ನಕಲಿ ಚಿನ್ನವನ್ನು ತೋರಿಸಿ 66 ಲಕ್ಷ ಹಣ ಎಗರಿಸಿದ ಗೋಲ್ಟ್ ಅಪ್ರೈಸರ್

Published : May 29, 2017, 09:52 AM ISTUpdated : Apr 11, 2018, 12:54 PM IST
ನಕಲಿ ಚಿನ್ನವನ್ನು ತೋರಿಸಿ 66 ಲಕ್ಷ ಹಣ ಎಗರಿಸಿದ ಗೋಲ್ಟ್ ಅಪ್ರೈಸರ್

ಸಾರಾಂಶ

ಬ್ಯಾಂಕ್'​ಗಳು ಅಂದ​ಮೇಲೆ ಜನ ಸಾಲಕ್ಕೆ ಬರೋದು ಕಾಮನ್​. ಹಾಗೇ ಬ್ಯಾಂಕ್​ ಸಿಬ್ಬಂದಿ ಹೌಸ್​ ಲೋನ್, ಗೋಲ್ಡ್ ಲೋನ್ ಅಂತ ಹತ್ತಾರು ರೀತಿಯ ಲೋನ್'​ಗಳನ್ನ ಕೊಡುತ್ತಾರೆ. ಆದರೆ, ಇಲ್ಲೊಂದು ಬ್ಯಾಂಕ್​'ನಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಏನಪ್ಪಾ ನಕಲಿ ಚಿನ್ನಕ್ಕೂ ಲೋನ್​ ಕೊಡ್ತಾರಾ ಅಂತೀರಾ? ಈ ವರದಿ ನೋಡಿ.

ಚಿಕ್ಕಬಳ್ಳಾಪುರ(ಮೇ.29): ಬ್ಯಾಂಕ್'​ಗಳು ಅಂದ​ಮೇಲೆ ಜನ ಸಾಲಕ್ಕೆ ಬರೋದು ಕಾಮನ್​. ಹಾಗೇ ಬ್ಯಾಂಕ್​ ಸಿಬ್ಬಂದಿ ಹೌಸ್​ ಲೋನ್, ಗೋಲ್ಡ್ ಲೋನ್ ಅಂತ ಹತ್ತಾರು ರೀತಿಯ ಲೋನ್'​ಗಳನ್ನ ಕೊಡುತ್ತಾರೆ. ಆದರೆ, ಇಲ್ಲೊಂದು ಬ್ಯಾಂಕ್​'ನಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಏನಪ್ಪಾ ನಕಲಿ ಚಿನ್ನಕ್ಕೂ ಲೋನ್​ ಕೊಡ್ತಾರಾ ಅಂತೀರಾ? ಈ ವರದಿ ನೋಡಿ.

ರಾಜಶೇಖರಾಚಾರಿ ಎಂಬಾತ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ  ಕೆನರಾ ಬ್ಯಾಂಕ್​​​ನಲ್ಲಿ ಗೋಲ್ಡ್​​​ ಅಪ್ರೈಸರ್. ಚಿನ್ನ ಮೌಲ್ಯಮಾಪಕನಾದ ರಾಜಶೇಖರಾಚಾರಿ ಉಂಡ ಮನೆಗೆ ಜಂತಿ ಎಣಿಸಿ ಈಗ ಕಂಬಿ ಎಣಿಸುವ ಹಾಗಾಗಿದ್ದಾನೆ. ತಾನು ಕೆಲಸ ಮಾಡುತ್ತಿರುವ ಬ್ಯಾಂಕ್'​ನಲ್ಲೇ ಅಮಾಯಕ ರೈತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 66 ಲಕ್ಷ  ಹಣ ಲಪಟಾಯಿಸಿದ್ದಾನೆ.

ಜನವರಿ 2015 ರಿಂದ ಅಕ್ಟೋಬರ್ 2016 ರವರೆಗೆ ಸುಮಾರು 80 ಗೋಲ್ಡ್ ಲೋನ್ ಪಡೆದಿದ್ದಾನೆ ಈ ವಂಚಕ. ಆದರೆ, ಬ್ಯಾಂಕ್'​​ನಿಂದ ನೋಟಿಸ್ ಬಂದ ಮೇಲಷ್ಟ ರಾಜಶೇಖರಾಚಾರಿ ಮಹಾಕಾರ್ಯ ರೈತರಿಗೆ ಗೊತ್ತಾಗಿದೆ. ಬ್ಯಾಂಕಿನಲ್ಲಿದ್ದ ಚಿನ್ನವನ್ನು ಪರಿಶೀಲಿಸಿದ ಬೀಚಗಾನಹಳ್ಳಿ  ಮ್ಯಾನೇಜರ್, ಕೂಡಲೇ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದಾರೆ..

ಅದೇನೇ ಇರಲಿ ಆರೋಪಿ ರಾಜಶೇಖರಾಚಾರಿ ಈ ಕುಕೃತ್ಯದಿಂದಾಗಿ, ಅಮಾಯಕ ರೈತರೂ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತುವಂತಾಗಿದೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ