ಭೂ ಒಡೆತನ ದೊರಕದವರಿಗೆ ಹಕ್ಕು ಕೊಡಿಸಲು ಮಧು ಬಂಗಾರಪ್ಪನವರಿಗೆ ಕಾಗೋಡು ಸಲಹೆ

Published : Nov 11, 2016, 04:20 PM ISTUpdated : Apr 11, 2018, 01:05 PM IST
ಭೂ ಒಡೆತನ ದೊರಕದವರಿಗೆ ಹಕ್ಕು ಕೊಡಿಸಲು ಮಧು ಬಂಗಾರಪ್ಪನವರಿಗೆ ಕಾಗೋಡು ಸಲಹೆ

ಸಾರಾಂಶ

ಹೋರಾಟದ  ನೆಲೆಗೆ ಗೌರವ ಸಿಗಬೇಕಿದ್ದರೆ ಮೊದಲು ಭೂ ರಹಿತರು ಭೂ ಒಡೆಯರಾಗಬೇಕು. ಈ ದಿಸೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಆಶೀರ್ವಾದ ಬೇಕಿದ್ದರೆ ಈ ನೆಲೆಯಲ್ಲಿ ಹಿಂದಿನಿಂದಲೂ ಸಾಗುವಳಿ ಮಾಡುತ್ತಿರುವ, ಭೂ ಒಡೆತನ ದೊರಕದವರ ಬಗ್ಗೆ ಕಾಳಜಿವಹಿಸಿ ಭೂ ಹಕ್ಕು ಕೊಡಿಸು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಶಾಸಕ ಮಧು ಬಂಗಾರಪ್ಪಗೆ ಹೇಳಿದರು.

ಸೊರಬ (ನ.11): ಹೋರಾಟದ  ನೆಲೆಗೆ ಗೌರವ ಸಿಗಬೇಕಿದ್ದರೆ ಮೊದಲು ಭೂ ರಹಿತರು ಭೂ ಒಡೆಯರಾಗಬೇಕು. ಈ ದಿಸೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಆಶೀರ್ವಾದ ಬೇಕಿದ್ದರೆ ಈ ನೆಲೆಯಲ್ಲಿ ಹಿಂದಿನಿಂದಲೂ ಸಾಗುವಳಿ ಮಾಡುತ್ತಿರುವ, ಭೂ ಒಡೆತನ ದೊರಕದವರ ಬಗ್ಗೆ ಕಾಳಜಿವಹಿಸಿ ಭೂ ಹಕ್ಕು ಕೊಡಿಸು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಶಾಸಕ ಮಧು ಬಂಗಾರಪ್ಪಗೆ ಹೇಳಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣ, ರಂಗಮಂದಿರದ ಉದ್ಘಾಟನೆ, ಸರ್ಕಾರಿ ಆಸ್ಪತ್ರೆಯ ಅಪಗ್ರೇಡೇಶನ್, ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಹಾಗೂ ಬಗರ್‌ಹುಕುಂ ಅರ್ಜಿದಾರರಿಗೆ ಹಕ್ಕು ಪತ್ರ ವಿತರಣೆ ಸಮಾರಂಭ ಉದ್ಧೇಶಿಸಿ ಮಾತನಾಡಿದರು.

ಬಗರ್‌ಹುಕುಂ ಸಮಸ್ಯೆ, ಭೂ ರಹಿತರ ಬವಣೆ ಇಂದು ನಿನ್ನೆಯದಲ್ಲ. 1951-52 ರಿಂದಲೆ ಆರಂಭಗೊಂಡ ಈ ಹೋರಾಟ ಇಂದಿಗೂ ಮುಕ್ತಿ ದೊರಕದಿರುವುದು ವಿಪರ್ಯಾಸ. ಭೂಮಿಯ ಒಡೆತನ, ಭೂಮಿಯ ಹಕ್ಕಿಗಾಗಿ ಹೋರಾಡಿದ್ದಕ್ಕೆ ಪ್ರತಿಫಲವಾಗಿ ದೇವರಾಜ್ ಆರಸ್ ಮುಖ್ಯಮಂತ್ರಿಗಳಾಗಿದ್ದಾಗ ಉಳುವವನೆ ಹೊಲದೊಡೆಯ ಅವಕಾಶ ಪ್ರಾಪ್ತಿಯಾಯಿತು. ಮತ್ತೆ 72 ರಲ್ಲಿ ಸರ್ಕಾರಿ ಭೂಮಿಯ ಅತಿಕ್ರಮಣವೂ ನಡೆಯಿತು. 91 ರಲ್ಲಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕಾನೂನು ತಿದ್ದುಪಡಿ ತಂದು ಸುದೀರ್ಘ ಹಿಡುವಳಿದಾರರಿಗೆ ಭೂ ಒಡೆತನ ದೊರಕುವಂತೆ ಶ್ರಮಿಸಿದರು ಎಂದು ತಿಳಿಸಿದರು.

ಪ್ರಸ್ತುತ ರಾಜ್ಯಾದ್ಯಂತ ಕೇವಲ 15 ಸಾವಿರ ಬಗರ್‌ಹುಕುಂ ನೀಡಲಾಗಿದೆ. ಇನ್ನೂ ಅಪಾರ ಸಂಖ್ಯೆಯಲ್ಲಿ ಅರ್ಜಿಗಳಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಗಳು, ಕಾರ್ಯಕರ್ತರು, ಅಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕುಡಿಯುವ ನೀರು, ಬರಪೀಡಿತ ಪ್ರದೇಶದಲ್ಲಿ ಬರ ಪರಿಹಾರ ವಿತರಣೆ, ಉದ್ಯೋಗಾವಕಾಶಕ್ಕಾಗಿ ನಮ್ಮ ಸರ್ಕಾರ ಬದ್ಧವಿದೆ. ೯೪ಸಿ ಮತ್ತು ಬಗರ್‌ಹುಕುಂ ಸೌಲಭ್ಯಕ್ಕಾಗಿ ಡಿಸೆಂಬರ್ ತನಕ ಗಡವು ನೀಡಿದ್ದು, ಹಕ್ಕು ಪಡೆಯುವ ಧ್ವನಿಗಳು ಇನ್ನಷ್ಟು ಗಟ್ಟಿಯಾಗಬೇಕು ಎಂದರು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ