Asianet Suvarna News Asianet Suvarna News

ಹೊಸವರ್ಷದಂದು ಡಿಜೆ, ಅಶ್ಲೀಲ ಡ್ಯಾನ್ಸ್ ಬ್ಯಾನ್ ಮಾಡಲು ಭಜರಂಗದಳ ಒತ್ತಾಯ

ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯಲ್ಲಿ ಡಿಜೆ ಡ್ಯಾನ್ಸ್ ಹಾಗೂ ಅಶ್ಲೀಲ ನೃತ್ಯವನ್ನು ಬ್ಯಾನ್ ಮಾಡುವಂತೆ ಭಜರಂಗದಳ ಒತ್ತಾಯಿಸಿದೆ.  ಹೊಟೇಲ್ ಹಾಗೂ ಪಬ್'ಗಳಲ್ಲಿ ಡಿಸೆಂಬರ್ 31 ರಂದು ರಾತ್ರಿ ಯಾವುದೇ ರೀತಿಯ ಡಿಜೆ ಪಾರ್ಟಿ, ನೃತ್ಯ ಹಾಗೂ ಮಾದಕ ದೃವ್ಯಗಳ ಮದ್ಯ ಪಾರ್ಟಿಗಳನ್ನು ಆಯೋಜನೆ ಮಾಡಲು ಅನುಮತಿ ನೀಡದಂತೆ ಪೊಲೀಸ್ ಇಲಾಖೆಗೆ ವಿಎಚ್.ಪಿ ಹಾಗೂ ಭಜರಂಗದಳ ಮನವಿ ಸಲ್ಲಿಸಿದೆ.

Bhajarangadal urges to ban DJ in New Year

ಮಂಗಳೂರು (ಡಿ.29): ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯಲ್ಲಿ ಡಿಜೆ ಡ್ಯಾನ್ಸ್ ಹಾಗೂ ಅಶ್ಲೀಲ ನೃತ್ಯವನ್ನು ಬ್ಯಾನ್ ಮಾಡುವಂತೆ ಭಜರಂಗದಳ ಒತ್ತಾಯಿಸಿದೆ.  ಹೊಟೇಲ್ ಹಾಗೂ ಪಬ್'ಗಳಲ್ಲಿ ಡಿಸೆಂಬರ್ 31 ರಂದು ರಾತ್ರಿ ಯಾವುದೇ ರೀತಿಯ ಡಿಜೆ ಪಾರ್ಟಿ, ನೃತ್ಯ ಹಾಗೂ ಮಾದಕ ದೃವ್ಯಗಳ ಮದ್ಯ ಪಾರ್ಟಿಗಳನ್ನು ಆಯೋಜನೆ ಮಾಡಲು ಅನುಮತಿ ನೀಡದಂತೆ ಪೊಲೀಸ್ ಇಲಾಖೆಗೆ ವಿಎಚ್.ಪಿ ಹಾಗೂ ಭಜರಂಗದಳ ಮನವಿ ಸಲ್ಲಿಸಿದೆ.

ಹೊಸವರ್ಷಾಚರಣೆ ಭಾರತೀಯ ಸಂಸ್ಕೃತಿ ಅಲ್ಲ ಬದಲಾಗಿ ಅದು ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುತ್ತಿರುವ ಸಂಘ-ಪರಿವಾರ ನಗರದ ಎಲ್ಲಾ ಬಾರ್  ಹಾಗೂ ಪಬ್'ಗಳನ್ನು 11 ಗಂಟೆಯ ಒಳಗಾಗಿ ಪೊಲೀಸರು ಬಂದ್ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದೆ. ಹೀಗೆ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸ್ವಾತಂತ್ರ್ಯಕ್ಕೆ ಸಂಘ-ಪರಿವಾರದ ವಿರೋಧ ಸಾರ್ವಜನಿಕ ವಲಯದಲ್ಲಿ ಚರ್ಚಗೆ ಗ್ರಾಸವಾಗಿದೆ.

ಕರಾವಳಿಯಲ್ಲಿ ಪಬ್ ದಾಳಿ ಹಾಗೂ ಹೋಂ ಸ್ಟೇ ದಾಳಿಯಂತ ನೈತಿಕ ಪೊಲೀಸ್'ಗಿರಿ ಘಟನೆಗಳ ಇತಿಹಾಸವಿದ್ದು ಈ ಬಾರಿ ಇಂತಹ ಯಾವುದೇ ಘಟನೆ ನಡೆಯದಂತೆ ಪೊಲೀಸರು ಭದ್ರತೆಯನ್ನು ನೀಡಬೇಕು ಎಂದು ಒತ್ತಾಯವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. 

Follow Us:
Download App:
  • android
  • ios