‘ವಿಡಿಯೋ ತೆಗಿಬೇಡಿ, ನೆರವು ನೀಡಿ’ ಎಂದು ರಸ್ತೆಯಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಗಾಯಾಳುವನ್ನು ರಕ್ಷಿಸಿದ ವೈದ್ಯ

By Suvarna Web DeskFirst Published Mar 15, 2018, 12:48 PM IST
Highlights

ರಸ್ತೆ ಅಪಘಾತದಲ್ಲಿ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನಿಗೆ ಅಗತ್ಯ ಪ್ರಥಮ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ ಇಲ್ಲಿನ ವೈದ್ಯರೊಬ್ಬರು. ಗಾಯಗೊಂಡವರನ್ನು ನಿರ್ಲಕ್ಷಿಸಿ, ವೀಡಿಯೋ ಚಿತ್ರೀಕರಿಸುವ ಸುದ್ದಿ ಕೇಳುತ್ತಲೇ ಇರುವ ಈ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ತೋರಿದ ಈ ವೈದ್ಯರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿದೆ.

ಬಳ್ಳಾರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನಿಗೆ ಅಗತ್ಯ ಪ್ರಥಮ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ ಇಲ್ಲಿನ ವೈದ್ಯರೊಬ್ಬರು. ಗಾಯಗೊಂಡವರನ್ನು ನಿರ್ಲಕ್ಷಿಸಿ, ವೀಡಿಯೋ ಚಿತ್ರೀಕರಿಸುವ ಸುದ್ದಿ ಕೇಳುತ್ತಲೇ ಇರುವ ಈ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ತೋರಿದ ಈ ವೈದ್ಯರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿದೆ.

ಬಳ್ಳಾರಿ ಹೊಸಪೇಟೆ ಮಾರ್ಗ ಮಧ್ಯೆ ಕಾರು-ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯ ಡಾ. ಯುವರಾಜ್ ಅವರು ಸಾವು ಬದುಕಿನ ನಡುವೆ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ, ಸಹಕರಿಸಿದ್ದಾರೆ.

ಇದೀಗ, ಇಂಥ ಗಾಯಾಳುಗಳಿಗೆ ಹೆಲ್ಪ್ ಮಾಡದೇ, ವೀಡಿಯೋ ತೆಗೆಯುವವರೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಡಾ.ಯುವರಾಜ್, ಘಟನೆಯನ್ನು ಚಿತ್ರೀಕರಿಸದೇ, ಸಹಕರಿಸಿ ಎಂದು ನೆರೆದ ಜನರನ್ನು ಕೋರಿ, ತಮ್ಮ ಕರ್ತವ್ಯ ನಿಷ್ಠೆಯನ್ನು ತೋರಿದ್ದಾರೆ. 

ವೈದ್ಯರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

click me!