ನೋಟಿನ ರದ್ದಿಗೆ ಕೋಟೆ ನಾಡಿನ ಜನ ತತ್ತರ

Published : Nov 09, 2016, 04:00 PM ISTUpdated : Apr 11, 2018, 12:57 PM IST
ನೋಟಿನ ರದ್ದಿಗೆ ಕೋಟೆ ನಾಡಿನ ಜನ ತತ್ತರ

ಸಾರಾಂಶ

ಕೇಂದ್ರ ಸರ್ಕಾರ ಕಪ್ಪು ಹಣ ಪತ್ತೆ ಹಚ್ಚಲು ಮಂಗಳವಾರ ಮಧ್ಯ ರಾತ್ರಿಯಿಂದಲೇ ರೂ.500 ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಕೋಟೆ ನಾಡಿನ ಜನ ಬುಧವಾರ ತತ್ತರಿಸಿದರು.

ಚಿತ್ರದುರ್ಗ (ನ.09): ಕೇಂದ್ರ ಸರ್ಕಾರ ಕಪ್ಪು ಹಣ ಪತ್ತೆ ಹಚ್ಚಲು ಮಂಗಳವಾರ ಮಧ್ಯ ರಾತ್ರಿಯಿಂದಲೇ ರೂ.500 ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಕೋಟೆ ನಾಡಿನ ಜನ ಬುಧವಾರ ತತ್ತರಿಸಿದರು.

ವಿನಾಯಿತಿ ಇರುವ ಆಸ್ಪತ್ರೆ ಮತ್ತು ಔಷಧಿ ಅಂಗಡಿ ಸೇರಿದಂತೆ ಎಲ್ಲ ಕಡೆ ನಿಷೇಧಿತ ನೋಟುಗಳನ್ನು ಪಡೆಯಲು ಹಿಂಜರಿಯುತ್ತಿದ್ದರು. ಆಸ್ಪತ್ರೆಯಲ್ಲಿ ಎಕ್ಸ್ ರೇ ಸೇರಿದಂತೆ ಯಾವುದೇ ಪರೀಕ್ಷೆಗೆ ರೂ.500 ನೋಟು ನೀಡಿದರೆ ಚಿಲ್ಲರೆ ಇಲ್ಲದ ಕಾರಣ ಚೀಟಿಯ ಹಿಂಭಾಗ ಕೊಡಬೇಕಾದ ಹಣವನ್ನು ನಂತರ ಪಡೆಯಲು ಬಸ್‌ಗಳಲ್ಲಿ ಟಿಕೆಟ್ ಹಿಂಭಾಗ ಬರೆದು ಕೊಡುವಂತೆ ಬರೆದು ಕೊಡುತ್ತಿದ್ದುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು.

ಮಾರುಕಟ್ಟೆಗೆ ಬುಧವಾರ ಶೇಂಗಾ ಮತ್ತು ಕಡಲೆಯನ್ನು ತಂದ ರೈತರಿಗೆ ಚೀಲಗಳನ್ನು ಇಳಿಸುವ ಮೊದಲೇ ಇಷ್ಟು ದಿನ ಚಾಲ್ತಿಯಲ್ಲಿದ್ದ ನೋಟುಗಳನ್ನೇ ಪಡೆಯುವುದಾದರೆ ಇಳಿಸಿ ಇಲ್ಲವಾದರೆ ಇಳಿಸಬೇಡಿ ಎಂದು ವ್ಯಾಪಾರಿಗಳು ತಿಳಿಸಿದ್ದು ರೈತರಿಗೆ ಗೊಂದಲ ಉಂಟು ಮಾಡಿತ್ತು. ಆದರೆ, 2 ದಿನಗಳ ನಂತರ ಚಲಾವಣೆಗೆ ಬರುವ ನೋಟುಗಳನ್ನು ಪಡೆಯುವ ಚೀಟಿಗಳನ್ನು ನೀಡುತ್ತೇವೆ. ಆಗ ಹಣ ಪಡೆಯಬಹುದು ಎಂದು ಒಪ್ಪಿಕೊಳ್ಳುವ ರೈತರು ಮಾಲು ಇಳಿಸಬಹುದು ಎಂದಾಗ ವ್ಯಾಪಾರಿಗಳ ಮಾತಿನಂತ ಕಡಲೆ, ಶೇಂಗಾವನ್ನು ಇಳಿಸಿ ಸಂಜೆ ಮಾರುಕಟ್ಟೆ ಮುಗಿದಾಗ ಚೀಟಿ ಪಡೆದು ಹಿಂತಿರುಗಿದರು.

ಕೃಷಿಕರ ಜಮೀನಿನಲ್ಲಿ ಕೂಲಿ ಮಾಡಿದ ಜನರಿಗೆ ಆಯಾ ದಿನವೇ ಬಟವಾಡೆ ಮಾಡಬೇಕು. ಚಿಲ್ಲರೆ ನೋಟುಗಳು ಇಲ್ಲದೆ ಇರುವುದರಿಂದ ಶೇ. 10 ರಷ್ಟು ಹಣ ಬಿಟ್ಟು ಚಿಲ್ಲರೆ ಹಣವನ್ನುರೂ.100ರ ನೋಟುಗಳನ್ನು ಪಡೆದುಕೊಂಡು ಬಟವಾಡೆ ಮಾಡಿದ ಪ್ರಸಂಗಗಳು ನಡೆದವು. ಹೋಟೆಲ್‌ಗಳಲ್ಲಿ ಚಿಲ್ಲರೆ ಇಲ್ಲದೆ ಇರುವುದರಿಂದ ಚೀಟಿಯ ಮೇಲೆ ನಂತರದ ದಿನಗಳಲ್ಲಿ ಬಂದು ಚಿಲ್ಲರೆ ಪಡೆಯುವಂತೆ ತಿಳಿಸಿ ಪರಿಚಯ ಇರುವವರಿಗೆ ಚೀಟಿಯ ಹಿಂಭಾಗ ಹಿಂತಿರುಗಿಸಬೇಕಾದ ಮೊತ್ತ ಬರೆದು ಕಳುಹಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಪೆಟ್ರೋಲ್ ಬಂಕ್‌ಗಳಲ್ಲಿ ರೂ.500 ಕ್ಕೆ ಪೂರ್ತಿ ಪೆಟ್ರೋಲ್ ಹಾಕಿಸಿಕೊಂಡರೆ ಮಾತ್ರ ಹಾಕುತ್ತಿದ್ದರು. ರೂ.100, ರೂ.200 ಕ್ಕೆ ಪೆಟ್ರೋಲ್ ಹಾಕುವಂತೆ ಕೇಳಿದರೆ ಚಿಲ್ಲರೆ ನೀಡಲು ಕೇಳುತ್ತಿದ್ದರು. ಹಾಗಾಗಿ ಎಲ್ಲ ಭಾಗಗಳಲ್ಲಿ ಚಿಲ್ಲರೆ ನೋಟುಗಳು ಇಲ್ಲದೆ ಇರುವುದರಿಂದ ಜನ ವ್ಯಾಪಾರ ವಹಿವಾಟಿಗೆ ಕಾಲಿಡದೆ ಹಿಂದೇಟು ಹಾಕುತ್ತಿದ್ದರು.

ಬೆಳ್ಳಿ ಬಂಗಾರದ ಅಂಗಡಿಗಳು ಸೇರಿದಂತೆ ಎಲ್ಲ ಕಡೆ ಬುಧವಾರ ವ್ಯಾಪಾರ ಕಡಿಮೆಯಾಗಿದ್ದು ಕಂಡು ಬಂತು. ರಾತ್ರಿ ವೇಳೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಣಯಕ್ಕೆ ಬಂದಿದ್ದರಿಂದ ಯಾರಿಗೂ ಈ ರೀತಿಯ ಚಿಲ್ಲರೆ ಸಮಸ್ಯೆ ಉದ್ಭವಿಸುತ್ತದೆ ಎಂದು ಊಹಿಸಿರಲಿಲ್ಲ.

 

ಪ್ರತಿ ದಿನ ಈರುಳ್ಳಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರಿಗೆ ಬಟವಾಡೆ ಮಾಡಬೇಕಾಗಿತ್ತು. ಈ ದಿನ ಬಟವಾಡೆ ಮಾಡಲು ಚಿಲ್ಲರೆ ಇಲ್ಲದೆ ಇರುವುದರಿಂದ ಒಂದಷ್ಟು ಹಣ ಅವರಿಗೆ ಬಿಟ್ಟು ಚಿಲ್ಲರೆ ತೆಗೆದುಕೊಂಡು ಬಟವಾಡೆ ಮಾಡಿದೆ.

-ಮಹಾಂತೇಶ ರೆಡ್ಡಿ, ರೈತ

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ