ಗ್ರಾಮವನ್ನು ಹಸಿರುಮಯ ಮಾಡಿದ ಪರಿಸರ ಪ್ರೇಮಿ ಯಲ್ಲಪ್ಪ ಶಿಂಧೆ: ಸಾಲು ಮರದ ತಿಮ್ಮಕ್ಕ ಕಥೆಯೇ ಈತನಿಗೆ ಪ್ರೇರಣೆ

Published : Jun 05, 2017, 08:15 AM ISTUpdated : Apr 11, 2018, 01:01 PM IST
ಗ್ರಾಮವನ್ನು ಹಸಿರುಮಯ ಮಾಡಿದ ಪರಿಸರ ಪ್ರೇಮಿ ಯಲ್ಲಪ್ಪ ಶಿಂಧೆ: ಸಾಲು ಮರದ ತಿಮ್ಮಕ್ಕ ಕಥೆಯೇ ಈತನಿಗೆ ಪ್ರೇರಣೆ

ಸಾರಾಂಶ

ಸಾಮಾನ್ಯವಾಗಿ ನಮ್ಮ ಮನೆ ಮುಂದೆ ಹಚ್ಚಿದ ಗಿಡಗಳನ್ನೇ ಕಾಯ್ದುಕೊಳ್ಳೋದು ದುಸ್ತರವಾಗಿದೆ. ಆದರೆ ಇಂತಹ ದಿನಗಳಲ್ಲಿ  ಒಬ್ಬ ಅನಕ್ಷರಸ್ಥ  1200ಕ್ಕೂ ಅಧಿಕ ಸಸಿಗಳನ್ನ ನೆಟ್ಟು, ಅವುಗಳನ್ನು ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ.

ಬಾಗಲಕೋಟೆ(ಜೂ.05): ಸಾಮಾನ್ಯವಾಗಿ ನಮ್ಮ ಮನೆ ಮುಂದೆ ಹಚ್ಚಿದ ಗಿಡಗಳನ್ನೇ ಕಾಯ್ದುಕೊಳ್ಳೋದು ದುಸ್ತರವಾಗಿದೆ. ಆದರೆ ಇಂತಹ ದಿನಗಳಲ್ಲಿ  ಒಬ್ಬ ಅನಕ್ಷರಸ್ಥ  1200ಕ್ಕೂ ಅಧಿಕ ಸಸಿಗಳನ್ನ ನೆಟ್ಟು, ಅವುಗಳನ್ನು ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ.

ಇಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆ ಪರಿಸರ ಪ್ರೇಮಿ ಬಗ್ಗೆ ಒಂದು ವರದಿ ಇಲ್ಲಿದೆ.

ಯಲ್ಲಪ್ಪ ಶಿಂಧೆ, ಬಾಗಲಕೋಟೆ ಜಿಲ್ಲೆ  ಮುಧೋಳ ತಾಲೂಕಿನ ಉತ್ತೂರು ಗ್ರಾಮದವರು. ಅನಕ್ಷರಸ್ಥರಾಗಿರುವ ಇವರು ಗಿಡಮರಗಳು ಇದ್ದರೆ ಮಾತ್ರ ಮಳೆ  ಎಂಬುದನ್ನು ಬಲವಾಗಿ ನಂಬಿದವರು. ಸಾಲು ಮರದ ತಿಮ್ಮಕ್ಕರ ಯಶೋಗಾಥೆ ಕೇಳಿ ಪ್ರಭಾವಿತರಾಗಿ ಸಸಿನೆಡುವ ಕಾಯಕ ಶುರು ಮಾಡಿದ್ದಾರೆ. ಈಗ ಇಡೀ ಗ್ರಾಮದ ಸುತ್ತ ಯಲ್ಲಪ್ಪ ಶಿಂಧೆ 1200ಕ್ಕೂ ಹೆಚ್ಚು ಸಸಿಗಳು ನೆಟ್ಟು ಪೋಷಿಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಸರ್ಕಾರ ಇವರಿಗೆ 450 ಸಸಿಗಳನ್ನ ನೀಡಿತ್ತು. ಸರ್ಕಾರ ನೀಡಿದ ಎಲ್ಲಾ ಸಸಿಗಳು ನೆಟ್ಟು, ಆ ನಂತರ ಸ್ವಂತ 80 ಸಾವಿರ ರೂಪಾಯಿ ಖರ್ಚುಮಾಡಿ, ಸಸಿಗಳನ್ನು ತಂದು ಎಲ್ಲಾ ಸಸಿಗಳನ್ನು ನೆಟ್ಟು ಪೋಷಿಸಿಕೊಂಡು ಬರುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸ್ಥಳೀಯರು ಕೂಡ ಸಹಕಾರ ನೀಡಿದ್ದಾರೆ.

ಪರಿಸರ ಅಭಿವೃದ್ಧಿಗೆ ನಾನಾ ಯೋಜನೆಗಳಡಿ ಸರ್ಕಾರ ಹಣ ಬಿಡುಗಡೆಗೊಳಿಸಿದ್ರು ಸಮರ್ಪಕವಾಗಿ ಗಿಡಗಳನ್ನ ಬೆಳೆಸಲಾಗುತ್ತಿಲ್ಲ. ಆದ್ರೆ ಇಂತಹ ಓದು ಬರಹ ಕಲಿಯದ ಯಲ್ಲಪ್ಪನವರ ಕಾರ್ಯಕ್ಕೆ ಶಹಬ್ಬಾಶ್ ಹೇಳಲೇಬೇಕು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ