ಕಾಣಲು ಸಾಧ್ಯವಿಲ್ಲ. ಭಾರತದ ಭೌಗೋಳಿಕ ಲಕ್ಷಣ, ಭಾಷೆ, ಸಾಂಸ್ಕೃತಿಕತೆ, ವಸ್ತ್ರವಿನ್ಯಾಸ ಎಲ್ಲವೂ ಭಿನ್ನವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಮಹಾರಾಷ್ಟ್ರದಿಂದ ಮಣಿಪುರದವರೆಗೆ ವೈವಿಧ್ಯತೆ ಇದೆ. ಇವೆಲ್ಲಕ್ಕೂ ನಮ್ಮನ್ನು ಒಡ್ಡಿಕೊಳ್ಳುತ್ತಲೇ, ಬೇರೆ ಇದ್ದೇವೆ ಎಂದು ಭ್ರಮಿಸುತ್ತೇವೆ. ಏನೇ ಪ್ರಯತ್ನ ನಡೆದರೂ ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. -ಖ್ಯಾತ ಹಿಂದಿ ಕವಿ ಜಾವೆದ್‌ ಅಕ್ತರ್‌

ಸಾಗರ(ಅ.08): ಬಹುತ್ವವೇ ಭಾರತದ ಹೆಗ್ಗಳಿಕೆಯಾಗಿದೆ. ಬಹುತ್ವವನ್ನು ನಿರಾಕರಿಸಿದರೆ ದೇಶದ ಸ್ವರೂಪವನ್ನೇ ಅಪೇಕ್ಷಿಸಿದಂತೆ ಎಂದು ಖ್ಯಾತ ಹಿಂದಿ ಕವಿ ಜಾವೆದ್‌ ಅಕ್ತರ್‌ ಹೇಳಿದರು.

ತಾಲೂಕಿನ ಹೆಗ್ಗೋಡಿನಲ್ಲಿ ಶನಿವಾರ 5 ದಿನಗಳ ನೀನಾಸಮ್‌ ಸಂಸ್ಕೃತಿ ಶಿಬಿರವನ್ನು ಉದ್ಘಾಟಿಸಿ ಆಶಯದ ಮಾತುಗಳನ್ನಾಡಿದ ಅವರು, ಪ್ರಸ್ತುತ ಈ ಬಹುತ್ವವನ್ನೇ ನಾಶಮಾಡುವ ಹುನ್ನಾರ ನಡೆಯುತ್ತಿದೆ. ಮುಸ್ಲಿಂ ಲೀಗ್‌ ಅಥವಾ ಆರ್‌.ಎಸ್‌.ಎಸ್‌.ನಿಂದ ಹೊರತಾದ ಚಿಂತನೆ ಮಾತ್ರ ಭಾರತದ ಬಹುತ್ವವನ್ನು ಸಂರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.

ಭಾರತಕ್ಕೆ ಬಹುತ್ವ ಅನಿವಾರ್ಯ. ಜಗತ್ತಿನ ಮತ್ಯಾವ ದೇಶದಲ್ಲಿಯೂ ಬಹುತ್ವವನ್ನು ಕಾಣಲು ಸಾಧ್ಯವಿಲ್ಲ. ಭಾರತದ ಭೌಗೋಳಿಕ ಲಕ್ಷಣ, ಭಾಷೆ, ಸಾಂಸ್ಕೃತಿಕತೆ, ವಸ್ತ್ರವಿನ್ಯಾಸ ಎಲ್ಲವೂ ಭಿನ್ನವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಮಹಾರಾಷ್ಟ್ರದಿಂದ ಮಣಿಪುರದವರೆಗೆ ವೈವಿಧ್ಯತೆ ಇದೆ. ಇವೆಲ್ಲಕ್ಕೂ ನಮ್ಮನ್ನು ಒಡ್ಡಿಕೊಳ್ಳುತ್ತಲೇ, ಬೇರೆ ಇದ್ದೇವೆ ಎಂದು ಭ್ರಮಿಸುತ್ತೇವೆ. ಏನೇ ಪ್ರಯತ್ನ ನಡೆದರೂ ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಹುತ್ವ ಎನ್ನುವುದು ಒಂದು ರೀತಿಯ ಸವಾಲು. ಸಾಮಾನ್ಯವಾಗಿ ಹಿಂದಿ ಮತ್ತು ಉರ್ದು ಪ್ರತ್ಯೇಕ ಭಾಷೆಗಳೆಂದು ತಪ್ಪು ಗ್ರಹಿಕೆ ಇದೆ. ಲಿಪಿ, ಶಬ್ದಸಂಪತ್ತು ಮುಂತಾದವುಗಳೆ ಭಾಷೆಯಲ್ಲ. ಮತ್ತೊಂದು ಸಂಸ್ಕೃತಿ, ಇನ್ನೊಂದು ಭಾಷೆಯ ಬಗ್ಗೆ ನಮಗೆ ಅರಿವಿಲ್ಲದೆ ಇರುವುದು ನಮ್ಮೊಳಗಿನ ಕೀಳರಿಮೆಗೆ ಕಾರಣವಾಗಿದೆ. ಒಂದು ಭಾಷೆಯನ್ನು ಬಳಸುತ್ತಿದ್ದೇವೆ ಎಂದುಕೊಂಡರೂ, ಅದರಲ್ಲಿ ಬೇರೆ ಭಾಷೆಯಿಂದ ಎರವಲು ತಂದ ಶಬ್ದಗಳು ಇರುತ್ತವೆ ಎನ್ನುವುದನ್ನು ಮರೆಯಬಾರದು ಎಂದರು.

ಭಾರತದಲ್ಲಿ ಸೌಹಾರ್ದತೆಯ ಹಿಂದೆ ನಿಜವಾದ ಆತ್ಮವಿಶ್ವಾಸವಿತ್ತು. ಹಿಂದೂ ಬಾಂಧವನೊಬ್ಬ ಮುಸ್ಲಿಂ ಸ್ನೇಹಿತನ ಮನೆಯೊಳಗೆ ಹೋಳಿ ಹಬ್ಬ ಆಡುವ ನುಗ್ಗಿ ದೃಶ್ಯ ಕಾಣಬಹುದಿತ್ತು. ಈಗ ಕೋಮುವಿಚಾರ ಆಚರಣೆಗಳ ಸಂದರ್ಭದಲ್ಲಿ ನಮ್ಮ ಆ ಆತ್ಮವಿಶ್ವಾಸವನ್ನು ನಾಶಗೊಳಿಸಿದೆ. ಹಿಂದಿನಿಂದ ನಮ್ಮಲ್ಲಿ ಬಹುತ್ವದ ಸಮಾಜವನ್ನೇ ಕಾಣುತ್ತೇವಾದರೂ ಇದರ ಅಡಿಪಾಯದ ಕೆಲವು ಕಲ್ಲುಗಳನ್ನು ಸೂಕ್ತವಾಗಿ ಬಳಸದಿರುವುದರಿಂದ ಸಮಸ್ಯೆಯಾಗಿದೆ. ಈಗ ಕಂಡಿರುವ ಪಲ್ಲಟಗಳನ್ನು ನಿರ್ಲಕ್ಷಿಸಿದರೆ ಭವಿಷ್ಯ ಕಠೋರವಾಗಲಿದೆ ಎಂದು ಎಚ್ಚರಿಸಿದರು.

ಚಿಂತಕ ಮುಂಬೈನ ಅತುಲ್‌ ತಿವಾರಿ ಹಾಜರಿದ್ದರು. ಶ್ರೀಧರ್‌ ಭಟ್‌ ಸ್ವಾಗತಿಸಿದರು. ಜಸವಂತ್‌ ಜಾಧವ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ