ಕರುಳ ಬಳ್ಳಿಯನ್ನೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ 'ಹೆತ್ತವ್ವ'!

Published : Apr 22, 2017, 02:59 AM ISTUpdated : Apr 11, 2018, 01:09 PM IST
ಕರುಳ ಬಳ್ಳಿಯನ್ನೇ ಸೀಮೆ ಎಣ್ಣೆ  ಸುರಿದು ಬೆಂಕಿ ಹಚ್ಚಿ ಹತ್ಯೆಗೈದ 'ಹೆತ್ತವ್ವ'!

ಸಾರಾಂಶ

ಕಣ್ಣಿಗೆ ಕಾಣುವ ದೇವರೆಂದರೇ ಅದು ತಾಯಿ ಮಾತ್ರ. ತಾಯಿ ಕರುಣಾಮಹಿ, ತ್ಯಾಗಮಯಿ. ಆದ್ರೆ ಈ ಹೆತ್ತ ತಾಯಿ ಮಾತ್ರ ತನ್ನ 14 ತಿಂಗಳ ಕರುಳ ಬಳ್ಳಿಯನ್ನೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಆ ಪುಟ್ಟ ಕಂದಮ್ಮನನ್ನು ಪಾಪಿ ತಾಯಿ ಕೊಲೆ ಮಾಡಲು ಒಂದು ಕಾರಣ ಇದೆಯಂತೆ! ಏನದು ಕಾರಣ ನೀವೇ ಓದಿ

ಚಿಕ್ಕಬಳ್ಳಾಪುರ(ಎ. 22): ಕಣ್ಣಿಗೆ ಕಾಣುವ ದೇವರೆಂದರೇ ಅದು ತಾಯಿ ಮಾತ್ರ. ತಾಯಿ ಕರುಣಾಮಹಿ, ತ್ಯಾಗಮಯಿ. ಆದ್ರೆ ಈ ಹೆತ್ತ ತಾಯಿ ಮಾತ್ರ ತನ್ನ 14 ತಿಂಗಳ ಕರುಳ ಬಳ್ಳಿಯನ್ನೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಆ ಪುಟ್ಟ ಕಂದಮ್ಮನನ್ನು ಪಾಪಿ ತಾಯಿ ಕೊಲೆ ಮಾಡಲು ಒಂದು ಕಾರಣ ಇದೆಯಂತೆ! ಏನದು ಕಾರಣ ನೀವೇ ಓದಿ

ಇಂತಹ ಕ್ರೂರ ಘಟನೆಗೆ ನಡೆದದ್ದು, ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದಲ್ಲಿ. ಕಳೆದ ಮೂರು ತಿಂಗಳ ಹಿಂದೆಯಷ್ಟೆ ಕೆಲಸವನ್ನು ಹರಿಸಿ ರಾಜೇಶ್ ಮತ್ತು ನಿರ್ಮಲಮ್ಮ ಎಂಬ ದಂಪತಿ ಮಗ ದಿನೇಶ್ ಕರೆದುಕೊಂಡು  ಈ ಗ್ರಾಮಕ್ಕೆ ಬಂದಿದ್ದರಂತೆ. ನಿನ್ನೆ ರಾತ್ರಿ ಅದೇನಾಯ್ತೋ ಅವಳಿಗೆ ತನ್ನ ಕರುಳ ಬಳ್ಳಿಯನ್ನೇ ಸೀಮೆ ಎಣ್ಣೇ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ.

ಮಗುವನ್ನು ಕೊಲೆ ಮಾಡಿದ ನಿರ್ಮಲಮ್ಮ ಮೇಲೆ ಆಗಾಗ ಮೈಮೇಲೆ ದೆವ್ವ ಬರುತ್ತಿತ್ತಂತೆ. ಇದನ್ನು ಬಿಟ್ಟರೆ ಕುಟುಂಬದಲ್ಲಿ  ಯಾವುದೇ ಜಗಳವಿರಿಲಿಲ್ಲ. ಅವಳಿಗೆ ಏನಾಯ್ತೋ ಏನೋ  ನಿನ್ನೆ ಏಕಾಏಕಿಯಾಗಿ ಮಗುವಿನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ನಾವು ಮನೆಯಲ್ಲಿ ಸೀಮೆ ಎಣ್ಣೇ ಬಳಸಲ್ಲ. ಆದರೂ  ಮನೆಯಲ್ಲಿ 5 ಲೀಟರ್ ಸೀಮೆ ಎಣ್ಣೆ  ಕ್ಯಾನ್ ಹೇಗೆ ಬಂತು ಅಂತಾ ಗೊತ್ತಿಲ್ಲಾ ಅಂತಾ ಪತಿ ರಾಜೇಶ್ ಹೇಳ್ತಿದ್ದಾನೆ.

ಇನ್ನೂ ಮಗು ಕೊಲೆಯಾಗಿರೋದಕ್ಕೆ ಅಲ್ಲಿನ ಸ್ಥಳೀಯರು ವಿಷಾಧ ವ್ಯಕ್ತಪಡಿಸಿದ್ದಾರೆ. ಸದ್ಯ ನಂದಿಗಿರಿಧಾಮ ಪೊಲೀಸರು ಆರೋಪಿ ನಿರ್ಮಲಮ್ಮ ನನ್ನು ಬಂಧಿಸಿದ್ದಾರೆ. ಆದರೆ  9 ತಿಂಗಳು ಹೆತ್ತು, ಹೊತ್ತು ಬೆಳಸಿದಂತಹ ಕಂದಮಮ್ಮನನ್ನ ತಾಯಿಯೇ ಕೊಲೆ ಮಾಡಿರುವುದು ಮಾತ್ರ ದುರಂತವೇ ಸರಿ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ