ನರ್ಸ್ ಯಡವಟ್ಟು: ಸುಟ್ಟು ಹೋಯಿತು 10 ತಿಂಗಳ ಮಗುವಿನ ಮುಖ

Published : Mar 16, 2018, 03:46 PM ISTUpdated : Apr 11, 2018, 12:56 PM IST
ನರ್ಸ್ ಯಡವಟ್ಟು: ಸುಟ್ಟು ಹೋಯಿತು 10 ತಿಂಗಳ ಮಗುವಿನ ಮುಖ

ಸಾರಾಂಶ

ಆಸ್ಪತ್ರೆಯ ನರ್ಸ್ ಮಾಡಿದ ಯಡವಟ್ಟಿನಿಂದ ಮಗುವಿನ ಮುಖ ಸುಟ್ಟು, ವಿಕಾರವಾಗಿದೆ. ನಗರದ ತಾವರಗೇರಿ ನರ್ಸಿಂಗ್ ಹೋಂ ನಲ್ಲಿ ಈ ಘಟನೆ ನಡೆದಿದೆ. 

ಧಾರವಾಡ: ಆಸ್ಪತ್ರೆಯ ನರ್ಸ್ ಮಾಡಿದ ಯಡವಟ್ಟಿನಿಂದ ಮಗುವಿನ ಮುಖ ಸುಟ್ಟು, ವಿಕಾರವಾಗಿದೆ. ನಗರದ ತಾವರಗೇರಿ ನರ್ಸಿಂಗ್ ಹೋಂ ನಲ್ಲಿ ಈ ಘಟನೆ ನಡೆದಿದೆ. 

ಆಗಿದ್ದೇನು?

ನೆಬುಲೈಸೇಷನ್ ಮಾಡುವಾಗ ನರ್ಸ್ ನಿರ್ಲಕ್ಷ್ಯದಿಂದ ಮಗುವಿನ ಮುಖವೇ ಸುಟ್ಟು ಹೋಗಿದೆ. ವಿಪರೀತ ಕಫದಿಂದ ಬಳಲುತ್ತಿದ್ದ ಮಗುವನ್ನು ನೆಬುಲೈಸೇಷನ್ ಮಾಡಲು ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ಮಗುವಿಗೆ ಚಿಕಿತ್ಸೆ ನೀಡುವಾಗ, ಹುಷಾರಾಗಿರಬೇಕಾದ ನರ್ಸ್, ಗಮನ ಬೇರೆಡೆಗೆ ಹರಿಸಿದ್ದದಿಂದ ಈ ಅನಾಹುತ ಸಂಭವಿಸಿದೆ.

ಹತ್ತು ತಿಂಗಳ ಮಗು ಲಾವಣ್ಯ ನಗರದ ಗೊಲ್ಲರ ಕಾಲನಿಯ ನಾಗೇಶ-ಅಂಜಲಿ ದಂಪತಿಯ ಪುತ್ರಿ. ಮೂರು ದಿನಗಳ ಹಿಂದೆ ನಡೆದ ಈ ಘಟನೆ ಇದೀಗ ಬೆಳಕಿಗೆ ಬಂದಿದೆ.
 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ