ಬಿಜೆಪಿ ನಿರ್ನಾಮಕ್ಕೆ ಬಿಎಸ್‌ವೈ, ಈಶ್ವರಪ್ಪ ಜಿಲ್ಲೆಯಲ್ಲಿ ನಾಂದಿ ಹಾಡುತ್ತಿದ್ದಾರೆ; ತೀ.ನಾ. ಶ್ರೀನಿವಾಸ್

Published : Nov 09, 2016, 02:54 PM ISTUpdated : Apr 11, 2018, 01:00 PM IST
ಬಿಜೆಪಿ ನಿರ್ನಾಮಕ್ಕೆ ಬಿಎಸ್‌ವೈ, ಈಶ್ವರಪ್ಪ ಜಿಲ್ಲೆಯಲ್ಲಿ ನಾಂದಿ ಹಾಡುತ್ತಿದ್ದಾರೆ; ತೀ.ನಾ. ಶ್ರೀನಿವಾಸ್

ಸಾರಾಂಶ

ಬಿಜೆಪಿ ನಿರ್ನಾಮಕ್ಕೆ ಬಿಎಸ್‌ವೈ, ಈಶ್ವರಪ್ಪ ಜಿಲ್ಲೆಯಲ್ಲಿ ನಾಂದಿ ಹಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.

ಶಿವಮೊಗ್ಗ (ನ.09): ಬಿಜೆಪಿ ನಿರ್ನಾಮಕ್ಕೆ ಬಿಎಸ್‌ವೈ, ಈಶ್ವರಪ್ಪ ಜಿಲ್ಲೆಯಲ್ಲಿ ನಾಂದಿ ಹಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಟಿಪ್ಪು ಜಯಂತಿಯನ್ನು ವಿನಾಕಾರಣ ವಿರೋಧಿಸುತ್ತಾ ವಿಷ ಬೀಜ ಬಿತ್ತುತ್ತಾ ಜಿಲ್ಲೆಯಲ್ಲಿ ಅಶಾಂತ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಸಹಿಸಿಕೊಳ್ಳುವುದಿಲ್ಲ ಎಂದರು.

ಸಂಸದ ಬಿ.ಎಸ್.ಯಡಿಯೂರಪ್ಪನವರು ಈ ಹಿಂದೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಟಿಪ್ಪು ಒಬ್ಬ ದೇಶ ನಾಯಕ ಎಂದು ಹೇಳಿದ್ದರು. ಈಗ ಅವರಿಗೆ ಟಿಪ್ಪು ಬೇಡವಾಗಿದ್ದಾನೆ. ಇವರ ದ್ವಂದ್ವ ನಿಲುವು ಖಂಡನೀಯ. ಶೋಭಾ ಕರಂದ್ಲಾಜೆಯವರು ಕೀಳುಮಟ್ಟದ ಭಾಷೆಯನ್ನು ಪ್ರಯೋಗ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ನ್ಯಾಯಾಲಯದಂತಹ ತೀರ್ಪು ಕೊಡುತ್ತಾರೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇವರಿಗೆ ಇಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ 6 ತಾಲೂಕು ಸೇರಿದಂತೆ ರಾಜ್ಯದ 136 ತಾಲೂಕುಗಳಲ್ಲಿ ಬರಗಾಲ ಆವರಿಸಿದ್ದು, ಕೇಂದ್ರದ ನೆರವಿಗೆ ರಾಜ್ಯ ಮೊರೆಹೋಗಿದೆ. ಬಿಎಸ್‌ವೈ ಹಾಗೂ ಕೆ.ಎಸ್.ಈಶ್ವರಪ್ಪ ಮುಂತಾದ ಬಿಜೆಪಿ ನಾಯಕರು ಕೋಮು ಪ್ರಚೋದನೆ ಬಿಟ್ಟು ತಮ್ಮ ಪ್ರಭಾವ ಬೀರಿ ಹೆಚ್ಚಿನ ಅನುದಾನವನ್ನು ರಾಜ್ಯಕ್ಕೆ ಕೊಡಿಸುವ ಕೆಲಸ ಮಾಡಿಸಲಿ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರೈತರ ಆತ್ಮಹತ್ಯೆ ತಡೆಗೆ ವಿಶೇಷ ಅನುದಾನ ಬಿಡುಗಡೆಮಾಡಿತ್ತು. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಈ ಯೋಜನೆಗೆ ಮಹತ್ವ ನೀಡಿಲ್ಲ. ರಾಜ್ಯ ಬರಗಾಲದಿಂದ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಸಾಲ ಮನ್ನಾಮಾಡುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮನ್ನಾದ ಶೇ. 50 ರಷ್ಟನ್ನು ಕೇಂದ್ರ ಸರ್ಕಾರ ಭರಿಸುವಂತಿದ್ದರೆ ಉಳಿದ ಶೇ.50 ರಷ್ಟನ್ನು ರಾಜ್ಯ ನೀಡಲಿದೆ ಎನ್ನುವ ಭರವಸೆ ನೀಡಿದ್ದಾರೆ. ಬಿಜೆಪಿ ನಾಯಕರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡತಂದು ರೈತರ ಸಾಲ ಮನ್ನಾ ಆಗುವಂತೆ ಮಾಡಬೇಕೆಂದು ಒತ್ತಾಯಿಸಿ, ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಈಗಾಗಲೇ ಅವರ ಜೊತೆ ಮಾತನಾಡಿದ್ದೇವೆ. ಈ ಬಗ್ಗೆ ಯಾವ ಗೊಂದಲವೂ ಇಲ್ಲ ಎಂದು ತಿಳಿಸಿದರು.

ಮಾಜಿ ಸೂಡಾ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಕೆ.ಎಸ್.ಈಶ್ವರಪ್ಪನವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಇನ್ನು ಬಿಟ್ಟಿಲ್ಲ. ಶಿವಮೊಗ್ಗದ ಸಭೆಯೊಂದರಲ್ಲಿ ಟಿಪ್ಪು ಜಯಂತಿಗೆ ಸರ್ಕಾರ ರೂ.15 ಕೋಟಿ ಖರ್ಚು ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ಸ್ಪಷ್ಟವಾಗಿ ರೂ.69 ಲಕ್ಷದಲ್ಲಿ ಟಿಪ್ಪು ಜಯಂತಿ ಮಾಡಬೇಕು ಎಂದು ಹೇಳಿದೆ. ಆದರೆ ಈ ರೀತಿಯ ಸುಳ್ಳು ಹೇಳಿ ಜನರಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದ ಅವರು, ಎಲ್ಲ ಧರ್ಮದವರು ಸೇರಿ ಟಿಪ್ಪು ಜಯಂತಿಯನ್ನು ಆಚರಿಸಬೇಕೆ ವಿನಃ ಈ ರೀತಿಯ ಕೋಮು ಪ್ರಚೋದನೆ ಮಾಡಬಾರದು ಎಂದರು.

 

ಕೇಂದ್ರ ಸರ್ಕಾರ ₹೫೦೦ ಮತ್ತು ₹೧೦೦೦ ಮುಖ ಬೆಲೆ ನೋಟನ್ನು ಬ್ಯಾನ್ ಮಾಡಿರುವುದು ಒಳ್ಳೆಯದೇ. ಆದರೆ ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗುತ್ತದೆ, ಇದನ್ನು ತಪ್ಪಿಸಬೇಕು.

-ತೀ.ನಾ. ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ