
ಕೋಲಾರ (ಡಿ. 20): ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಬೆಟ್ಟದಲ್ಲಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಲು ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಗಲಾಟೆಯಾಗಿದ್ದು, ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಪ್ರಭಾವಿ ವ್ಯಕ್ತಿ ನಾರಾಯಣ ಸ್ವಾಮಿ ವಿರುದ್ಧ ಕಾರ್ಮಿಕರು ತಿರುಗಿ ಬಿದ್ದಿದ್ದಾರೆ. ಈ ಹಿಂದೆ
ನಾರಾಯಣಸ್ವಾಮಿ ಹಲವು ವಷರ್ಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿಕೊಂಡಿದ್ದು, ಬೆಟ್ಟದಲ್ಲಿ ಯಾರು ಗಣಿಗಾರಿಕೆ ಮಾಡಬಾರದೆಂದು ತಾಕಿತ್ತು ಮಾಡಿದ್ದರು.
ಇದರಿಂದ ಕುಪಿತಗೊಂಡ ಗ್ರಾಮಸ್ಥರು ಹಲ್ಲೆ ಮುಂದಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಟೇಕಲ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.