ಗರುಡಾ ಮಾಲ್ ಮಾಲೀಕನ ವಿರುದ್ಧ ಎಸಿಬಿಯಲ್ಲಿ ದೂರು

By Suvarna Web DeskFirst Published Feb 23, 2018, 12:26 PM IST
Highlights

ಬಿಬಿಎಂಪಿ ಸ್ವತ್ತನ್ನು ಅಕ್ರಮವಾಗಿ ಅಡವಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಗರುಡಾ ಮಾಲ್ ಮಾಲೀಕ  ಉದಯ್ ಗರುಡಾಚಾರ್ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ಬಿಬಿಎಂಪಿ ಸ್ವತ್ತನ್ನು ಅಕ್ರಮವಾಗಿ ಅಡವಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಗರುಡಾ ಮಾಲ್ ಮಾಲೀಕ  ಉದಯ್ ಗರುಡಾಚಾರ್ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ.

ಭ್ರಷ್ಟಾಚಾರ ವಿರೋಧಿ ವೇದಿಕೆ ಕಾರ್ಯದರ್ಶಿ ಶ್ರೀನಿವಾಸ್ ಎಂಬುವವರು ದೂರು ದಾಖಲಿಸಿದ್ದಾರೆ.

ಗರುಡಾ ಮಾಲ್ ನಿರ್ಮಾಣವಾಗಿರುವ ಸ್ಥಳ ಬಿಬಿಎಂಪಿ ಸ್ವತ್ತು. ಬಿಬಿಎಂಪಿಯಿಂದ 30 ವರ್ಷ ಗುತ್ತಿಗೆ ಪಡೆದಿರುವ ಉದಯ್ ಗರುಡಾಚಾರ್  ಪಾಲಿಕೆ ಸ್ವತ್ತನ್ನು 100 ಕೋಟಿ ರೂ. ಸಾಲ ಪಡೆಯಲು ಬ್ಯಾಂಕ್‌ಗೆ ಅಡವಿಟ್ಟಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

750 ಕೋಟಿ ರೂ. ಮೌಲ್ಯದ 1,90,000 ಚದರ ಅಡಿ ಪಾಲಿಕೆ ಸ್ವತ್ತನ್ನು ಗರುಡಾಚಾರ್ ಗುತ್ತಿಗೆ ಪಡೆದಿದ್ದಾರೆ. ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರ ವಿರುದ್ದವೂ ಬಿಎಂಟಿಎಫ್‌ಗೆ ದೂರು

click me!