ಜಿಲ್ಲೆಗೆ ಐಐಐಟಿ ಮಂಜೂರು ವಿರೋಧವೂ ಇಲ್ಲ, ಸ್ವಾಗತವೂ ಇಲ್ಲ

Published : Dec 15, 2016, 03:11 PM ISTUpdated : Apr 11, 2018, 12:56 PM IST
ಜಿಲ್ಲೆಗೆ ಐಐಐಟಿ ಮಂಜೂರು ವಿರೋಧವೂ ಇಲ್ಲ, ಸ್ವಾಗತವೂ ಇಲ್ಲ

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರ ರಾಯಚೂರಿಗೆ ಐಐಐಟಿ ಮಂಜೂರು ಮಾಡಿರುವುದಕ್ಕೆ ವಿರೋಧವೂ ಇಲ್ಲ, ಸ್ವಾಗತವೂ ಇಲ್ಲ ಎಂದು ಐಐಟಿ ಮಂಜೂರಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಅಭಿಪ್ರಾಯ ವ್ಯಕ್ತಪಡಿಸಿದರು. 

ರಾಯಚೂರು (ಡಿ.15): ಕೇಂದ್ರ ಬಿಜೆಪಿ ಸರ್ಕಾರ ರಾಯಚೂರಿಗೆ ಐಐಐಟಿ ಮಂಜೂರು ಮಾಡಿರುವುದಕ್ಕೆ ವಿರೋಧವೂ ಇಲ್ಲ, ಸ್ವಾಗತವೂ ಇಲ್ಲ ಎಂದು ಐಐಟಿ ಮಂಜೂರಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಅಭಿಪ್ರಾಯ ವ್ಯಕ್ತಪಡಿಸಿದರು. 

ಸ್ಥಳೀಯ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಡಾ.ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸಿನಂತೆ ರಾಯಚೂರಿಗೆ ಐಐಟಿ ನೀಡದೇ ವಂಚಿಸಿರುವ ಸರ್ಕಾರಗಳು ಇದೀಗ ಐಐಐಟಿ ನೀಡಿದ್ದು, ಐಐಟಿಯು ಕೇಂದ್ರ ಸರ್ಕಾರದ ಪೂರ್ಣ ಪ್ರಮಾಣದ ಸ್ವಯತ್ತ ಸಂಸ್ಥೆಯಾಗಿತ್ತು ಇದರಿಂದ ಇಲ್ಲಿನ ಜನರಿಗೆ ಏನು ಪ್ರಯೋಜನವಾಗುತ್ತದೆ ಎಂಬುವುದನ್ನು ಅವರೇ ಹೇಳಬೇಕು ಎಂದು ಲೇವಡಿ ಮಾಡಿದರು. 

ರಾಜಕೀಯ ಮುಖಂಡರ ಪ್ರಭಾವದಿಂದ ಹಾಗೂ ಸ್ವಾರ್ಥ ರಾಜಕಾರಣದಿಂದ ಐಐಟಿಯನ್ನು ಧಾರವಾಡಕ್ಕೆ ದಕ್ಕುವಂತೆ ಮಾಡಲಾಗಿದೆ. ರಾಯಚೂರಿಗೆ ಐಐಟಿ ತರುವಲ್ಲಿ ಜಿಲ್ಲೆಯ ಸಂಸದರು ಸೇರಿದಂತೆ ವಿಧಾನ ಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ರಾಜಕೀಯ ಇಚ್ಛಾಶಕ್ತಿಕೊರತೆಯಿಂದ ಸಂಪೂರ್ಣ ವಿಫಲರಗಿದ್ದಾರೆ ಎಂದು ಆರೋಪಿಸಿದರು.

ಐಐಟಿ ನೀಡದೇ ವಂಚಿಸಿದ್ದ ರಾಜ್ಯ ಸರ್ಕಾರ ಐಐಐಟಿ ನೀಡುವುದರ ಬಗ್ಗೆ ಮನವೋಲಿಸಿದಾಗ ಅದಕ್ಕೆ ಸಮಿತಿ ವಿರೋಧ ವ್ಯಕ್ತಪಡಿಸಿತ್ತು ಇದರ ನಡುವೆಯೂ ಬಿಜೆಪಿ ಶಕ್ತಿ ಕೇಂದ್ರದ ಮುಖಂಡರೊಂದಿಗೆ ಸ್ಥಳೀಯ ಮುಖಂಡರು ದೇಹಲಿವರೆಗೆ ತೆರಳಿ ಐಐಐಟಿ ಘೋಷಣಾ ಪತ್ರವನ್ನು ಪಡೆದುಕೊಂಡಿರುವುದು ಮತ್ತೊಮ್ಮೆ ಜಿಲ್ಲೆಗೆ ಅನ್ಯಾಯವೆಸಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಐಐಐಟಿ ಒಂದು ಖಾಸಗಿ ಮತ್ತು ಸಾರ್ವಜನಿಕರ ಸ್ವಯತ್ತ ಸಂಸ್ಥೆಯಾಗಿದ್ದು, ಶೇ.60 ರಷ್ಟು ಖಾಸಗಿ ಹಾಗೂ ಶೇ.40 ರಷ್ಟು ಸಾರ್ವಜನಕರರ ( ಪಿಪಿಪಿ-ಪ್ರೈವೇಟ್ ಪಬ್ಲಿಕ್ ಪಾರ್ಟನರ್‌ಶಿಪ್) ಸಹಭಾಗಿತ್ವದ ಸಂಸ್ಥೆಯಲ್ಲಿ ಎಂಜಿನೀಯರಿಂಗ್ ಉನ್ನತ ವ್ಯಸಾಂಗ ಬಿಟ್ಟರೇ ಬಹುತೇಕವಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಿಲ್ಲವೆಂದು ಹೇಳಿದರು.

ಐಐಟಿ ಕೈತಪ್ಪಿದರೂ ಏಮ್ಸ್ ಮಂಜೂರಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದ್ದು, ಏಮ್ಸ್ ಸ್ಥಾಪನೆಗೆ ಅಗತ್ಯಸವಲತ್ತುಗಳು ಕಲ್ಪಿಸಬೇಕು, ಜಿಲ್ಲೆಗೆ ಏಮ್ಸ್ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಿದ್ದು ಅದಕ್ಕೆ ಪರ್ಯಾಯವಾಗಿ ಸಮಿತಿ ನೇತೃತ್ವದಲ್ಲಿ ಜಿಲ್ಲೆ ಸಂಸದರು, ಸರ್ವಪಕ್ಷಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಸಂಘ- ಸಂಸ್ಥೆಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ