ಪ್ರಕರಣ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣಿಯರು

Published : May 22, 2017, 10:11 AM ISTUpdated : Apr 11, 2018, 12:53 PM IST
ಪ್ರಕರಣ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣಿಯರು

ಸಾರಾಂಶ

ಕೊಪ್ಪಳ ಜಿಲ್ಲೆಯ ಹಿರೇಬಗನಾಳ ಗ್ರಾಮದಲ್ಲಿ ಮತ್ತೆ ದಲಿತರ ಮೇಲೆ ದೌರ್ಜನ್ಯ ನಡೆದಿದೆ. ಸವರ್ಣಿಯರ ವಿರುದ್ಧ ದೂರು ಕೊಟ್ಟರು ಎನ್ನುವ ಕಾರಣಕ್ಕೆ ಗ್ರಾಮದಲ್ಲಿ ದಲಿತರಿಗೆ ಅಘೋಷಿತ ಬಹಿಷ್ಕಾರ ಹಾಕಿದ್ದಾರೆ. ತಮ್ಮ ಬಳಿ ಕೆಲಸ ಮಾಡ್ತಿದ್ದ ದಲಿತರನ್ನು ಕೆಲ್ಸದಿಂದ ತೆಗೆದು ಹಾಕಿದ್ದಾರೆ. ಇದಕ್ಕೆಲ್ಲ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಪಿಎಸ್ಐ ಜಯಪ್ರಕಾಶ್​ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಕೊಪ್ಪಳ(ಮೇ.22): ಕೊಪ್ಪಳ ಜಿಲ್ಲೆಯ ಹಿರೇಬಗನಾಳ ಗ್ರಾಮದಲ್ಲಿ ಮತ್ತೆ ದಲಿತರ ಮೇಲೆ ದೌರ್ಜನ್ಯ ನಡೆದಿದೆ. ಸವರ್ಣಿಯರ ವಿರುದ್ಧ ದೂರು ಕೊಟ್ಟರು ಎನ್ನುವ ಕಾರಣಕ್ಕೆ ಗ್ರಾಮದಲ್ಲಿ ದಲಿತರಿಗೆ ಅಘೋಷಿತ ಬಹಿಷ್ಕಾರ ಹಾಕಿದ್ದಾರೆ. ತಮ್ಮ ಬಳಿ ಕೆಲಸ ಮಾಡ್ತಿದ್ದ ದಲಿತರನ್ನು ಕೆಲ್ಸದಿಂದ ತೆಗೆದು ಹಾಕಿದ್ದಾರೆ. ಇದಕ್ಕೆಲ್ಲ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಪಿಎಸ್ಐ ಜಯಪ್ರಕಾಶ್​ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಕೊಪ್ಪಳ ಜಿಲ್ಲೆ ಹಿರೇಬಗನಾಳದಲ್ಲಿ ದಲಿತರ ಮೇಲೆ ಮತ್ತೆ ಸವರ್ಣಿಯರು ದೌರ್ಜನ್ಯ ನಡೆಸಿದ್ದಾರೆ. ದಲಿತರ ಮನೆಯಲ್ಲಿ ಮದುವೆ ನಡೆದಾಗ ಹೋಟೆಲ್ ಹಾಗೂ ಕ್ಷೌರ ಅಂಗಡಿಗಳನ್ನು ಮುಚ್ಚುತ್ತಿದ್ದ ಸವರ್ಣಿಯರ ಬಗ್ಗೆ ದೂರು ದಾಖಲಾಗಿತ್ತು. ಇದ್ರಿಂದ ಆಕ್ರೋಶಗೊಂಡಿರೋ ಸವರ್ಣಿಯರು, ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.

ಮೇ 10ರಂದು ಹಿರೇಬಗನಾಳ ಗ್ರಾಮದಲ್ಲಿ ದಲಿತರ ಮದುವೆ ಇದೇ ಎನ್ನುವ ಕಾರಣಕ್ಕೆ ಗ್ರಾಮದಲ್ಲಿ ಎಲ್ಲ ಹೋಟೆಲ್ ಹಾಗೂ ಕ್ಷೌರದಂಗಡಿ ಬಂದ್ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡ ದಲಿತ ಮುಖಂಡರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಕುರಿತು ಸುವರ್ಣನ್ಯೂಸ್​​ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ಬಳಿಕ ತಹಶೀಲ್ದಾರ್ ಗುರುಬಸವರಾಜ ಹಾಗೂ ಮುನಿರಾಬಾದ್ ಪಿ.ಎಸ್.ಐ ಜಯಪ್ರಕಾಶ್ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ರು. ನಂತ್ರ ಗ್ರಾಮದ ದಲಿತ ಮುಖಂಡ ಲಕ್ಷ್ಮಣ ಮಾದಿನೂರ ಏಳು ಜನರ ವಿರುದ್ಧ ಮುನಿರಾಬಾದ್ ಠಾಣೆಯಲ್ಲಿ ದೂರು ನೀಡಿದ್ದರು. ದಲಿತರು ದೂರು ನೀಡಿದ್ದಕ್ಕೆ ಕೋಪಗೊಂಡ ಸವರ್ಣಿಯರು ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ. ಈ ಎಲ್ಲ ಪ್ರಕರಣ ಹಿಂದೆ ಕೊಪ್ಪಳ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಬೆಂಗಾವಲಾಗಿ ನಿಂತಿದ್ದಾರೆ. ಜೊತೆಗೆ ಮುನಿರಾಬಾದ್ ಠಾಣೆ ಪಿಎಸ್ಐ ಜಯಪ್ರಕಾಶ್ ದೂರು ನೀಡಲು ಬಂದವರಿಗೆ ಧಮ್ಕಿ ಹಾಕಿದ್ದಾರೆಂಬ ಆರೋಪವೂ ಸಹ ಕೇಳಿ ಬಂದಿದೆ.

ಒಟ್ಟಿನಲ್ಲಿ ಇಷ್ಟೆಲ್ಲಾ ಘಟನೆ ಕಣ್ಣೆದರೂ ನಡೆಯುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ