ಸಿದ್ದರಾಮಯ್ಯ ಜಾತಿವಾದಿಯೇ? ಪ್ರಸಾದ್ ಆರೋಪಕ್ಕೆ ಸಚಿವ ಮಹದೇವಪ್ಪ ಟಾಂಗ್

By Suvarma Web DeskFirst Published Nov 7, 2017, 3:16 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಾತಿವಾದಿ ಎಂದು ಟೀಕಿಸಿರುವ ಮಾಜಿ  ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ  ವಿ. ಶ್ರೀನಿವಾಸಪ್ರಸಾದ್ ಅವರಿಗೆ ಲೋಕೋಪಯೋಗಿ ಹಾಗೂ ಜಿಲ್ಲಾ  ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಕನಕದಾಸರ ಜಯಂತಿಯಲ್ಲಿ ಪರೋಕ್ಷವಾಗಿ ಟಾಂಗ್  ನೀಡಿದರು.

ಮೈಸೂರು (ನ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಾತಿವಾದಿ ಎಂದು ಟೀಕಿಸಿರುವ ಮಾಜಿ  ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ  ವಿ. ಶ್ರೀನಿವಾಸಪ್ರಸಾದ್ ಅವರಿಗೆ ಲೋಕೋಪಯೋಗಿ ಹಾಗೂ ಜಿಲ್ಲಾ  ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಕನಕದಾಸರ ಜಯಂತಿಯಲ್ಲಿ ಪರೋಕ್ಷವಾಗಿ ಟಾಂಗ್  ನೀಡಿದರು.

ಶ್ರೀನಿವಾಸ  ಪ್ರಸಾದ್ ಅವರ ಆರೋಪಗಳಿಗೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು 1989 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ, ಕನಕದಾಸರ ಸಾಹಿತ್ಯದ ತಿರುಳು, ಡಾ. ಅಂಬೇಡ್ಕರ್ ವಿಚಾರಧಾರೆ, ಭಾರತ ಸಂವಿಧಾನ ಅಂಶಗಳನ್ನು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆ ಮೂಲಕ ಕನಕದಾಸರ ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಆದರೆ, ಕೆಲವರು ರಾಜಕೀಯಕ್ಕಾಗಿ  ಸಿದ್ದರಾಮಯ್ಯ ಅವರನ್ನು ಜಾತಿವಾದಿ  ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರ ಜಾತಿವಾದಿಯೇ? ಎಂದು ಅವರು ಪ್ರಶ್ನಿಸಿದರು.

ಸಮಾಜದಲ್ಲಿ ಅಮೂಲ್ಯ ಬದಲಾವಣೆಗಳನ್ನು ಬಯಸದವರು, ಕೋಮುವಾದಿಗಳು, ಮೂಲಭೂತವಾದಿಗಳು. ರಾಜಕೀಯ ಉದ್ದೇಶಕ್ಕಾಗಿ ಸಿದ್ದರಾಮಯ್ಯ ಅವರು ಜಾತಿವಾದಿ ಎಂದು ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಅನ್ನಭಾಗ್ಯದ ಮೂಲಕ ಎಲ್ಲರಿಗೂ  ಅನ್ನ, ಮಕ್ಕಳಿಗಾಗಿ ಹಾಲು, ಶೂ, ಬಟ್ಟೆ, ಪೌಷ್ಟಿಕ ಆಹಾರ ಸೇರಿದಂತೆ ಹಲವಾರು ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಜಾತಿವಾದಿ,ದುರಂಹಕಾರಿಯಾಗಿದ್ದರೇ ರಾಜ್ಯದ ಎಲ್ಲಾ ವರ್ಗದ ಜನರಿಗಾಗಿ, ಜನಪರವಾದ ಯೋಜನೆಗಳನ್ನು ಕೈಗೊಳ್ಳುವ ನಿರ್ಧಾರ ಮಾಡುತ್ತಿರಲಿಲ್ಲ. ರಾಜ್ಯಾಂಗದ ಆಶಯ, ಕನಕದಾಸರ ತಿರಳಿನಂತೆ ಜನಪರ ಯೋಜನೆಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಅವರು ದಲಿತ ವಿರೋಧಿಯಾಗಿದ್ದರೇ ಎಸ್ಸಿ, ಎಸ್ಟಿಗೆ ಮೀಸಲಾಗಿರುವ ಅನುದಾನವನ್ನು ಕಡ್ಡಾಯವಾಗಿ ಬಳಸಬೇಕೆಂಬ ಕಾನೂನು ತರುತ್ತಿರಲಿಲ್ಲ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ  ವಿದ್ಯಾಸಿರಿ ಯೋಜನೆ ನೀಡಿದ್ದಾರೆ. ಸಿದ್ದರಾಮಯ್ಯ ನಾಡಿನ ರಾಜಕೀಯ ಮುತ್ಸದಿ.ರಾಜಕೀಯ ಪ್ರೇರಿತವಾಗಿ ಅವರ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು  ಅವರು ಹೇಳಿದರು.

 

click me!