ಆಟೋ ಚಾಲಕ ನಜೀಬ್ ಎಂಬಾತನಿಗೆ ಆಲ್ದೂರಿನ ಅಶ್ವಿನಿ ಮೆಡಿಕಲ್ ಮುಂಬಾಗದಲ್ಲಿ 68 ಸಾವಿರ ರುಪಾಯಿ ಸಿಕ್ಕಿದೆ. ಆ ಹಣವನ್ನು ನಜೀಬ್ ಪೊಲೀಸರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಮಗಳೂರು[ಮಾ.04]: ಆಟೋ ಚಾಲಕನೊಬ್ಬ ರಸ್ತೆಯಲ್ಲಿ ಸಿಕ್ಕಿದ್ದ 68 ಸಾವಿರ ರುಪಾಯಿಗಳನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ನಡೆದಿದೆ.
ಆಟೋ ಚಾಲಕ ನಜೀಬ್ ಎಂಬಾತನಿಗೆ ಆಲ್ದೂರಿನ ಅಶ್ವಿನಿ ಮೆಡಿಕಲ್ ಮುಂಬಾಗದಲ್ಲಿ 68 ಸಾವಿರ ರುಪಾಯಿ ಸಿಕ್ಕಿದೆ. ಆ ಹಣವನ್ನು ನಜೀಬ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಹಣ ಕಳೆದುಕೊಂಡು ಕಂಗಾಲಾಗಿದ್ದ ಹಿರಿಯಣ್ಣಗೌಡ ಎನ್ನುವವರಿಗೆ ಪೊಲೀಸರು ಠಾಣೆಗೆ ಕರೆಸಿಕೊಂಡ ಹಣ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿಕ್ಕ ವಸ್ತುಗಳನ್ನು ವಾಪಾಸ್ ನೀಡೋದೆ ಅಪರೂಪ. ಅಂತಹದ್ದರಲ್ಲಿ ನಜೀಬ್ ತಮಗೆ ಸಿಕ್ಕ 68 ಸಾವಿರ ರುಪಾಯಿ ಹಣವನ್ನು ಪೊಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆಯುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.