
ಚಿತ್ರದುರ್ಗ (ಮೇ.20): ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸ, ಕಚೇರಿಗಳ ಮೇಲೆ 3ನೇ ದಿನವೂ ಐಟಿ ದಾಳಿ ಮುಂದುವರೆದಿದೆ. ಸಿದ್ದೇಶ್ವರ ಅವರಿಗೆ ಸೇರಿದ ಅಡಿಕೆ ಮಂಡಿ .ತೋಟ.ಮೂರು ಕಾರ್ಖಾನೆ. ಹಲವಾರು ಸಹಕಾರಿ ಬ್ಯಾಂಕ್'ಗಳು ಗುಟ್ಕಾ ಫ್ಯಾಕ್ಟರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಯಿತು.
35 ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು. ದೆಹಲಿ ಮತ್ತು ಬೆಂಗಳೂರಿನಿಂದ ಬಂದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿನ್ನೆಯೂ ಕೂಡಾ ತಡರಾತ್ರಿವರಗೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು.