ಹುಬ್ಬಳ್ಳಿಯಲ್ಲಿ ಸಿದ್ಧಪ್ಪಜ್ಜನ ಜಾತ್ರೆ ಮೆರಗು. ಈ ಜಾತ್ರೆಯಲ್ಲಿ ಸಾಂಸ್ಕೃತಿಕ ಹಾಗೂ ಜಾನಪದ ಕಲೆ ಹಾಗೂ ಕ್ರೀಡೆಗಳಿಗೆ ಪ್ರೋತ್ಸಾಹವಂತೂ ಇದ್ದೆ ಇರುತ್ತದೆ. ಇಂತಹ ಮಹತ್ವದ ಆಚರಣೆಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಉಣಕಲ್ ಸಿದ್ಧಪ್ಪಜ್ಜನ ಜಾತ್ರೆ.
ವರದಿ: ಗುರುರಾಜ ಹೂಗಾರ, ಏಷ್ಯಾನೆಟ್ ಸುವರ್ಣನ್ಯೂಸ್
ಹುಬ್ಬಳ್ಳಿ(ಎ.7): ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆ ಅಂದರೆ ಅದಕ್ಕೆ ತನ್ನದೇ ಆದಂತಹ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಈ ಜಾತ್ರೆಯಲ್ಲಿ ಸಾಂಸ್ಕೃತಿಕ ಹಾಗೂ ಜಾನಪದ ಕಲೆ ಹಾಗೂ ಕ್ರೀಡೆಗಳಿಗೆ ಪ್ರೋತ್ಸಾಹವಂತೂ ಇದ್ದೆ ಇರುತ್ತದೆ. ಇಂತಹ ಮಹತ್ವದ ಆಚರಣೆಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಉಣಕಲ್ ಸಿದ್ಧಪ್ಪಜ್ಜನ ಜಾತ್ರೆ.
undefined
ಇಲ್ಲಿನ ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ ಅಂಗವಾಗಿ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಜಿದ್ದಾಜಿದ್ದಿಗೆ ಪ್ರೇಕ್ಷಕರು ಮನಸೋತರು. ಜಾತ್ರೆ ನಡೆಯುವಾಗ ಪ್ರತಿ ವರ್ಷವೂ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸ್ಪರ್ಧೆಗಳು ನಡೆದಿರಲಿಲ್ಲ. ಆದ್ದರಿಂದ ಈ ಬಾರಿ ನಡೆದ ಜಿದ್ದಾಜಿದ್ದಿಗೆ ಸಾವಿರಾರು ಕುಸ್ತಿ ಪ್ರೇಮಿಗಳು ಸಾಕ್ಷಿಯಾದರು. ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ನೆರೆರಾಜ್ಯಗಳ ಕುಸ್ತಿಪಟುಗಳು ಹಾಕಿದ ಪಟ್ಟುಗಳು ಗಮನ ಸೆಳೆದವು.
ನೆಲೆ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿ ಹಾವೇರಿಯ ನಲವಾಗಲು ಗ್ರಾಮಸ್ಥರು!
ಎಂಟು ವರ್ಷದ ಬಾಲಕರಿಂದ ಹಿಡಿದು, 45 ವರ್ಷ ವಯೋಮಾನದ ಪೈಲ್ವಾನರಿಗೆ ಸ್ಪರ್ಧೆಗಳು ನಡೆದವು. ಮೊದಲ ನಾಲ್ಕು ಸಂಖ್ಯೆಗಳ ಕುಸ್ತಿಯ ವೇಳೆ ಸ್ಪರ್ಧಿ ಹಾಗೂ ಪ್ರತಿಸ್ಪರ್ಧಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದಾಗ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಉಣಕಲ್ ಗ್ರಾಮದ ಹಿರಿಯ ಪೈಲ್ವಾನರು ಹಾಗು ಕುಸ್ತಿ ಪ್ರೇಮಿಗಳು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಪಂದ್ಯಗಳನ್ನು ಕಟ್ಟಿದರು. ಇದರಿಂದ ಪ್ರತಿ ಸ್ಪರ್ಧೆಗಳು ರಂಗೇರಿದ್ದವು.
ಮೊದಲ ಬಹುಮಾನ 21 ಸಾವಿರ, ದ್ವಿತೀಯ 15 ಸಾವಿರ, ಮೂರನೇ 10 ಸಾವಿರ ಮತ್ತು ನಾಲ್ಕನೇ 5,000 ವಿಜೇತರಿಗೆ ನೀಡಲಾಯಿತು. ಚನ್ನು ಪಾಟೀಲ, ಸಿದ್ದಪ್ಪಜ್ಜ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸದಸ್ಯ ರಾಜಣ್ಣ ಕೊರವಿ ಪಾಲ್ಗೊಂಡಿದ್ದು, ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಿದರು. ಮೊದಲ ಬಹುಮಾನವನ್ನು ಅಪ್ಪು ಪೈಲ್ವಾನ್ ಬೆಳಗಾವಿ ತಮ್ಮ ಮುಡಿಗೇರಿಸಿಕೊಂಡಿದ್ದು, ದ್ವೀತಿಯ ಬಹಮಾನಕ್ಕೆ ಸೆಣಸಾಡಿದ ಕಾರ್ತೀಕ್ ಇಂಗಳಗಿ ಹಾಗೂ ಪರಶುರಾಮ ಅವರ ನಡುವೆ ಸಮಕುಸ್ತಿಯಾಗಿತು. ಇನ್ನೂ ಮೂರನೇ ಬಹುಮಾನವನ್ನು ಸುನೀಲ್ ಪೈಲ್ವಾನ್ ಪಡೆದುಕೊಂಡರು. ನಾಲ್ಕನೇ ಬಹುಮಾನದಲ್ಲಿ ಜಟ್ಟಿಗಳಾದ ದೃವ ಕೋಟಿ ಉಣಕಲ್ ಮತ್ತು ಲಿಂಗರಾಜ ಬೊಮ್ಮನಹಳ್ಳಿ ನಡುವೆ ರೋಚಕ ಪಂದ್ಯ ಏರ್ಪಟ್ಟಿತು. ಆದರೆ ಫಲಿತಾಂಶ ಮಾತ್ರ ಸಮಕುಸ್ತಿಯಾಗಿ ಹೊರ ಬಿತ್ತು.
ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ Mandya ದಲ್ಲಿ ಅಭಿಯಾನ
ಒಟ್ಟಿನಲ್ಲಿ ಹುಬ್ಬಳ್ಳಿಯ ಸಿದ್ಧಪ್ಪಜ್ಜನ ಜಾತ್ರೆ ಸಂಭ್ರಮ ಕೋವಿಡ್ ನಂತರ ಹೊಸ ಮೆರಗನ್ನು ಪಡೆದುಕೊಂಡಿದ್ದು, ವಿಶಿಷ್ಟ ಹಾಗೂ ವಿನೂತನ ಆಚರಣೆಗೆ ಸಾಕ್ಷಿಯಾಗಿದೆ.