ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್ ಹಾಗೂ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ ಲೋಕಾಯಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಚಿಕಿತ್ಸೆ ಪಡೆದ ಕಾರಣ ಸುದ್ದಿಯಲ್ಲಿರುವ ಮಲ್ಯ ಆಸ್ಪತ್ರೆಯನ್ನು 20 ದಿನಗಳ ಕಾಲ ನವೀಕರಣಕ್ಕಾಗಿ ಮುಚ್ಚಲಾಗುವುದು.
ಬೆಂಗಳೂರು: ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್ ಹಾಗೂ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ ಲೋಕಾಯಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಚಿಕಿತ್ಸೆ ಪಡೆದ ಕಾರಣ ಸುದ್ದಿಯಲ್ಲಿರುವ ಮಲ್ಯ ಆಸ್ಪತ್ರೆಯನ್ನು 20 ದಿನಗಳ ಕಾಲ ನವೀಕರಣಕ್ಕಾಗಿ ಮುಚ್ಚಲಾಗುವುದು.
ಆದಿಕೇಶವಲು ಅವರು ಒಡೆತನಕ್ಕೆ ಸೇರಿರುವ ಈ ಆಸ್ಪತ್ರೆಯನ್ನು ನವೀಕರಣಗೊಳಿಸುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ, ಎನ್ನಲಾಗಿದೆ.
ಈ ಆಸ್ಪತ್ರೆ ಆಧುನೀಕರಣಗೊಂಡರೆ ಏಷ್ಯಾದಲ್ಲಿಯೇ ನಂ.1 ಆಸ್ಪತ್ರೆ ಆಗುವುದು ಎನ್ನಲಾಗುತ್ತಿದೆ. 7 ಸ್ಟಾರ್ ಸೌಲಭ್ಯಗಳಿರುವ 210 ಬೆಡ್ ಇಲ್ಲಿ ಇರಲಿದೆ. ಅಮೆರಿಕ ಹಾಗೂ ಸಿಂಗಾಪುರ್‌ನಲ್ಲಿ ಲಭ್ಯವಿರುವಂತ ಚಿಕಿತ್ಸೆ ಇನ್ನು ಮುಂದೆ ಇಲ್ಲಿಯೇ ಲಭ್ಯವಾಗಲಿದ್ದು, ಅಂತಾರಾಷ್ಟ್ರೀಯ ತಂತ್ರಜ್ಞಾನದಲ್ಲಿ ಮರು ರ್ಮಾಣವಾಗಲಿದೆ.