ಕಳೆದ ವರ್ಷ ಅಹಿತಕರ ಘಟನೆ ನಡೆದರೂ, ಈ ವರ್ಷವೇಕೆ ಹೊಸ ವರ್ಷಾಚರಣೆ?: ಸ್ವಾಮೀಜಿ

By Suvarna Web DeskFirst Published Dec 29, 2017, 6:18 PM IST
Highlights

- ಎಂ.ಜಿ.ರೋಡ್, ಬ್ರಿಗೇಡ್ ರಸ್ತೆಯಲ್ಲಿ ನಡೆದಿತ್ತು ಲೈಂಗಿಕ ಕಿರುಕುಳ

- ವಿಶ್ವಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು

- ಈ ಸಾರಿ ಹೊಸ ವರ್ಷಾಚರಣೆ ಏಕೆ?

ಬೆಂಗಳೂರು: 'ಕಳೆದ ಸಾರಿ ಹೊಸ ವರ್ಷಾಚರಣೆಯಿಂದ ಬೆಂಗಳೂರಿನ ಮಾನ ವಿಶ್ವ ಮಟ್ಟದಲ್ಲಿ ಹರಾಜು ಆದರೂ, ಈ ವರ್ಷ ಸರಕಾರ ಮತ್ತೆ ಹೊಸ ವರ್ಷವನ್ನು ಸ್ವಾಗತಿಸಲು ಅನುವು ಮಾಡಿಕೊಡುತ್ತಿದೆ. ಅಕಸ್ಮಾತ್ ಅಹಿತಕರ ಘಟನೆಗಳು ನಡದರೆ, ಸರಕಾರವೇ ನೇರ ಹೊಣೆ,' ಎಂದು ಕಾಳಿಮಠದ ಋಷಿಕುಮಾರ್ ಸ್ವಾಮೀಜಿ ಹೇಳಿದ್ದಾರೆ.

'ಕಳೆದ ಸಾರಿ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷದ ವೇಳೆ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ನಗರದ ಬಗ್ಗೆ ವಿಶ್ವ ಮಟ್ಟದಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತಾಗಿತ್ತು. ಆದರೂ, ಈ ವರ್ಷ ಭದ್ರತೆ ನೀಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸರಕಾರ ಮುಂದಾಗಿದೆ. ಮಹತ್ಮಾಗಾಂಧಿ ರಸ್ತೆಯಲ್ಲಿ ಪಬ್, ಬಾರ್‌ಗಳಿಗೆ ಅವಕಾಶ ಕೊಟ್ಟಿರೋದು ಸರಿಯಲ್ಲ,' ಎಂದು ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಜರಂಗದಳ ವಿರೋಧ


ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯಲ್ಲಿ ಡಿಜೆ ಡ್ಯಾನ್ಸ್ ಹಾಗೂ ಅಶ್ಲೀಲ ನೃತ್ಯವನ್ನು ಬ್ಯಾನ್ ಮಾಡುವಂತೆ ಭಜರಂಗದಳ ಒತ್ತಾಯಿಸಿದೆ.  ಹೊಟೇಲ್ ಹಾಗೂ ಪಬ್‌ಗಳಲ್ಲಿ ಡಿಸೆಂಬರ್ 31 ರಂದು ರಾತ್ರಿ ಯಾವುದೇ ರೀತಿಯ ಡಿಜೆ ಪಾರ್ಟಿ, ನೃತ್ಯ ಹಾಗೂ ಮಾದಕ ದ್ರವ್ಯಗಳನ್ನು ಸೇವಿಸಿ, ಪಾರ್ಟಿ ಮಾಡಲು ಅವಕಾಶ ಕಲ್ಪಿಸಬಾರದೆಂದು ಪೊಲೀಸ್ ಇಲಾಖೆ ಭಜರಂಗದಳ ಆಗ್ರಹಿಸಿದೆ.

ಹೊಸ ವರ್ಷವನ್ನು ಹೇಗೆ ಆಚರಿಸಬಾರದು?

click me!