‘ಆಜಾನ್’ಗೆ ಇಲ್ಲದ ಶಬ್ದ ಮಾಲಿನ್ಯ ಕದ್ರಿ ದೇವಸ್ಥಾನದಲ್ಲೇಕೆ?

Published : Dec 23, 2017, 10:21 AM ISTUpdated : Apr 11, 2018, 01:08 PM IST
‘ಆಜಾನ್’ಗೆ ಇಲ್ಲದ ಶಬ್ದ ಮಾಲಿನ್ಯ ಕದ್ರಿ ದೇವಸ್ಥಾನದಲ್ಲೇಕೆ?

ಸಾರಾಂಶ

-ಮಂಗಳೂರಿನ ಕದ್ರಿ ಮಂಜುನಾಥೇಶ್ವರ ಮಂದಿರದಲ್ಲಿ ಹಾಕುವ ಧ್ವನಿವರ್ಧಕದಿಂದ ಶಬ್ದ ಮಾಲಿನ್ಯವೆಂದು ದೂರು ಸಲ್ಲಿಸಿದ ಸ್ಥಳೀಯ ನಿವಾಸಿ. - ಆಜಾನ್‌ನಿಂದ ಆಗದ ಶಬ್ದ ಮಾಲಿನ್ಯದಿಂದ ಶ್ಲೋಕ, ಭಕ್ತಿಗೀತೆಯಿಂದ ಹೇಗಾಗುತ್ತದೆ, ಎಂದು ನೆಟ್ಟಿದಕ ಆಕ್ರೋಶ.

ಮಂಗಳೂರು: ಭಿನ್ನ ಧರ್ಮೀಯರೊಬ್ಬರ ಮನವಿ ಮೇರೆಗೆ ಇಲ್ಲಿನ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಹಾಕುವ ಶ್ಲೋಕ, ಮಂತ್ರ ಹಾಗೂ ಭಕ್ತಿಗೀತೆಗಳನ್ನು ನಿಲ್ಲಿಸಲು ದತ್ತಿ ಇಲಾಖೆ ನೋಟಿಸ್ ನೀಡಿದ್ದು, ಇದಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅತೀವ ಆಕ್ರೋಶ ವ್ಯಕ್ತವಾಗುತ್ತಿದೆ.

ದೇವರ ಮಂತ್ರ ಪಠಣದಿಂದ ಶಬ್ದ ಮಾಲಿನ್ಯ ಆಗುತ್ತಾ? ದೇವಸ್ಥಾನದ ಧ್ವನಿ ವರ್ಧಕದಿಂದ ಮಾತ್ರ ಶಬ್ಧ ಮಾಲಿನ್ಯವೇ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ಬ್ಲಾನಿ ಡಿಸೋಜಾ ಎಂಬುವವರು 'ದೇವಸ್ಥಾನದಲ್ಲಿ ಹಾಕುವ ಧ್ವನಿ ವರ್ಧಕದಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದ್ದು, ದಯವಿಟ್ಟು ನಿಲ್ಲಿಸಿ,' ಎಂದು ಮೇಯರ್‌ಗೆ ಮನವಿ ಸಲ್ಲಿಸಿದ್ದರು. ಸ್ಥಳೀಯ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿರುವವರಿಗೆ ಇದರಿಂದ ತೊಂದರೆಯಾಗುತ್ತಿದ್ದು, ಕೇವಲ ದೇವಸ್ಥಾನದ ಆವರಣದೊಳಗೆ ಕೇಳುವಂತೆ ಹಾಗೆ ಶ್ಲೋಕ, ಭಕ್ತಿ ಗೀತೆಗಳನ್ನು ಹಾಕಬೇಕೆಂದು, ಡಿಸೋಜಾ ಮನವಿ ಮಾಡಿದ್ದಾರೆ.

ಜನರ ಶ್ರದ್ಧಾ, ಭಕ್ತಿ ಪ್ರತೀಕವಾದ ಶ್ಲೋಕ, ಭಕ್ತಿ ಗೀತೆಗಳಿಂದ ಶಬ್ದ  ಮಾಲಿನ್ಯವಾಗುತ್ತದೆ ಎಂದು ಆರೋಪಿಸುತ್ತಿರುವುದರಿಂದ ನೆಟ್ಟಿಗರು ಆಕ್ರೋಶ ಪಡಿಸಿದ್ದು ಹೀಗೆ,

 

 


 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ