ವಿಧಾನಸೌಧದ ವಜ್ರ ಮಹೋತ್ಸವದ ವಿವಿಐಪಿ ಊಟಕ್ಕೆ 1737 ರೂ.

By Suvarna Web DeskFirst Published Mar 5, 2018, 4:01 PM IST
Highlights

ವಿಧಾನಸೌಧ ವಜ್ರ ಮಹೋತ್ಸ ನೆಪದಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದು, ಆರ್‌ಟಿಐ ಅರ್ಜಿ ಮೂಲಕ ಈ ಹಗರಣ ಬೆಳಕಿಗೆ ಬಂದಿದ್ದೆ. ದಿನ ಊಟಕ್ಕೆ ದುಂದು ವೆಚ್ಚ ಮಾಡಿದ್ದು, ವಿವಿಐಪಿ ಊಟಕ್ಕೆ 1737 ರೂ. ವಿಐಪಿ ಊಟಕ್ಕೆ 1310 ರೂ, ನೌಕರರ ಊಟಕ್ಕೆ 819 ರೂ. ವ್ಯಯಿಸಿದ್ದು, ಗೋಲ್ಡ್ ಪಿಂಚ್ ಹೊಟೇಲ್‌ನಿಂದ ಊಟ ಸರಬರಾಜು ಮಾಡಲಾಗಿತ್ತು. ಈ ಹೊಟೇಲ್ ಗೆ ಒಟ್ಟು 41.30 ಲಕ್ಷ ಬಿಲ್ ಪಾವತಿಸಲಾಗಿದೆ, ಎಂದು ಅರ್ಜಿಗೆ ಉತ್ತರಿಸಲಾಗಿದೆ.

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸ ನೆಪದಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದು, ಆರ್‌ಟಿಐ ಅರ್ಜಿ ಮೂಲಕ ಈ ಹಗರಣ ಬೆಳಕಿಗೆ ಬಂದಿದ್ದೆ. ದಿನ ಊಟಕ್ಕೆ ದುಂದು ವೆಚ್ಚ ಮಾಡಿದ್ದು, ವಿವಿಐಪಿ ಊಟಕ್ಕೆ 1737 ರೂ. ವಿಐಪಿ ಊಟಕ್ಕೆ 1310 ರೂ, ನೌಕರರ ಊಟಕ್ಕೆ 819 ರೂ. ವ್ಯಯಿಸಿದ್ದು, ಗೋಲ್ಡ್ ಪಿಂಚ್ ಹೊಟೇಲ್‌ನಿಂದ ಊಟ ಸರಬರಾಜು ಮಾಡಲಾಗಿತ್ತು. ಈ ಹೊಟೇಲ್ ಗೆ ಒಟ್ಟು 41.30 ಲಕ್ಷ ಬಿಲ್ ಪಾವತಿಸಲಾಗಿದೆ, ಎಂದು ಅರ್ಜಿಗೆ ಉತ್ತರಿಸಲಾಗಿದೆ.

ವಿವಿಐಪಿ ಟೋಕನ್‌ಗಳನ್ನು 700  ಮಂದಿ ಬದಲಿಗೆ, ಕೇವಲ 300 ಜನರಿಗೆ ಮಾತ್ರ ನೀಡಿದ್ದು, ಉಳಿದ ಟೋಕನ್‌ಗಳ ಹಣವನ್ನು ಲೂಟಿ ಮಾಡಲಾಗಿದೆ, ಎಂದು ಸಾಮಾಜಿಕ ಕಾರ್ಯಕರ್ತ ಬಿ.ಎಸ್.ಗೌಡ ಅವರು ಆರೋಪಿಸಿದ್ದಾರೆ.

2017ರ ಅಕ್ಟೋಬರ್‌ 25ರಂದು ನಡೆದ ಮಹೋತ್ಸವಕ್ಕೆ ವಿಧಾನಸೌಧವನ್ನು ಹೂವಿನಿಂದ ಅಲಂಕರಿಸಲು, ₹30 ಲಕ್ಷ, ಬ್ರ್ಯಾಂಡಿಂಗ್‌, ಪ್ರಚಾರ ಮತ್ತು ಮುದ್ರಣಕ್ಕೆ ₹1 ಕೋಟಿ, ಸಿನಿಮಾ ಪ್ರದರ್ಶನಕ್ಕೆ ₹2 ಕೋಟಿ, ಸ್ವಚ್ಛತೆಗೆ ₹15 ಲಕ್ಷ ರೂ., ವೀಡಿಯೊ ಪ್ರಚಾರ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ₹7.5 ಲಕ್ಷ, ಜನಸಾಮಾನ್ಯರ ಊಟೋಪಚಾರಕ್ಕೆ ₹50 ಲಕ್ಷ ವೆಚ್ಚವಾಗಿದೆ.

ವಿಧಾನಸೌಧದ '3 ಡಿ ವರ್ಚುಯಲ್ ರಿಯಾಲಿಟಿ' ವಿಡಿಯೊ ಪ್ರದರ್ಶನಕ್ಕೆ ₹25 ಲಕ್ಷ, ಸಂಗೀತ ನಿರ್ದೇಶಕ ಹಂಸಲೇಖಗೆ ₹15 ಲಕ್ಷ ನೀಡಲಾಗಿದೆ. ಅಡಿ 3ಡಿ ಸ್ಟುಡಿಯೊ ಸಂಸ್ಥೆಗೆ 3ಡಿ ಮಾಹಿತಿ ಮತ್ತು ಆ್ಯನಿಮೇಷನ್‌ ನಿರ್ಮಿಸಿ, ಒಂದು ನಿಮಿಷದ ಪ್ರದರ್ಶನಕ್ಕೆ ₹4 ಲಕ್ಷದಂತೆ 10 ನಿಮಿಷಕ್ಕೆ ₹ 40 ಲಕ್ಷ,  ಜನರೇಟರ್‌ ಸೇರಿದಂತೆ ಇತರೆ ನಿರ್ವಹಣಾ ವೆಚ್ಚ ₹46.65 ಲಕ್ಷ ವ್ಯಯಿಸಲಾಗಿದೆ, ಎಂದು ಲೆಕ್ಕ ತೋರಿಸಲಾಗಿದ್ದು,  ಈ ವೆಚ್ಚದ ದಾಖಲೆಗಳು 'ಸುವರ್ಣ ನ್ಯೂಸ್'ಗೆ ಲಭ್ಯವಾಗಿವೆ.

click me!